Ad imageAd image

ಚಾಯ್ ಪೆ ಚರ್ಚಾ ಮೂಲಕ ಮತ ಬೇಟೆ ನಡೆಸಿದ ಜಗದೀಶ್ ಶೆಟ್ಟರ್

Bharath Vaibhav
ಚಾಯ್ ಪೆ ಚರ್ಚಾ ಮೂಲಕ ಮತ ಬೇಟೆ ನಡೆಸಿದ ಜಗದೀಶ್ ಶೆಟ್ಟರ್
WhatsApp Group Join Now
Telegram Group Join Now

ಬೆಳಗಾವಿ: ಲೋಕಸಭಾ ಚುನಾವಣೆಯ ಅಂಗವಾಗಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಇಂದು ಬೆಳ್ಳಂ ಬೆಳಗ್ಗೆ ಬಸವ ಕಾಲೋನಿಯಲ್ಲಿ ಚಾಯ್ ಪೇ ಚರ್ಚಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರನ್ನು ಭೇಟಿ ಮಾಡಿ, ಮತಯಾಚನೆ ನಡೆಸಿದ್ದಾರೆ.

ಪ್ರಚಾರದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಕಸಿತ ಭಾರತದತ್ತ ದೇಶ ದಾಪುಗಾಲು ಹಾಕುತ್ತಿದಿ, ಮೋದಿಯವರು ಪ್ರಧಾನಿಯಾದ ಮೇಲೆ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದೆ. ದೇಶವನ್ನು ಇನ್ನು ಹೆಚ್ಚು ಅಭಿವೃದ್ಧಿ ಮಾಡಲು ಮೂರನೆ ಸಲ ಮೋದಿಯವರು ಪ್ರಧಾನಿ ಮಾಡಬೇಕು.‌ ಆ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು‌

ಈ ಸಂದರ್ಭದಲ್ಲಿ ಬಸವ ಕಾಲೋನಿಯ ಪ್ರಮುಖರಾದ ಡಾ. ರವಿ ಪಾಟೀಲ್, ಕೆ.ಐ. ಗಾಣಗೇರ, ಎಸ್.ಆರ್. ಪಾಟೀಲ, ಮೋಹನ ಹೂಗಾರ, ಬಸಪ್ಪ ಚಿಕಲದಿನ್ನಿ, ಪ್ರಕಾಶ ಕೋತ, ಪ್ರಮೋದ ಕೋತ, ಬಿ.ಎಂ. ಮುಗದುಮ್, ಚೇತನ ಬಡಿಗೇರ, ಆದರ್ಶ ಪೈಲ್ವಾನ್, ಸುರೇಶ ಬಂಡೆಪ್ಪನವರ, ರಮೇಶ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ:ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!