Ad imageAd image

ಜಾಕನಪಲ್ಲಿ ಶ್ರೀ ಗವಸಿದ್ಧೇಶ್ವರ ಜಾಗ ಮಾರಾಟ ಬೇಡ: ವರದ ಸ್ವಾಮಿ

Bharath Vaibhav
ಜಾಕನಪಲ್ಲಿ ಶ್ರೀ ಗವಸಿದ್ಧೇಶ್ವರ ಜಾಗ ಮಾರಾಟ ಬೇಡ: ವರದ ಸ್ವಾಮಿ
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಪಾಖಲಾ ಗ್ರಾಮದಲ್ಲಿ ಸರ್ವೇ ನಂಬರ್ ೬೨/೧ ರಲ್ಲಿ ೨ಎಕರೆ ೨ಗುಂಟೆ ಜಾಗವನ್ನು ಜಾಕನಪಲ್ಲಿ ಮಹಾತ್ಮ ಶ್ರೀ ಗವಿಸಿದ್ಧೇಲಿಂಗೇಶ್ವರ ದೇವಸ್ಥಾನ ಹೆಸರಲ್ಲಿ ಸುಮಾರು ೧೯೫೮ರ ಇಸವಿಯಲ್ಲಿ ಬರೆದುಕೊಡಲಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಜಾಕನಪಲ್ಲಿ ಮಠದ ಪೀಠಾಧಿಪತಿಗಳು ಅ ಜಾಗವನ್ನು ಅದೇ ಊರಿನವರಿಗೆ ಮಾರಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅದರ ಹಿಂದೆ ಏನೇ ಉದ್ದೇಶ ಇರಲಿ ಆದರೆ ಪಾಖಲ ಗ್ರಾಮದಲ್ಲಿ ಆ ಸ್ಥಳವನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೂಡ ಮಾರಬಾರದು. ಅದು ದೇವರ ಹೆಸರಲ್ಲಿ ಇದ್ದುದ್ದರಿಂದ ಅ ಸ್ಥಳದಲ್ಲಿ ಆ ಊರಿನಲ್ಲಿ ಒಂದು ಮಠ ಕಟ್ಟಲು ಪ್ರಯತ್ನಿಸಿ ಅದಕ್ಕೆ ಊರಿನವರ ಸಹಕಾರ ಮತ್ತು ಭಕ್ತ ಜನರ ಸಹಕಾರ ಕೂಡ ಇರುತ್ತದೆ.

ಒಂದು ವೇಳೆ ಆ ಜಾಗವನ್ನು ಯಾರಿಗಾದರೂ ಮಾರಿದಲ್ಲಿ ಪಾಖಲ ಗ್ರಾಮಸ್ಥರ ಜೊತೆಗುಡಿ ನಮ್ಮ ಸಂಘಟನೆ ಮಠದ ಶ್ರೀ ಗಳ ವಿರುದ್ಧ ಮತ್ತು ಅದರ ಹಿಂದೆ ಇರುವ ವ್ಯಕ್ತಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ ಅವರು ತಾಲೂಕ ದಂಡಾಧಿಕಾರಿಗಳಾದ ಶ್ರಿಯಾಂಕ ಧನುಶ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು, ಹಾಗೂ ಸೇಡಂ ತಾಲೂಕಿನಲ್ಲಿ ಸತತ ಸುಮಾರು ಎರಡು ತಿಂಗಳು ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ರೈತರು ಬೆಳೆದಿರುವ ಬೆಳೆಗಳಾದ ಹೆಸರು, ಉದ್ದು, ತೊಗರಿ ಬೆಳೆಗಳು ನಾಶ ಆಗಿರುತ್ತವೆ ನಮ್ಮ ರೈತರಿಗೆ ಸೂಕ್ತವಾದ ಪರಿಹಾರ ಒದಗಿಸಿ ಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಾಲರಾಜ್ ಕಲಾಲ್ ಪಾಖಲ್, ವೆಂಕಟಪ್ಪ, ವೀರೇಶ್, ನರಸಿಮ್ಲು, ಶ್ರೀನಿವಾಸ್ ಕಲಾಲ್, ಭಿಮಶಪ್ಪ, ಬಸವರಾಜ್, ಕಾಶಪ್ಪ, ಗೋವಿಂದ್, ಬಾಲಸ್ವಾಮಿ, ಮೋಗಲಪ್ಪ, ಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!