ಬೆಳಗಾವಿ : ನಂದಿಹಳ್ಳಿ ಗ್ರಾಮದ ಶ್ರೀ ಬೀರದೇವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಪಲ್ಲಕ್ಕಿ ಹೊತ್ತು ಭಕ್ತಿ -ಪೂರ್ವಕ ನಮನ ಸಲ್ಲಿಸಿದರು.
ಈ ವೇಳೆ ಗ್ರಾಮದ ಹಿರಿಯರು, ಸ್ಥಳೀಯ ನಿವಾಸಿಗಳು, ಜಾತ್ರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನಂತರ ದೇಸೂರ್ ಗ್ರಾಮದ ಮಜುಕರ್ ಗಲ್ಲಿಯಲ್ಲಿ ಶ್ರೀ ತಾನಾಜಿ ಮಾಲುಸಾರೆ ಅವರ ಪುತ್ಥಳಿ ನಿರ್ಮಾಣದ ಕಾಮಗಾರಿಗೆ ಅವರು ಭೂಮಿ ಪೂಜೆ ನೆರವೇರಿಸಿದರು.
ಇದಾದ ನಂತರ ಬೆನ್ನಳ್ಳಿ ಗ್ರಾಮದ ಶ್ರೀ ಬ್ರಹ್ಮಲಿಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಹಾ-ಪ್ರಸಾದದ ಸೇವೆಯಲ್ಲಿ ಭಾಗವಹಿಸಿದ ಮೃಣಾಲ ಹೆಬ್ಬಾಳಕರ್, ಭಕ್ತಾಧಿಗಳಿಗಳಿಗೆ ಪ್ರಸಾದವನ್ನು ಉಣಬಡಿಸಿದರು
ಪ್ರತೀಕ್ ಚಿಟಗಿ