ಬೆಂಗಳೂರು : ಇದೇ ವಾರದೊಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರವಸೆ ನೀಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿಸೆಂಬರ್ ಕಂತಿನ ಹಣ ಇನ್ನು ಎರಡ್ಮೂರು ದಿನಗಳಲ್ಲಿ ಖಾತೆಗೆ ವರ್ಗಾವಣೆ ಆಗಲಿದೆ.ಯಾವುದೇ ಕಾರಣಕ್ಕೂ ಮಿಸ್ ಆಗಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.
ಬಡವರಿಗೆ ಅನುಕೂಲವಾಗಲೆಂದು ಈ ಯೋಜನೆ ಮಾಡಿದ್ದೇವೆ. ಗೃಹಲಕ್ಷ್ಮಿ ಯೋಜನೆ ಕೇವಲ ಚುನಾವಣೆಗೋಸ್ಕರ ಮಾಡಿಲ್ಲ. ಚುನಾವಣೆಗಾಗಿ ಗೃಹಲಕ್ಷ್ಮಿ ಯೋಜನೆ ಮಾಡಿದ್ದೇ ಆದಲ್ಲಿ, ಚುನಾವಣೆ ಮುಗಿದ ಬಳಿಕ ನಾವು ಬಂದ್ ಮಾಡಬಹುದಿತ್ತಲ್ವಾ ಎಂದೂ ವಿಪಕ್ಷಗಳ ನಾಯಕರಿಗೆ ಟಾಂಗ್ ನೀಡಿದರು.
ಯಾವ ಫಲಾನುಭವಿಗಳು ಗೊಂದಲ್ಲಕ್ಕೀಡಾಗಬೇಡಿ. ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಲ್ಲ. ಇನ್ಮುಂದೆ ಪ್ರತಿ ತಿಂಗಳು ಹಣ ಹಾಕುತ್ತೇವೆ. ಐದು ವರ್ಷ ಯೋಜನೆ ನಿಲ್ಲಲ್ಲ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಬಿಲ್ ಆಗಿದ್ದು, ಹಣ ಗೃಹಲಕ್ಷ್ಮಿಯರ ಖಾತೆಗೆ ಜಮೆ ಆಗಲಿದೆ ಎಂದು ಹೇಳಿದರು.




