ಕೇಂದ್ರ ಆರ್ಥಿಕ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರು ಸನ್ ೨೦೨೫-೨೬ ಸಾಲಿಗಾಗಿ ಸದನದಲ್ಲಿ ಮಂಡಿಸಿದ ಬಜೆಟ್ ಸಮಾಜ ಎಲ್ಲ ವರ್ಗದ ವಿಶೇಷವಾಗಿ ಬಡ ಜನರ ಹಾಗೂ ರೈತರ ಏಳಿಗೆಗೆ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಗೊಂಡು ರೂಪಿಸಲಾದ ಒಂದು ಐತಿಹಾಸಿಕ ಸ್ವಾಗತರ್ಹ ಬಜೆಟ್ ಇದಾಗಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳು ಶ್ರೀ ಜಗದೀಶ ಶೆಟ್ಟರ ತಿಳಿಸುತ್ತಾ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.
ಮಧ್ಯಮ ವರ್ಗದ ಜನರಿಗೆ 12 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ. ಅದರಂತೆ ರೈತರಿಗಾಗಿ
ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ ಹಾಗೂ ದೇಶದ 100 ಜಿಲ್ಲೆಗಳಲ್ಲಿ ಕಡಿಮೆ ಇಳುವರಿ ಹೊಂದಿದ ರೈತರ ಸಬಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ ಮುಂದುವರೆದು ಪಂಚಾಯಿತಿ ಮಟ್ಟದಲ್ಲಿ ರೈತರ ಧಾನ್ಯ ಸಂಸ್ಕರಣೆಗೆ ಉತ್ತೇಜನ, ರಾಜ್ಯಗಳ ಸಹಭಾಗಿತ್ವದಲ್ಲಿ ಈ ಯೋಜನೆಯ ಅನುಷ್ಠಾನ ಗೊಳ್ಳಲಿದೆ ಅದರಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ 1.7 ಕೋಟಿ ರೈತರಿಗೆ ಅನುಕೂಲವಾಗಲಿದ್ದು 3 ರಿಂದ 5 ಲಕ್ಷ ರೂ. ಸಾಲದ ಮಿತಿ ಏರಿಕೆಗುಂಡಿದೆ, 1 ಕೋಟಿ ಸಣ್ಣ ಉದ್ದಿಮೆಗಳಿಂದ 7.5 ಕೋಟಿ ಜನರಿಗೆ ಉದ್ಯೋಗ ಸೃಷ್ಟಿ.
ಅತಿ ಸಣ್ಣ ಉದ್ಯಮಿಗಳಿಗೆ ಪ್ರತ್ಯೇಕ ಕ್ರೆಡಿಟ್ ಕಾರ್ಡ್ ಸೌಲಭ್ಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 2 ಕೋಟಿ ರೂ. ವರೆಗೆ ಸಾಲಕ್ಕೆ ಅನುದಾನ ದೊರಕಲಿದೆ. ಸಕ್ಷಮ ಅಂಗನವಾಡಿ 2.0 ಯೋಜನೆ ರೂಪಗೊಂಡಿದ್ದು, ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ಪೂರೈಕೆಯಾಗಲಿದೆ. 50 ಕೋಟಿ ಸರ್ಕಾರಿ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್, ಸರ್ಕಾರಿ ಪ್ರೌಢಶಾಲೆಗಳಿಗೆ ಇಂಟರ್ನೆಟ್ ಸೌಲಭ್ಯ, 10 ವರ್ಷಗಳಲ್ಲಿ IIT ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣ ಗೊಳ್ಳಲಿದೆ, ಮೆಡಿಕಲ್ ಸೀಟುಗಳ ಸಂಖ್ಯೆ 130 % ಹೆಚ್ಚಳ ಮಾಡಲಾಗಿದೆ, ಬಡವರ ಅನುಕೂಲಕ್ಕಾಗಿ ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಆರಂಭ ಹಾಗೂ 36 ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಔಷಧಿಗಳ ಮೇಲಿನ ಆಮದು ಸುಂಕ ರದ್ದುಗೊಳಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ. ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ
ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಜಲ್ ಜೀವನ್ ಯೋಜನೆ 2028ರ ವರೆಗೆ ವಿಸ್ತರಣೆ ಹಾಗೂ ನಗರಾಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಲಾಗಿದೆ. ಉಡಾನ್ ಯೋಜನೆಯಿಂದ 220 ಹೊಸ ಊರುಗಳಿಗೆ ವಿಮಾನಯಾನ ಸೌಲಭ್ಯ ಒದಗಿಸಿದ್ದು ಮತ್ತು ಇದರ ಕಾಲಮಿತಿಯನ್ನು ಮೂರು ವರ್ಷದಿಂದ ಹೆಚ್ಚಿನ ಅವಧಿಗೆ ವಿಸ್ತರಿಸಲಾಗಿದೆ. ಪ್ರವಾಸೋದ್ಯಮ ಬೆಳವಣಿಗೆಗೆ ರಾಜ್ಯಗಳ ಸಹಯೋಗದಲ್ಲಿ 50 ಸಾವಿರ ಪ್ರವಾಸ ತಾಣಗಳ ಅಭಿವೃದ್ಧಿ ಮಾಡುತ್ತಿರುವುದು ವಿಶೇಷ. ಶೈಕ್ಷಣಿಕ ಸಾಲದ ಮೇಲಿನ ತೆರಿಗೆ ಇಳಿಕೆ.
ಇನ್ನು ಒಟ್ಟಾರೆ ಈ ಬಜೆಟ್ ಭಾರತ ದೇಶವನ್ನು ಸರ್ವಾಂಗಿನ ಅಭಿವೃದ್ಧಿಯತ್ತ ಕರೆದೊಯ್ಯಲು ಅನುಕೂಲಕರವಾಗಲಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಶ್ರೀ ಜಗದೀಶ್ ಶೆಟ್ಟರ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉತ್ತಮ ಬಜೆಟ್ ಮಂಡಿಸಿರುವುದಕ್ಕೆ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಹಾಗೂ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮರನ್ನು ಅಭಿನಂದಿಸಿದ್ದಾರೆ.
ವರದಿ : ಪ್ರತೀಕ ಚಿಟಗಿ