Ad imageAd image
- Advertisement -  - Advertisement -  - Advertisement - 

ಜೆ ಈ ಸಂಸ್ಥೆ ರಾಜ್ಯದಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆ: ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ.

Bharath Vaibhav
ಜೆ ಈ ಸಂಸ್ಥೆ ರಾಜ್ಯದಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆ: ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ.
WhatsApp Group Join Now
Telegram Group Join Now

ಅಥಣಿ :-ರಾಜ್ಯದ ಯಾವುದೇ ಮೂಲೆಗೆ ಹೋದರು ನಾನು ಜೆ ಎ ಕಾಲೇಜಿನ ಕಲಿತಿರುವೆ ಎಂದಾಗ ಎಲ್ಲರೂ ಅಭಿಮಾನ ಪಡುತ್ತಾರೆ ನನ್ನ ವಿದ್ಯಾಸಂಸ್ಥೆ ಇಂದು ಇಷ್ಟೊಂದು ಪ್ರಗತಿಯನ್ನು ಹೊಂದಿದ್ದು ಸಂತಸದ ಸಂಗತಿ ಸುಸಜ್ಜಿತವಾದ ವರ್ಗ ಕೋಣೆಗಳು, ಉತ್ತಮ ಪ್ರಾಧ್ಯಾಪಕರು ಒಳ್ಳೆಯ ಆಡಳಿತ ಮಂಡಳಿ ಇವೆಲ್ಲವುಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಾಯಕ ಹೀಗಾಗಿ ನನಗೆ ವಿದ್ಯೆ ನೀಡಿದ ಸಂಸ್ಥೆ ರಾಜ್ಯದಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆ ಎನಿಸಿದೆ.

ಅಥಣಿಯ ಶತಮಾನ ಕಂಡ ಜೆ ಇ ಸಂಸ್ಥೆಯ ಜೆ ಎ ಪ ಪೂ ಮಹಾವಿದ್ಯಾಲಯದಲ್ಲಿ ಹೊಸ ವರ್ಗ ಕೋಣೆಗಳ ಹಾಗೂ ನೂತನ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಹೇಳಿದರು. ನಾನು ಜೆ ಎ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಎಂಬ ಹೆಮ್ಮೆ ನನಗಿದೆ ಎಂದು ಅಥಣಿಯ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಶ್ರೀ ಪ್ರಶಾಂತ್ ಗೌರಾಣಿಯವರು ಹೇಳಿದರು. ಹೈಟೆಕ್‌ ಶೌಚಾಲಯಗಳ ಅಷ್ಟೇ ಇದ್ದರೆ ಸಾಲದು ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು. ನಮ್ಮ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾನಿಲಯದ ಮಟ್ಟಕ್ಕೆ ಬೆಳೆಯಬೇಕು ಎಂದು

ನಿಕಟಪೂರ್ವ ಕಾರ್ಯಾಧ್ಯಕ್ಷರು, ಸಂಸ್ಕೃತಿ ಚಿಂತಕರು ಆದ ಶ್ರೀ ಅರವಿಂದರಾವ ದೇಶಪಾಂಡೆ ಹೇಳಿದರು. ಕಾರ್ಯಧ್ಯಕ್ಷರಾದ ಡಾ|| ರಾಮ ಬಿ ಕುಲಕರ್ಣಿಯವರು ಶತಮಾನ ದಾಟಿದ ನಮ್ಮ ಸಂಸ್ಥೆಯ ಈ ವರ್ಗಕೋಣೆಗಳ ಸಮುಚ್ಚಯಕ್ಕೆ ‘centanary wing’ ಎಂದು ಹೆಸರಿಡುವ ಆಶೆಯನ್ನು ವ್ಯಕ್ತಪಡಿಸಿದರು. ಬೆಳವಣಿಗೆ ಪ್ರಗತಿಯ ಸಂಕೇತ ನಮ್ಮ

