Ad imageAd image

ಫೈನಲ್‌ನಲ್ಲಿ ಎಡವಿದ ಕರ‍್ನಾಟಕ ತಂಡ

Bharath Vaibhav
ಫೈನಲ್‌ನಲ್ಲಿ ಎಡವಿದ ಕರ‍್ನಾಟಕ ತಂಡ
WhatsApp Group Join Now
Telegram Group Join Now

—————————————————————–ಜಮ್ಮು ಕಾಶ್ಮೀರ ರಣಜಿ ಚಾಂಪಿಯನ್
ಹುಬ್ಬಳ್ಳಿ: ಇಂದಿಲ್ಲಿ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಜಮ್ಮು ಕಾಶ್ಮೀರ ತಂಡವು ಪ್ರತಿಷ್ಠಿತ ಟ್ರೋಫಿಗೆ ಮುತ್ತಿಕ್ಕಿತು.
ಇಲ್ಲಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಐದನೇ ಹಾಗೂ ಕಡೆಯ ದಿನವಾದ ಇಂದು ಜಮ್ಮು ಕಾಶ್ಮೀರ ತಂಡವು ತನ್ನ ದ್ವಿತೀಯ ಸರದಿಯಲ್ಲಿ ೪ ವಿಕೆಟ್‌ಗೆ ೩೪೨ ರನ್ ಗಳಿಸಿದ್ದಾಗ ಉಭಯ ತಂಡದ ನಾಯಕರು ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದ್ದನ್ನು ಸಮ್ಮತಿಸಿದರು.
ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಜಮ್ಮು ಕಾಶ್ಮೀರ ತಂಡವು ರಣಜಿ ಟ್ರೋಫಿ ಎತ್ತಿ ಹಿಡಿಯಿತು. ಕರ‍್ನಾಟಕ ತಂಡವು ನಿರಾಶೆ ಅನುಭವಿಸಿತು.
ಸ್ಕೋರ್ ವಿವರ
ಜಮ್ಮು ಕಾಶ್ಮೀರ ಮೊದಲ ಇನ್ನಿಂಗ್ಸ್ ೫೮೪
ಕರ‍್ನಾಟಕ ಮೊದಲ ಇನ್ನಿಂಗ್ಸ್ ೨೯೩
ಜಮ್ಮು ಕಾಶ್ಮೀರ ದ್ವಿತೀಯ ಇನ್ನಿಂಗ್ಸ್ ೪ ವಿಕೆಟ್‌ಗೆ ೩೪೨
ಪಂದ್ಯದ ಫಲಿತಾಂಶ: ಪಂದ್ಯ ಡ್ರಾ
ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಜಮ್ಮು ಕಾಶ್ಮೀರ ಚಾಂಪಿಯನ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!