ಮೊಳಕಾಲ್ಮೂರು: ಕರ್ನಾಟಕ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣೆ ಆಯೋಗವು ಪರಿಶಿಷ್ಟ ಜಾತಿ ಒಳಮಿಸಲಾತಿ ವರ್ಗೀಕರಣ ಸಂಬಂಧ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ವಿಚಾರ ಎಂದು ಬಿ ನಾಗರಾಜ ನಿವೃತ್ತ ಖಜಾನಾಧಿಕಾರಿಗಳು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಒಳ ಮೀಸಲಾತಿ ಜಾಗೃತಿ ಕಾರ್ಯಗಾರ ಮತ್ತು ಜಗಜೀವನ್ ರಾಮ್ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಿಗ ಸಮಾಜದ ಬಾಂಧವರಿಗೆ ಒಂದು ಉತ್ತಮ ಅವಕಾಶ ಬಂದಿದೆ ಅದನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಯ ಸಮುದಾಯದವರು ಅತ್ಯಂತ ಮ
ಕಾಳಜಿ ವಹಿಸಿ ಕಡ್ಡಾಯವಾಗಿ ಮರೆಯದೆ ಸರ್ಕಾರದಿಂದ ಅಧಿಕಾರಿಗಳನ್ನು ಕಳಿಸುತ್ತಾರೆ, ಅವರು ಬಂದ ಮೇಲೆ ಕೌಟುಂಬಿಕ ಶಿಕ್ಷಣ ಆರ್ಥಿಕ ಸಾಮಾಜಿಕ ಇನ್ನು ಅನೇಕ ಅಂಶಗಳನ್ನು ಒಳಗಂದ ಸಮೀಕ್ಷೆಯ ನಿಯೋಗ ಬರಲಿದೆ ಎಲ್ಲರೂ ತಪ್ಪದೇ ಪಾಲ್ಗೊಳ್ಳಬೇಕು.
ತಾಲೂಕಿನ ಎಲ್ಲಾ ಹಟ್ಟಿಗಳಲ್ಲಿ ಸಮಸ್ಯೆಗೆ ಬಂದ ಮೇಲೆ ತಪ್ಪದೇ ಎಲ್ಲಾ ರೆಕಾರ್ಡ್ಗಳಿಗೆ ಹುಡುಕಾಡದೇ ಎಲ್ಲಾ ವನ್ನು ತಮ್ಮ ಬಳಿ ಜೆರಾಕ್ಸ್ ಮಾಡಿಸಿ ಇಟ್ಟುಕೊಳ್ಳಬೇಕು ನಿಮಗೆ ತಿಳಿಸಿದ ನಿಖರ ಅಂಶಗಳನ್ನು ಭರ್ತಿ ಮಾಡಬೇಕು ಗಮನವಿರಲಿ ಮಾದಿಗ ಎಂಬ ಶಬ್ದವನ್ನು ನಿಖರವಾಗಿ ಬರೆಯಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಟಿ ನಾಗಭೂಷಣ್, ಮುಖಂಡರಾದ ಪ್ರಕಾಶ್, ಮತ್ತು ಕರಿಬಸಪ್ಪ ಇದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೆಜ್ಜನಳ್ಳಿ ನಾಗರಾಜ್ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಮಾಜಿ ಅಧ್ಯಕ್ಷರಾದ ರಾಜಶೇಖರ್, ಮುಖಂಡರಾದ ತಿಪ್ಪೇಸ್ವಾಮಿ ದುರ್ಗೇಶ್ ಕರಿಬಸಪ್ಪ ಹೊನ್ನೂರ್ ಸ್ವಾಮಿ ಚಂದ್ರು ಇನ್ನು ಹಲವಾರು ಪ್ರಸ್ತುತರಿದ್ದರು.
ವರದಿ : ಪಿಎಂ ಗಂಗಾಧರ