ತುರುವೇಕೆರೆ: ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ತಾಲ್ಲೂಕು ಬ್ರಾಹ್ಮಣ ಸಭಾ, ಶ್ರೀ ಲಲಿತಾ ವಿಪ್ರ ಮಹಿಳಾ ಮಂಡಲಿ, ವಿಪ್ರ ನೌಕರರ ಸಂಘ, ವಿಪ್ರ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರದೊಂದಿಗೆ ಶೋಭಾಯಾತ್ರೆ ನಡೆಸಲಾಯಿತು.
ಪಟ್ಟಣದ ಗಾಯತ್ರಿ ಭವನದಿಂದ ಸಂಜೆ 6 ಗಂಟೆಗೆ ಹೊರಟ ಯಾತ್ರೆಯು ಬ್ರಾಹ್ಮಣರ ಬೀದಿ, ಶ್ರೀರಾಮಮಂದಿರ ರಸ್ತೆ, ಬೇಟೇರಾಯಸ್ವಾಮಿ ದೇವಸ್ಥಾನ ರಸ್ತೆ, ತಾಲೂಕು ಕಛೇರಿ ವೃತ್ತ, ಎಸ್.ಬಿ.ಐ ರಸ್ತೆ, ವೈ.ಟಿ.ರಸ್ತೆ, ಹೊಸ ರಸ್ತೆಯ ಮೂಲಕ ಯಾತ್ರೆ ಸಂಚರಿಸಿತು. ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ, ಆದಿಗುರು ಶಂಕರಾಚಾರ್ಯರಿಗೆ ಜೈ, ಶಾರದಾಮಾತೆಗೆ ಜೈ ಎಂಬ ಘೋಷಣೆಗಳೊಂದಿಗೆ ನೂರಾರು ಬ್ರಾಹ್ಮಣ ಸುವಾಸಿನಿಯರು, ಮಕ್ಕಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಶೋಭಾಯಾತ್ರೆಯಲ್ಲಿ ಮಹಿಳೆಯರು ಕೋಲಾಟ, ಶಂಕರ ಭಜನೆ ಮಾಡುತ್ತಾ ಸಾಗಿದರೆ, ಪುಟಾಣಿ ಮಕ್ಕಳು ವಿಶೇಷವಾಗಿ ಶಾರದಾ ಮಾತೆ, ಶಂಕರಾಚಾರ್ಯರ ವೇಷಭೂಷಣಗಳನ್ನು ತೊಟ್ಟು ನಾಗರೀಕರ ಗಮನಸೆಳೆದರು.
ಶಂಕರರಿಗೆ ಸಂಬಂಧಿಸಿದ ವಿವಿಧ ವೇಷಭೂಷಣ ತೊಟ್ಟ ಪುಟಾಣಿ ಮಕ್ಕಳಿಗೆ ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಬಹುಮಾನ ವಿತರಿಸಲಾಯಿತು. ಶೋಭಾಯಾತ್ರೆಯ ನಂತರ ರಾತ್ರಿ ಬ್ರಾಹ್ಮಣ ಸುವಾಸಿನಿಯರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಸತ್ಯನಾರಾಯಣ್, ಮಾಜಿ ಅಧ್ಯಕ್ಷರಾದ ಅಮಾನಿಕೆರೆ ಮಂಜುನಾಥ್, ಟಿ.ವಿ.ರಂಗನಾಥ್, ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಶ್ರೀನಿವಾಸ್(ಪ್ರೆಸ್), ಗಿರೀಶ್ ಕೆ. ಭಟ್, ಶ್ರೀನಿವಾಸ್(ಬ್ಯಾಂಕ್), ಕೆ.ಸತ್ಯನಾರಾಯಣ್, ಗುರುಪ್ರಸಾದ್ (ಗುಂಡ), ಪ್ರಾಣೇಶ್, ನಂಜುಂಡಸ್ವಾಮಿ, ಟಿ.ಎನ್.ರಘು, ಟಿ.ಎಸ್.ರಾಘವೇಂದ್ರ, ರಾಮಚಂದ್ರ (ರೈಲ್ವೆ), ವಿಪ್ರ ಮಹಿಳಾ ಅಧ್ಯಕ್ಷೆ ಉಮಾಮಂಜುನಾಥ್, ಲಕ್ಷ್ಮೀಹಿರಿಯಣ್ಣಯ್ಯ, ಭಾರತಿರವಿಶಂಕರ್, ತೇಜಸ್ವಿನಿಶೇಷಾದ್ರಿ, ಉಷಾಶ್ರೀನಿವಾಸ್, ಸುಷ್ಮಕೃಷ್ಣಚೈತನ್ಯ, ಶೋಭಾನರಸಿಂಹಪ್ರಸಾದ್, ಲೀಲಾವಿಶ್ವನಾಥ್, ಮೀನಾಶ್ರೀನಿವಾಸ್, ಸುಜಾತನಂಜುಂಡಸ್ವಾಮಿ, ಕುಸುಮಸತ್ಯನಾರಾಯಣ್, ಲಲಿತಾರಾಮಚಂದ್ರ, ಪ್ರಮೋದ್ ಸೇರಿದಂತೆ ನೂರಾರು ವಿಪ್ರ ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




