ಆಸ್ಟ್ರೇಲಿಯಾ: “ಚಿನ್ನದ ತೋಳನ್ನು ಹೊಂದಿರುವ ವ್ಯಕ್ತಿ” ಎಂದು ಜನಪ್ರಿಯರಾಗಿದ್ದ ಆಸ್ಟ್ರೇಲಿಯಾದ ರಕ್ತದಾನಿ ಜೇಮ್ಸ್ ಹ್ಯಾರಿಸನ್ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಆಸ್ಟ್ರೇಲಿಯಾದ ರೆಡ್‌ಕ್ರಾಸ್ ಲೈಫ್‌ಬ್ಲಡ್ ಅವರ ಸಾವನ್ನು ದೃಢಪಡಿಸಿದೆ.ಆಸ್ಟ್ರೇಲಿಯಾದ NSW ಸೆಂಟ್ರಲ್ ಕೋಸ್ಟ್‌ನಲ್ಲಿರುವ ಪೆನಿನ್ಸುಲಾ ವಿಲೇಜ್ ನರ್ಸಿಂಗ್ ಹೋಂನಲ್ಲಿ ಜೇಮ್ಸ್ ನಿಧನರಾದರು ಎಂದು ಹೇಳಿದೆ.
ಹ್ಯಾರಿಸನ್‌ನ ಪ್ಲಾಸ್ಮಾವು ಆಂಟಿ-ಡಿ ಎಂಬ ಅಪರೂಪದ ಪ್ರತಿಕಾಯವನ್ನು (Antibody) ಹೊಂದಿತ್ತು. ಇದು ಹೆರಿಗೆಯ ಸಮಯದಲ್ಲಿ ತಾಯಂದಿರಿಂದ ಅವರ ಶಿಶುಗಳಿಗೆ ಮಾರಕ ಪ್ರತಿಕಾಯಗಳನ್ನು ರವಾನಿಸುವುದನ್ನು ತಡೆಯುತ್ತಿತ್ತು.
ಹ್ಯಾರಿಸನ್ 1954 ರಲ್ಲಿ ಕೇವಲ 18 ವರ್ಷ ವಯಸ್ಸಿನವನಾಗಿದ್ದಾಗ ರಕ್ತದಾನ ಮಾಡಲು ಪ್ರಾರಂಭಿಸಿದರು. ಅವರು 2018 ರಲ್ಲಿ 81 ನೇ ವಯಸ್ಸಿನಲ್ಲಿ ನಿವೃತ್ತರಾಗುವವರೆಗೂ ಜೀವನದುದ್ದಕ್ಕೂ 1,173 ಬಾರಿ ರಕ್ತದಾನ ಮಾಡಿದ್ದಾರೆ.
ಜೇಮ್ಸ್ ರಕ್ತದಾನದ ಈ ಮಹತ್ಕಾರ್ಯದಿಂದ ಪ್ರಪಂಚದಾದ್ಯಂತ 24 ಲಕ್ಷಕ್ಕೂ ಹೆಚ್ಚು ಶಿಶುಗಳನ್ನು ಉಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.