——————————– ಕಾರು ಜಖಂ: ಕಣ್ಮುಚ್ಚಿ ಕುಳಿತ PDO, ತಹಸಿಲ್ದಾರ,
ಗೋಕಾಕ: ಸುರಿಯುತ್ತಿರುವ ಭಾರಿ ಮಳೆಯಿಂದ ನಗರದ ಸೋಮವಾರ ಪೇಠದಲ್ಲಿ ಚಲಿಸುತ್ತಿದ್ದ ಕಾರ ಮೇಲೆ ಗೊಡೆ ಕುಸಿದ ಪರಿಣಾಮ ಕಾರು ಜಖಂ ಗೊಂಡಿದೆ.

ಇನ್ನು ಗೊಡೆ ಕುಸಿದು ಕಾರಿನ ಮೇಲೆ ಬಿದ್ದಕ್ಷಣ ಕಾರಿನ ಚಾಲಕ ಬಾಗಿಲು ತೆಗೆದು ಹೊರಗೆ ಬಂದಿದ್ದರಿಂದ ಅದೃಷ್ಟಾವಶ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗೋಕಾಕ ನಗರದ ಆರ್,ಟಿ,ಓ ಕಚೇರಿಯ ಮುಂದೆ ಇರುವ ರಸ್ತೆಯು ಮಳೆಯ ನೀರಿನಿಂದ ತುಂಬಿಕೊಂಡಿದ್ದ ಕಾರಣ ಮೊನಕಾಲಿನ ವರೆಗೆ ರಸ್ತೆ ಮೇಲೆ ನೀರು ನಿಂತ ಕಾರಣ ವಾಹನ ಸವಾರರು ಪರದಾಡುತಿದ್ದಾರೆ.
ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾಮದಲ್ಲಿ ಮಳೆಯ ನೀರು ಮನೆಗಳಲ್ಲಿ ತುಂಬಿಕೊಂಡಿದೆ. ಅದರ ಪರಿಣಾಮ ಹಲವು ಕುಟುಂಬಸ್ಥರು ಪರದಾಡುವ ಪರಿಸ್ಥಿತಿ ಉಂಟಾಗಿದ್ದರೂ ಸಹ ಸ್ಥಳಕ್ಕೆ ನಲ್ಲಾನಟ್ಟಿ ಗ್ರಾಮ ಪಂಚಾಯತ PDO ಮಾತ್ರ ಸ್ಥಳಕ್ಕೆ ಬಾರದೆ ಜನರ ಜೀವದ ಜೊತೆ ಚೆಲ್ಲಾ ಆಡುತ್ತಿರುವುದು ಕಂಡು ಬಂದಿದೆ. ಇಷ್ಟಾದರೂ ಸಹ ಗೋಕಾಕ ತಹಸಿಲ್ದಾರ ಕೂಡ ಕಂಡರೂ ಕಾಣದಂತೆ ಕುರುಡ ಜಾಣನಂತೆ ವರ್ತಿಸುತಿದ್ದಾರೆ.
ವರದಿ: ಮನೋಹರ ಮೇಗೇರಿ




