ನಿಪ್ಪಾಣಿ: ಗಳತಗಾ ಗ್ರಾಮದಲ್ಲಿ 50 ವರ್ಷಗಳ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ. ಮಾತೃಭಾಷೆ ಕನ್ನಡ ಅಭಿವೃದ್ಧಿಗೆ ಜೈನ್ ಸಮುದಾಯದ ಕೊಡುಗೆ ಅಪಾರ ಹಿರಿಯ ಸಾಹಿತಿ ಬಿಎಸ್ ಗವಿಮಠ ಅಭಿಮತ.
ಕೊಲ್ಲಾಪುರ ಸಾಂಗ್ಲಿ ಮೀರಜ ಹಾಗೂ ಬೆಳಗಾವಿ ಜಿಲ್ಲೆಗಳ ಗಡಿ ಭಾಗದಲ್ಲಿ ಬಹುತೇಕ ಹಳ್ಳಿಗಳು ಜೈನ್ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಜೈನ್ ಸಂಸ್ಕೃತಿ ವೀರಶೈವ ಮಠ ಮಂದಿರಗಳಿಗೂ ಹಾಗೂ ಕನ್ನಡ ಭಾಷೆಗೂ ಅವಿನಾಭಾವ ಸಂಬಂಧವಿದೆ. ಆದ್ದರಿಂದಲೇ ಇಂದಿಗೂ ಜನಧರ್ಮೀಯರ ಅಡುಗೆಮನೆ ಭಾಷೆ ಕನ್ನಡ ವಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಈ ಎರಡು ಸಮುದಾಯಗಳು ತಾಯಿಬೇರುಗಳು ಆಗಿದ್ದು ಮಾತೃಭಾಷೆಗೆ ಇಂದಿಗೂ ಅಗ್ರಸ್ಥಾನ ನೀಡಿವೆ ಎಂದು ಹಿರಿಯ ಸಾಹಿತಿ ಪ್ರೊಫೆಸರ್ ಬಿಎಸ್ ಗವಿಮಠ ತಿಳಿಸಿದರು. ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದ ಕೆಎಲ್ಇ ಸಂಸ್ಥೆಯ ಪಂಡಿತಪ್ಪ ಆರ್ ಚಿಕ್ಕೋಡಿ ನ್ಯೂ ಸೆಕೆಂಡರಿ ಸ್ಕೂಲ್ ನಲ್ಲಿ ರವಿವಾರ ನಡೆದ 50 ವರ್ಷಗಳ ಹಳೆಯ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಶ್ರೀಗಳು ಸಾನಿಧ್ಯತೆ ವಹಿಸಿದ್ದರು. ಪ್ರಾರಂಭದಲ್ಲಿ ವೇದಿಕೆಯಲ್ಲಿಯ ಗಣ್ಯರಿಂದ ದೀಪ ಪ್ರಜ್ವಲನೆ ನಡೆಯಿತು.

ಇದೇ ಸಂದರ್ಭದಲ್ಲಿ ಸಂಪಾದನಾ ಶ್ರೀಗಳಿಂದ ಹಳೆಯ ವಿದ್ಯಾರ್ಥಿಗಳಿಗೆ ಗುರುಕಾಣಿಕೆ ನೀಡಿ ಆಶೀರ್ವದಿಸಿದರು.P.R.C. ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ನಿಸರ್ಗ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸ್ವಾಗತ ಗೀತೆ ಹಾಗೂ ಆರ್.ಡಿ.ಪಾಟೀಲರಿಂದ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀಗಳಿಗೆ ಹಾಗೂ ಗುರುಗಳಿಗೆ ಗೌರವ ಸನ್ಮಾನ ನಡೆಯಿತು ಸಮಾರಂಭದಲ್ಲಿ V.V. ಹಡಗಿನಹಾಳ B A ಖೋತ, G.L. ಹತ್ರೋಟೆ,B.R. ಅಕ್ಕಿವಾಟೆ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ತದನಂತರ ಗುರುವೃಂದ ದಿಂದ ಅನಿಸಿಕೆ ಅಭಿಪ್ರಾಯ ತಿಳಿಸಿ 50ವರ್ಷಗಳ ಹಿಂದಿನ ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕಿದರು. ಗುರುವಂದನೆ ಕಾರ್ಯಕ್ರಮ ಯಶಸ್ವಿಗೊಳಿಸಲು ಆರ್ ಡಿ ಪಾಟೀಲ, ದರಿಗೌಡ ಪಾಟೀಲ್ ಮಹಾದೇವಿ ಹಿರೇಮಠ ಶಿವಮೂರ್ತಿ ಬುರಗೆ,ಶೀತಲ ಚೌಗುಲೆ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಶಿಕ್ಷಕರು ವಿಶೇಷ ಶ್ರಮ ವಹಿಸಿದರು. ಪೂಜಾ ಖೋತ ಹಾಗೂ ಎಂ.ಡಿ.ಪಾಟೀಲ ನಿರೂಪಿಸಿ ವಂದಿಸಿದರು.
ವರದಿ: ಮಹಾವೀರ ಚಿಂಚಣೆ




