ದೆಹಲಿ: ಯಶಸ್ವಿ ಜೈಸ್ವಾಲ್ ಅವರ 173 ( ಬ್ಯಾಟಿಂಗ್) ಭರ್ಜರಿ ಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂದಿಲ್ಲಿ ಆರಂಭವಾದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ 2 ವಿಕೆಟ್ ಗೆ 318 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ.
ಮೊದಲ ದಿನದಾಟ ಮುಗಿದಾಗ ಜೈಸ್ವಾಲ್ 173 ( 253 ಎಸೆತ, 20 ಬೌಂಡರಿ ಹಾಗೂ ನಾಯಕ ಶುಭಮಾನ್ ಗಿಲ್ 20 ಕ್ರೀಸ್ ಬಳಿ ಇದ್ದರು. ಇಲ್ಲಿನ ಅರುಣ ಜೈಟ್ಲಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.




