ಬಾಗಲಕೋಟೆ : ಜಮಖಂಡಿ ಉಪವಿಭಾಗಾಧಿಕಾರಿಗಳಾದ (AC) ಶ್ವೇತಾ ಬೀಡಿಕರ ಸರ್ಕಾರಿ ವಾಹನ ಜಪ್ತಿ ಮಾಡಲಾಗಿದೆ.ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಬಾಳಪ್ಪ ನಿಂಗಪ್ಪ ಕಪ್ಪಲಗುದ್ದಿ, ದರೆಪ್ಪ ಮುತ್ತಪ್ಪ ಕಪ್ಪಲಗುದ್ದಿ ಎಂಬ ರೈತರ ಜಮೀನು ಭೂಸ್ವಾಧೀನ ಮಾಡಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಕೆರೆ ನಿರ್ಮಾಣಕ್ಕೆ ಸರ್ಕಾರ
4 ಎಕರೆ 28 ಗುಂಟೆ ಜಮೀನು ಭೂಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿರಲಿಲ್ಲ.

ಕಚೇರಿಗೆ ಅಲೆದು ಸುಸ್ತಾಗಿ ರೈತರು ನ್ಯಾಯಾಲಯದ ಮೊರೆ ಹೋಗಿ. 43,33,306 ಲಕ್ಷ ರೂಪಾಯಿ ಪರಿಹಾರ ನೀಡುವಂತೆ
ಜಮಖಂಡಿ ಹಿರಿಯ ದಿವಾಣಿ ನ್ಯಾಯಾಲಯ ಆದೇಶ ಮಾಡಿತ್ತು.

ನ್ಯಾಯಾಲಯದ ಆದೇಶದ ಬಳಿಕವೂ ಪರಿಹಾರ ನೀಡದ ಅಧಿಕಾರಿಗಳು, ಹೀಗಾಗಿ ಅಧಿಕಾರಿಗಳ ವಾಹನ, ಕಚೇರಿ
ಪೀಠೋಪಕರಣ ಸೇರಿದಂತೆ ಚರಾಸ್ತಿ ಮುಟ್ಟುಗೋಲಿಗೆ ಕೋರ್ಟ್ ನೀಡಿರುವದರಿಂದ ಜಪ್ತಿ ಮಾಡಲು ಬಂದಾಗ ಉಪವಿಭಾಧಿಕಾರಿಗಳ ಕಚೇರಿ ಬೀಗ ಹಾಕಿರುವದರಿಂದ ಎಸಿ ಅವರ ವಾಹನವನ್ನು ಜಪ್ತಿ ಮಾಡಲು ಹೋದಾಗ ಕೀಲಿಕೖ ನೀಡದ ಕಾರಣ ವಾಹನವನ್ನು ಟೋ ವಾಹನ ಮುಖಾಂತರ ಎಳೆದುಕೊಂಡು ಹೋದರು.
ಈ ಸಮಯದಲ್ಲಿ ನ್ಯಾಯಾಲಯದ ಸಿಬ್ಬಂದಿ ಹಾಗೂ ನ್ಯಾಯವಾದಿಗಳು ಇದ್ದರು.
ವರದಿ : ಬಂದೇನವಾಜ ನದಾಫ




