Ad imageAd image

ಹೀರೆಬಾಗೇವಾಡಿಯಲ್ಲಿ ಜಗದೀಶ್ ಶೆಟ್ಟರ್ ಪವರ್ ಶೋ ಬೃಹತ್ ರೋಡ್ ಶೋ ಮೂಲಕ ಮತಯಾಚನೆ

Bharath Vaibhav
ಹೀರೆಬಾಗೇವಾಡಿಯಲ್ಲಿ ಜಗದೀಶ್ ಶೆಟ್ಟರ್ ಪವರ್ ಶೋ  ಬೃಹತ್ ರೋಡ್ ಶೋ ಮೂಲಕ ಮತಯಾಚನೆ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಇಂದು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಹೀರೆಬಾಗೇವಾಡಿಯಲ್ಲಿ ಬೃಹತ್ ರೋಡ್ ಶೋ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ರೋಡ್ ಶೋ ನಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಈ ರೋಡ್ ಶೋನಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಜಗದೀಶ್ ಸಾಥ್ ನೀಡಿದ್ದಾರೆ. ಗ್ರಾಮಸ್ಥರ ಬೆಂಬಲ ಕಂಡು ಈ ಬಾರಿ ಮತ್ತೊಮ್ಮೆ ಕಮಲ ಅರಳುವುದು ಶತಸಿದ್ಧ ಎಂದು ಜಗದೀಶ್ ಶೆಟ್ಟರ್ ಅವರು ವಿಶ್ವಾಸ ವ್ಯಕ್ತ ಪಡಿಸಿದರು.‌ ಈ ವೇಳೆ ಜನ ಮೋದಿ ಮೋದಿ ಎಂದು ಜಯ ಘೋಷಣೆ ಕೂಗುವ ಮೂಲಕ ಬೆಂಬಲ ವ್ಯಕ್ತ ಪಡಿಸಿದರು

ಈ ಸಂದರ್ಭದಲ್ಲಿ ಪ್ರಮುಖರಾದ ಯಲ್ಲಪ್ಪ ಧರೆಣ್ಣವರ, ಶಂಕರಗೌಡ ಪಾಟೀಲ, ಬಸಲಿಂಗ ಮಠಪತಿ, ಸಿದ್ದು ಹುಕ್ಕೇರಿ, ಚೇತನ ಅಗಡಿ, ವಕೀಲರಾದ ರವಿ, ಜೆಡಿಎಸ್ ಮುಖಂಡರಾದ ರಮೇಶಗೌಡ ಪಾಟೀಲ್, ಕಲಾವತಿ ಧರೆಣ್ಣವರ, ಶಾಂತಕುಮಾರ ವಿ.ವಿ ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

ವರದಿ:-ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!