ಸಂಸ್ಥೆಯಲ್ಲಿ ಇಂದು ಕಂಪ್ಯೂಟ‌ರ್ ಹಾಗೂ ಸಂಖ್ಯಾಶಾಸ್ತ್ರ ವಿಭಾಗಗಳನ್ನು ಪರಿಚಯಿಸಿದ್ದೇವೆ ಅವುಗಳಿಗಾಗಿ ಹೊಸ ವರ್ಗ ಕೋಣೆಗಳ ಅವಶ್ಯಕತೆ ಇತ್ತು, ಹೀಗಾಗಿ ನಾವು ಹೊಸವರ್ಗ ಕೋಣೆಗಳನ್ನು ಇಂದು ವಿದ್ಯಾರ್ಥಿಗಳಿಗೆ ಅರ್ಪಿಸುತ್ತಿದ್ದೇವೆ. ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂದೀಪ್ ಎಸ್ ಸಂಗೋರಾಮ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಹೇಳಿದರು. ಪ್ರಾಚಾರ್ಯರಾದ ಶ್ರೀ ಎಮ್ ಪಿ ಮೇತ್ರಿ ಸ್ವಾಗತಿಸಿದರು.

ಬಿ ಎಸ್ ಲೋಕೂರ ವಂದಿಸಿದರು. ಡಾ. ಪಿ ಹುಲಗಬಾಳಿ ಮತ್ತು ಎಮ್ ಪಿ ಚಿಂಚಣೆ ನಿರೂಪಿಸಿದರು. ಎ. ಅರ್ ಪಾಟೀಲ ಎನ್ ಚಂದ್ರಶೇಖರ, ಡಿ ಜೆ ಸಿಂಗೆ, ಎಸ್ ವಿ ದಾಸರೆಡ್ಡಿ, ಸಿ ಟಿ ಶಿವಪ್ರಕಾಶ ಹಾಗೂ ಆಡಳಿತ ಮಂಡಳಿ, ಸಾಮಾನ್ಯ ಸಭೆಯ ಸದಸ್ಯರು ಉಪಸ್ಥಿತರಿದ್ದರು.ಸಂಸ್ಥೆಯಲ್ಲಿ ಇಂದು ಕಂಪ್ಯೂಟರ್ ಹಾಗೂ ಸಂಖ್ಯಾಶಾಸ್ತ್ರ ವಿಭಾಗಗಳನ್ನು ಪರಿಚಯಿಸಿದ್ದೇವೆ ಅವುಗಳಿಗಾಗಿ ಹೊಸ ವರ್ಗ ಕೋಣೆಗಳ ಅವಶ್ಯಕತೆ ಇತ್ತು, ಹೀಗಾಗಿ ನಾವು ಹೊಸವರ್ಗ ಕೋಣೆಗಳನ್ನು ಇಂದು ವಿದ್ಯಾರ್ಥಿಗಳಿಗೆ ಅರ್ಪಿಸುತ್ತಿದ್ದೇವೆ.

ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂದೀಪ್ ಎಸ್‌ ಸಂಗೋರಾಮ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಹೇಳಿದರು. ಪ್ರಾಚಾರ್ಯರಾದ ಶ್ರೀ ಎಮ್ ಪಿ ಮೇತ್ರಿ ಸ್ವಾಗತಿಸಿದರು. ಬಿ ಎಸ್ ಲೋಕೂರ ವಂದಿಸಿದರು. ಡಾ. ಪಿ ಎಮ್ ಹುಲಗಬಾಳಿ ಮತ್ತು ಎಮ್ ಪಿ ಚಿಂಚಣೆ ನಿರೂಪಿಸಿದರು. ಎಸ್ ಅರ್ ಪಾಟೀಲ ಎನ್ ಚಂದ್ರಶೇಖರ, ಡಿ ಜೆ ಸಿಂಗೆ, ಎಸ್ ವಿ ದಾಸರೆಡ್ಡಿ, ಸಿ ಟಿ ಶಿವಪ್ರಕಾಶ ಹಾಗೂ ಆಡಳಿತ ಮಂಡಳಿ, ಸಾಮಾನ್ಯ ಸಭೆಯ ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!