Ad imageAd image

ಸಾಯಿ ಸುದರ್ಶನ್ ಮಿಂಚಿನ ಬ್ಯಾಟಿಂಗ್: ಗುಜರಾತ್ ಟೈಟನ್ಸ್ ಗೆ ಜಯಭೇರಿ

Bharath Vaibhav
ಸಾಯಿ ಸುದರ್ಶನ್ ಮಿಂಚಿನ ಬ್ಯಾಟಿಂಗ್: ಗುಜರಾತ್ ಟೈಟನ್ಸ್ ಗೆ ಜಯಭೇರಿ
WhatsApp Group Join Now
Telegram Group Join Now

ಅಹ್ಮದಾಬಾದ: ಯುವ ಬ್ಯಾಟ್ಸಮನ್ ಸಾಯಿ ಸುದರ್ಶನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 58 ರನ್ ಗಳಿಂದ ಗೆದ್ದುಕೊಂಡಿತು.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20  ಓವರುಗಳಲ್ಲಿ 6 ವಿಕೆಟ್ ಗೆ 217 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ರಾಜಸ್ತಾನ ರಾಯಲ್ಸ್ ತಂಡ 19.2 ಓವರುಗಳಲ್ಲಿ 159 ರನ್ ಗೆ ಆಲೌಟ್ ಆಗಿ ಪರಾಭವಗೊಂಡಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 8 ಅಂಕ ಪಡೆಯುವ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಸ್ಕೋರ್ ವಿವರ

ಗುಜರಾತ್ ಟೈಟನ್ಸ್  20  ಓವರುಗಳಲ್ಲಿ 6 ವಿಕೆಟ್ ಗೆ 217

ಸಾಯಿ ಸುದರ್ಶನ 82  (53 ಎಸೆತ, 8 ಬೌಂಡರಿ, 3 ಸಿಕ್ಸರ್), ಜೋಶ್ ಬಟ್ಲರ್ 36 ( 25 ಎಸೆತ, 5 ಬೌಂಡರಿ)

ಶಾರುಖ್ ಖಾನ್ 36 ( 20 ಎಸೆತ, 4 ಬೌಂಡರಿ, 2 ಸಿಕ್ಸರ್), ರಾಹುಲ್ ತೆವಾಟಿಯಾ 24 ( 12 ಎಸೆತ, 2 ಬೌಂಡರಿ, 2 ಸಿಕ್ಸರ್) ತುಷಾರ ದೇಶಪಾಂಡೆ 53 ಕ್ಕೆ 2)

ರಾಜಸ್ತಾನ ರಾಯಲ್ಸ್ 19.2 ಓವರುಗಳಲ್ಲಿ 159

ಸಿಮ್ರಾನ್ ಹೆಟ್ಮೇರ್ 53 ( 32 ಎಸೆತ, 4 ಬೌಂಡರಿ, 3 ಸಿಕ್ಸರ್), ಸಂಜು  ಸ್ಯಾಮ್ಸನ್ 41 ( 28 ಎಸೆತ, 4 ಬೌಂಡರಿ 2 ಸಿಕ್ಸರ್ ) ಪ್ರಸಿದ್ದ ಕೃಷ್ಣ 24 ಕ್ಕೆ 3), ಸಾಯಿ ಕಿಶೋರ್ 20 ಕ್ಕೆ 2)     

                                                                                                                           —-ಪಂದ್ಯ ಶ್ರೇಷ್ಠ: ಸಾಯಿ ಸುದರ್ಶನ್

WhatsApp Group Join Now
Telegram Group Join Now
Share This Article
error: Content is protected !!