Ad imageAd image

ನಿರ್ಮಾಣ ಹಂತದಲ್ಲಿರುವ ರಸ್ತೆ ಮೇಲು ಸೇತುವೆ ಎರಡನೆಯ ಲೇನ ಕಾಮಗಾರಿ ಹಾಲಿ ಸ್ಥಗಿತಗೊಂಡಿರುವ ಬಗ್ಗೆ ವಿಷಯ ತಿಳಿಯಲು ಸ್ಥಳಕ್ಕೆ ಬೆಟ್ಟಿನಿಡಿದ ಜಗದೀಶ ಶೆಟ್ಟರ

Bharath Vaibhav
ನಿರ್ಮಾಣ ಹಂತದಲ್ಲಿರುವ ರಸ್ತೆ ಮೇಲು ಸೇತುವೆ ಎರಡನೆಯ ಲೇನ ಕಾಮಗಾರಿ ಹಾಲಿ ಸ್ಥಗಿತಗೊಂಡಿರುವ ಬಗ್ಗೆ ವಿಷಯ ತಿಳಿಯಲು ಸ್ಥಳಕ್ಕೆ ಬೆಟ್ಟಿನಿಡಿದ ಜಗದೀಶ ಶೆಟ್ಟರ
WhatsApp Group Join Now
Telegram Group Join Now

ಬೆಳಗಾವಿ : ಲೋಕಸಭಾ ಸದಸ್ಯರು, ಜಗದೀಶ ಶೆಟ್ಟರ ಇವರು ಇಂದು ರೇಲ್ವೆ ಇಲಾಖೆಯ ಎಲ್ ಸಿ ನಂ: 381(ಟಿಳಕವಾಡಿ ಗೇಟ್ ನಂ:3) ಹತ್ತಿರ ನಿರ್ಮಾಣ ಹಂತದಲ್ಲಿರುವ ರಸ್ತೆ ಮೇಲು ಸೇತುವೆ ಎರಡನೆಯ ಲೇನ ಕಾಮಗಾರಿ ಹಾಲಿ ಸ್ಥಗಿತಗೊಂಡಿರುವ ಬಗ್ಗೆ ವಿಷಯ ತಿಳಿಯಲು ಸ್ಥಳಕ್ಕೆ ಬೆಟ್ಟಿ ನೀಡಿ ರೇಲ್ವೆ ಇಲಾಖೆ ಅಭಿಯಂತರರೊಡನೆ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರೊಡನೆ ಚರ್ಚಿಸಿದರು. ಸಧ್ಯ ಇರುವ ಲೋಪದೋಷಗಳನ್ನು ಸರಿ ಪಡಿಸಿ ಸಾರ್ವಜನಿಕರ ಹಿತಾದೃಷ್ಟಿಯಿಂದ ಮತ್ತು ಸುಗಮ ವಾಹನ ಸಂಚಾರಕ್ಕೆ ಅನಕೂಲವಾಗಲು ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸುವಂತೆ ಸಂಸದರು ಸೂಚಿಸಿದರು .ಅದರಂತೆ ಒಂದನೆಯ ಲೇನ್ ರಸ್ತೆಯಲ್ಲಿ ಈಗಾಗಲೆ ಕಾಣಿಸಿಕೋಂಡಿರುವ ಗುಂಡಿಗಳನ್ನು ದುರಸ್ತಿ ಸಹ ಮಾಡುವಂತೆ ಆದೇಶಿಸಿದರು.

ಮುಂದುವರೆದು, ರೇಲ್ವೆ ಇಲಾಖೆಯ ಎಲ್ ಸಿ ನಂ: 382 (ಟಿಳಕವಾಡಿ ಗೇಟ ನಂ:2) ಮತ್ತು 383 ( ಟಿಳಕವಾಡಿ ಗೇಟ್ ನಂ: 1 ) ಹತ್ತಿರ ನೂತನವಾಗಿ ನಿರ್ಮಾಣವಾಗ ಬೇಕಾದ ರಸ್ತೆ ಮೇಲು ಸೇತುವೆ ಬಗ್ಗೆ ಅಗತ್ಯ ಮಹಿತಿಯನ್ನು ಪಡೆದು ಈ ನಿಟ್ಟಿನಲ್ಲಯೂ ಸಹ ಕಾಮಗಾರಿಯನ್ನು ಪ್ರಾರಂಬಿಸುವ ಬಗ್ಗೆ ಕ್ರಮವನ್ನು ವಹಿಸಲು ರೇಲ್ವೆ ಇಲಾಖೆ ಅಭಿಯಂತರರಿಗೆ ಹಾಗೂ ಮಹನಗರ ಪಾಲಿಕೆ ಅಭಿಯಂತರರೊಡನೆ ಸೂಚನೆ ನೀಡಿದರು.

ಅದರಂತೆ ಬೆಳಗಾವಿ ನಗರದ ತಾನಾಜಿ ಗಲ್ಲಿಯ ಎಲ್ ಸಿ ನಂ: 386 ಹತ್ತಿರ ನಿರ್ಮಾಣ ಆಗಬೇಕಾದ “ರಸ್ತೆ ಮೇಲು ಸೇತುವೆ” ಬಗ್ಗೆ ಅಲ್ಲಿನ ನಿವಾಸಿಗಳು ಅನಿಸಿಕೆಯನ್ನು ಸಂಸದರು ಜಗದೀಶ ಶೆಟ್ಟರ ಪಡೆದು ಈ ಕುರಿತು ಸಾರ್ವಜನಿಕರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಅಗತ್ಯ. ಕ್ರಮವನ್ನು ಕೈಕೊಳ್ಳಲಾಗುವದೆಂದು ಶ್ರೀ ಜಗದೀಶ ಶೆಟ್ಟರ ಇವರು ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಅಭಯ ಪಾಟೀಲ, ಶಾಸಕರು, ಬೆಳಗಾವಿ ದಕ್ಷಿಣ. ಸವಿತಾ ಕಾಂಬಳೆ ಮಹಾಪೌರರು, ಆನಂದ ಚೌಹಾಣ್ ಉಪ ಮಹಾಪೌರರು ಅನೀಲ ಬೆನಕೆ ಮಾಜಿ ಶಾಸಕರು, ನಗರ ಸೇವಕರಾದ ವಾಣಿ ಜೋಶಿ, ರಾಜು ಭಾತಖಂಡೆ ವಿನೋದ ಭಾಗವತ್, ರೇಲ್ವೆ ಲೋಕೋಪಯೋಗಿ ಇಲಾಖೆಯ ಮತ್ತು ಮಹಾನಗರ ಪಾಲಿಕೆಯ ಅಭಿಯಂತರರು, ಸಾರ್ವಜನಿಕರು ಸಂಸದರೋಡನೆ ಹಾಜರಿದ್ದರು.

ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!