ಗೋಕಾಕ : 10 ವರ್ಷದ ಬಳಿಕ ಅದ್ದೂರಿಯಾಗಿ ನಡೆಯುತ್ತಿರುವ ಗೋಕಾಕ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ದೇವಿಯ ರಥೋತ್ಸವ, ಕಾರ್ಯಕ್ರಮಗಳು ನಡೆಯುವ ಎಲ್ಲ ಸ್ಥಳ ಮತ್ತು ಮಾರ್ಗವನ್ನು ಗೋಕಾಕದ ನೂತನ DSP ರವಿ ಡಿ ನಾಯ್ಕ ಅವರು ವೀಕ್ಷಣೆ ಮಾಡಿದರು.
ಅದರ ಜೊತೆಯಲ್ಲಿ ಜಾತ್ರಾ ಕಮೀಟಿಯವರಿಂದ ಜಾತ್ರೆಯ ಎಲ್ಲ ಮಾಹಿತಿ ಪಡೆದುಕೊಂಡರು.
ಜಾತ್ರೆಗೆ ಲಕ್ಷಾಂತರ ಜನ ಸೇರುವ ನಿಟ್ಟಿನಲ್ಲಿ ಯಾವುದೇ ಅನಾಹುತ ಆಗದಂತೆ ತಡೆಯುವುದರ ಮುಂಜಾಗ್ರತ ಸಲುವಾಗಿ ನಗರವನ್ನು ವೀಕ್ಷಿಸಿದರು.

ಡಿಎಸ್ ಪಿ ರವಿ ಡಿ ನಾಯಕ ಇವರು ಜಾತ್ರಾ ಕಮೀಟಿಯವರ ಮುಂದಾಳತ್ತ್ವದಲ್ಲಿ ಪೊಲೀಸ್ ಇಲಾಖೆಯವರು ನಗರದಲ್ಲೆಡೆ CCTV ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡಿದರು,ಜೊತೆಗೆ ಎಲ್ಲ ಅಂಗಡಿಕಾರರಿಗೆ cctv ಕ್ಯಾಮರಾ ಅಳವಡಸಿಲು ಹೇಳಿದರು
.
ಈ ಸಂದರ್ಭದಲ್ಲಿ ,CPI ಸುರೇಶ್ ಬಾಬು ಆರ್. PSI ಕೆ. ವಾಲೀಕರ್ ಹಾಗೂ ಸಿಬ್ಬಂದಿಗಳಾದ ಕುಮಾರ ಇಳಿಗೇರ. ಮಂಜುನಾಥ ಹುಚ್ಚಗೌಡ್ರ, ನಾಗಪ್ಪ ಬೆಳಗಲಿ, ವಿಠ್ಠಲ ನಾಯಿಕ, ಶಹಜಾನ ತೊರಗಲ್, ಅಡಿವೆಪ್ಪ ಕಾಪಸಿ, ಆನಂದ ಬಿರಾದಾರ ಸೇರಿದಂತೆ ಜಾತ್ರಾ ಕಮೀಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು..
ವರದಿ:ಮನೋಹರ ಮೇಗೇರಿ




