Ad imageAd image

ಬೆಳಗಾವಿಯಲ್ಲಿ ಉದ್ಯೋಗ ಸೃಷ್ಟಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ: ಜಗದೀಶ್ ಶೆಟ್ಟರ್

Bharath Vaibhav
ಬೆಳಗಾವಿಯಲ್ಲಿ ಉದ್ಯೋಗ ಸೃಷ್ಟಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ: ಜಗದೀಶ್ ಶೆಟ್ಟರ್
WhatsApp Group Join Now
Telegram Group Join Now

ಬೆಳಗಾವಿ ಅಭಿವೃದ್ಧಿಗೆ ಐಟಿ ಕ್ಲಸ್ಟರ್ ಮ‌ೂಲಕ ಉದ್ಯೋಗ ಸೃಷ್ಟಿ ಮಾಡುವೆ. ಬೆಳಗಾವಿ ಹೆಸರಿಗೆ ಅಷ್ಟೇ ಅಲ್ಲ ನಿಜವಾದ ಸಮಗ್ರ ಅಭಿವೃದ್ಧಿ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಅಂಗವಾಗಿ ಬೆಳಗಾವಿ ಉತ್ತರ ಮತಕ್ಷೇತ್ರದ ಮಹಾಂತ ಭವನದಲ್ಲಿ ಬಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿ, ಮಾತನಾಡಿದ ಅವರು, ಈ ಚುನಾವಣೆ ದೇಶದ ಚುನಾವಣೆ, ನರೇಂದ್ರ ಮೋದಿಯವರು ಈ ದೇಶದ ಆಸ್ತಿ, ನಮ್ಮ ಆಸ್ತಿಯನ್ನು ಬೆಳೆಸಬೇಕು ಉಳಿಸಬೇಕು‌.‌10 ವರ್ಷದ ಆಡಳಿತದಲ್ಲಿ ಮೋದಿಯವರು ಒಂದೆ ಒಂದು ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ.‌ ನರೇಂದ್ರ ಮೋದಿ ಹಾಕಿರುವ ಅಡಿಪಾಯದಿಂದ ಕೆಲವೆ ವರ್ಷದಲ್ಲಿ ದೇಶದ ಆರ್ಥಿಕತೆ ನಂಬರ್ ಒನ್ ಆಗಲಿದೆ ಎಂದು ತಿಳಿಸಿದರು.

ಪಾಕಿಸ್ತಾನದ ನಾಯಕರು ಕೂಡಾ ಮೋದಿಯವರ ನಾಯಕತ್ವ ಒಪ್ಪಿಕೊಂಡಿದ್ದಾರೆ. ಬಾಂಗ್ಲಾದೇಶ, ಶ್ರೀಲಂಕಾ, ಸೇರಿದಂತೆ ಅನೇಕ ದೇಶದಲ್ಲಿ ಮೋದಿ ನಾಯಕತ್ವ ಒಪ್ಪಿಕೊಂಡಿದ್ದಾರೆ. ಮದ್ಯಮದಲ್ಲಿ ಸಮೀಕ್ಷೆ ಆದಾಗ ಜಗತ್ತಿ‌ನ ಟಾಪ್ 16 ಜನ ನಾಯಕರಲ್ಲಿ ಮೋದಿಯವರು ನವಂಬರ್ 1 ಸ್ಥಾನದಲ್ಲಿ ಇದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಪಾಕಿಸ್ತಾನದ ಒಬ್ಬ ಸೈನಿಕ ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದರೆ ತಿರುಗಿ ಗುಂಡು ಹೊಡೆಯಲು ದೆಹಲಿಯ ಅನುಮತಿ ಪಡೆಯಬೇಕಿತ್ತು, ಆದರೆ ಮೋದಿ ಆಡಳಿತದಲ್ಲಿ ಅವರು ಒಂದು ಗುಂಡು ಹಾರಿಸಿದರೆ ತಿರುಗಿ 10 ಗುಂಡು ಹಾರಿಸುವ ಅನುಮತಿ ಪ್ರಧಾನಿ ಮೋದಿಯವರು ನೀಡಿದ್ದಾರೆ ಎಂದು ಹೇಳಿದರು.‌

ಮೋದಿಯವರು ಪ್ರಧಾನಿ ಆಗುವ ಮುಂಚೆ ಬೆಳಗಾವಿ ವಿಮಾನ ನಿಲ್ದಾಣ ಕೇವಲ ಒಂದು ಎಕ್ಸಿಬಿಷನ್ ಕಟ್ಟಡ ರೀತಿ ಇತ್ತು, ಆದರೆ ಉಡಾಣ ಯೋಜನೆ ಅಡಿ ವಿಮಾನ ನಿಲ್ದಾಣ ಅಭಿವೃದ್ಧಿ ಅಭಿವೃದ್ಧಿ ಮಾಡಲಾಗಿದೆ. ಹಾಗಾಗಿ ಹೆಚ್ಚಿನ ಮತಗಳಿಂದ ನನ್ನನ್ನು ಗೆಲ್ಲಿಸಬೇಕು.‌ ಅದಕ್ಕಾಗಿ ಮತದಾನದ ಪ್ರಮಾಣ ಹೆಚ್ಚಾಗಬೇಕು. ಮತದಾನದ ದಿನ ಬೆಳಗ್ಗೆ 10 ಗಂಟೆ ಒಳಗೆ ಮತದಾನ ಮಾಡಿ ಎಂದು ಕರೆ ನೀಡಿದರು ‌

ಈ ವೇಳೆ ಬಿಜೆಪಿ ರಾಜ್ಯ ಉಪಾದ್ಯಕ್ಷ ಅನಿಲ ಬೆನಕೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯ ಬಿಜೆಪಿ ವಕ್ತಾರ ಎಂಬಿ ಜಿರಳಿ, ಪಾಲಿಕೆ ಸದಸ್ಯರಾದ ಹಮಂತ ಕೊಂಗಾಲಿ, ರಾಜಶೇಖರ್ ಡೋಣಿ, ಮಂಡಳ ಅದ್ಯಕ್ಷ ವಿಜಯ ಕೊಡಗನವರ್, ಮಹಾದೇವ ರಾಠೋಡ್ ಉಪಸ್ಥಿತರಿದ್ದರು

ವರದಿ :- ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!