ಬೆಳಗಾವಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮನೆಗೆ ಮಾಜಿ ಸಿಎಂ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಭೇಟಿ ನೀಡಿ ನೇಹಾ ಅವರ ತಂದೆ ತಾಯಿಗೆ ಸಾಂತ್ವನ ಹೇಳಿದ್ದಾರೆ.
ನೇಹಾ ಹತ್ಯೆ ಖಂಡಿಸಿ ಮನ್ನೊಳ್ಳಿ ಪಟ್ಟಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಳಿಕ ಅವರ ಮನೆಗೆ ಭೇಟಿ ನೀಡಿ, ನೇಹಾ ಪೋಷಕರಿಗೆ ಸಾಂತ್ವನ ಹೇಳಿದರು.
ಈ ವೇಳೆ ಜಗದೀಶ್ ಶೆಟ್ಟರ್ ಬಳಿ ತಮ್ಮ ನೋವು ತೋಡಿಕೊಂಡಿರುವ ಪಾಲಿಕೆ ಸದಸ್ಯ ನೀರಂಜನ ಹೀರೆಮಠ್ ಅವರು, ನನ್ನಗಳು ತಾನಾಯಿತು ತನ್ನ ವಿದ್ಯಾಭ್ಯಾಸ ಆಯ್ತು ಎಂದು ಇರುತ್ತಿದ್ದಳು. ನೇಹಾ ಯಾರ ಜೊತೆನೂ ಸಲುಗೆ ಬೆಳೆಸಿರಲಿಲ್ಲ. ಕೊಲೆ ಮಾಡಿದವನ್ನು ಆಕೆ ಪ್ರತಿಸುತ್ತಿರಲಿಲ್ಲ. ಮಗಳ ಕೊಲೆ ಆದ ಮೇಲೆ ರಾಜ್ಯಾದ್ಯಂತ ಪ್ರತಿಭಟನೆಗಳು ಆಗುತ್ತಿರುವ ಹಿನ್ನೆಲೆ, ನೇಹಾ ಆ ಯುವಕನ ಜೊತೆ ಪ್ರತಿ ಮಾಡುತ್ತಿದ್ದಳು ಎಂದು ಸುಳ್ಳು ವದಂತಿಗಳು ಸೊಸಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ ಎಂದು ಕಣ್ಣಿರು ಹಾಕಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಈ ರೀತಿ ಘಟನೆಗಳು ಆಗಬಾರದಿತ್ತು, ಇದರ ಹಿಂದೆ ಯಾರೆ ಇದ್ದರು ಖಂಡಿತ ನ್ಯಾಯ ದೊರಕಿಸಿಕೊಡುತ್ತೇವೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಗುವ ವರೆಗೆ ಹೋರಾಟ ಮಾಡಿ, ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇವೆ. ನೀವು ಧೈರ್ಯದಿಂದ ಇರಬೇಕು ಎಂದು ನೇಹಾ ಪೋಷಕರಿಗೆ ಜಗದೀಶ್ ಶೆಟ್ಟರ್ ಅವರು ಸಾಂತ್ವನ ಹೇಳಿದ್ದಾರೆ.
ವರದಿ:ಪ್ರತೀಕ ಚಿಟಗಿ