ಚಿಟಗುಪ್ಪ :ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಅಕ್ಟೋಬರ್ 20 ರಿಂದ ಮೂರು ದಿವಸಗಳ ಕಾಲ ಹಜರತ್ ಸೈಯದ್ ಅಮೀರೋದ್ದಿನ್ ಸಾಬ್ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತ್ತು
ಅಕ್ಟೋಬರ್ 20 ರಂದು ರಾತ್ರಿ ಸಂದಲ್ ಮೆರವಣಿಗೆ,ಅಕ್ಟೋಬರ್ 21 ರಂದು ರಾತ್ರಿ ಚಿರಾಗ್ ದೀಪ ಅಲಂಕಾರ ಹಾಗೂ ಪ್ರಸಿದ್ಧ ಖಾವಲಿ ಜರುಗಿದವು.ಅಕ್ಟೋಬರ್ 22 ರಂದು ಬೆಳಗ್ಗೆ ಜಂಗಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
ಈ ಕುಸ್ತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ,ತೆಲಂಗಾಣ ಹಾಗೂ ಆಂಧ್ರದ ದೊಡ್ಡ ದೊಡ್ಡ ಪೈಲ್ವಾನ್ ಜಟ್ಟಿಗಳು ಪಂದ್ಯಾವಳಿಯಲ್ಲಿ ಭಾವಹಿಸಿದ್ದರು. ನೂರಕ್ಕೂ ಅಧಿಕ ಪೈಲ್ವಾನ್ ಗಳು ಅತ್ಯಂತ ಆಕರ್ಷಕ ಕುಸ್ತಿ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಬಹಳಷ್ಟು ಮನರಂಜನೆ ನೀಡಿದರು.
ಫೈನಲ್ ಕುಸ್ತಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಜಟ್ಟಿಗಳ ನಡುವೆ ಬಹಳ ಜಿದ್ದಾಜಿದ್ದಿಯಾಗಿ ಸುಮಾರು ಅರ್ಧ ಗಂಟೆ ಕಾಲ ನಡೆಯಿತು.ಕೊನೆಯಲ್ಲಿ ಮಹಾರಾಷ್ಟ್ರದ ಪ್ರದೀಪ ಮುದಗಡಗೆ ಯಗಳಿದರು. ಜಯಗಳಿದ ಪ್ರದೀಪ ಮುದಗಡಗೆ ಪ್ರಥಮ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ದರ್ಗಾ ಕಮಿಟಿಯವರಾದ ಎಂಡಿ ಹಾಜಿ,ಮಹೇಶ ಅಮಗೊಂಡ,ಎಂಡಿ ರಫೀಕ್,ಸದ್ದಾಂ ಪಟೇಲ್,ನರಸಿಂಹ ರೆಡ್ಡಿ ಬಿರಾದಾರ,ಎಂಡಿ ಇರ್ಫಾನ್,ಎಂಡಿ ಆಸೀಫ್,ಅಕ್ಬರ್ ಮಂಗಲಗಿ,ಎಂಡಿ ಮುಬೀನ್,ಅಲ್ಲಾಬಕಾಶ್ ಸೇರಿ ಅನೇಕರಿದ್ದರು.
ವರದಿ:ಸಜೀಶ ಲಂಬುನೋರ್




