ಚಾಮರಾಜನಗರ :ಜಿಲ್ಲಾ ಪತ್ರಕರ್ತರ ಭವನದಲ್ಲಿ ಯಳಂದೂರು ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಪತ್ರಿಕಾಗೋಷ್ಟಿಯನ್ನು ನಡೆಸಲಾಯಿತು.
ಅಧ್ಯಕ್ಷರಾದ ವೈ ಬಿ ಮಹೇಶ್ ರವರು ಮಾತನಾಡಿ ಜೆ ಯೋಗೇಶ್ ಷೇರು ಹಣವನ್ನು ದುರುಪಯೋಗ ಮಾಡಿಕೊಂಡಿದ್ದರೆ ಎಂದು ಪತ್ರಿಕೆಯಲ್ಲಿ ನಮ್ಮ ಸಂಘದ ಮೇಲೆ ದಾಖಲಾತಿ ಇಲ್ಲದೆ ದೂರು ಮಾಡಿದರೆ ಇದು ಖಂಡನೀಯ ಎಂದು ತಿಳಿಸಿದರು.
ನಿರ್ದೇಶಕರಾದ ಪಿ ಮಾದೇಶ್ ರವರು ಮಾತನಾಡಿ ನಮ್ಮ ಯಳಂದೂರು ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕೆ 49ವರ್ಷಗಳ ಇತಿಹಾಸವಿದೆ ಇಲ್ಲಿಯವರೆಗೆ ಯಾವುದೇ ತಪ್ಪುಗಳು ಇಲ್ಲದೆ ನೆಡೆದುಕೊಂಡು ಬಂದಿದ್ದೆ, ಆದರೆ ಜೆ ಯೋಗೇಶ್ ರವರ 22ನೇತಾರೀಕು ನೆಡೆದ ಸಂಘದ ವಾರ್ಷಿಕ ಸಭೆಯಲ್ಲಿ ಪ್ರಶ್ನೆಯನ್ನು ಕೇಳುತ್ತಾರೆ ಅದಕೆ ಸಭೆಯಲ್ಲಿ ಅವರಿಗೆ ಉತ್ತರ ನೀಡಿದ್ದೇವೆ,
ಆದರೂ ಅವರು ಏಕ ಏಕಿಯಾಗಿ ಯಾವುದೇ ದಾಖಲಾತಿ ಇಲ್ಲದೆ ಪತ್ರಿಕೆಗಳಲ್ಲಿ ಸಂಘದ ಮೇಲೆ ಷೇರು ಹಣವನ್ನು ದುರುಪಯೋಗ ಮಾಡಿಕೊಂಡಿದ್ದರೆ ಎಂದು ಹೇಳಿದರೆ ಇದು ಅವರ ಘನತೆಗೆ ತಕ್ಕದಲ್ಲ ನಮ್ಮ ಸಂಘದಲ್ಲಿ ಯಾವುದೇ ಹಣ ದುರುಪಯೋಗವಾಗಿಲ್ಲ ನಮ್ಮ ಅತ್ತಿರ ದಾಖಲಾತಿಗಳಿವೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ವೈ ಬಿ ಮಹೇಶ್, ನಿರ್ದೇಶಕರಾದ ಪಿ ಮಾದೇಶ್, ಲೋಕೇಶ್, ದೊರೆ, ಮಲ್ಲು, ಜಯರಾಮು,ಸಿದ್ದನಾಯಕ, ರಾಜಶೇಖರ್, ರಾಜಮ್ಮ,ಹಾಗೂ ಕಾರ್ಯದರ್ಶಿ ಪುಟ್ಟರಾಜು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




