ಬಾಗಲಕೋಟೆ : ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದಲ್ಲಿ ಗ್ರಾಮ ದೇವತೆಯರಾದ ಲಕ್ಕವ್ವ ಮತ್ತು ದ್ಯಾಮವ್ವ ದೇವಿಯ ಜಾತ್ರೆಯು ಎರಡು ದಿನಗಳ ಕಾಲ ಜರಗಿತು.
ಮೊದಲನೆಯ ದೀನ ಮುಂಜಾನೆ ದೇವಿಗೆ ಪಂಚಾಮೃತ ಅಭಿಷೇಕ್ ಮಾಡಿ ನಂತರ ಸರ್ವ ಧರ್ಮ ಸಮ್ಮಿಲನದಲ್ಲಿ ಭಕ್ತಾದಿಗಳು ಸೇರಿಕೊಂಡು ಸವಾಲು ಮಾಡಿ ಗುಡಿಯಿಂದ ದೖವ ಸ್ವರೂಪಿ ಕೃಷ್ಣಾ ನದಿಯ ವರೆಗೆ ತೆಲೆಯ ಮೇಲೆ ಹೋತ್ತುಕೊಂಡು ಹೋಗಿ, ತದನಂತರ ದೇವಿಯರನ್ನು ಪವಿತ್ರ ಸ್ನಾನ ಮಾಡಿಸಿಕೊಂಡು ಬಂದ ನಂತರ ದೇವಿಯರನ್ನು ಗ್ರಮದ ಅಗಸಿ ಕಟ್ಟೆಯ ಮೇಲೆ ಕುಳ್ಳರಿಸುತ್ತಾರೆ. ತದನಂತರ ಗ್ರಾಮದ ಹೆಣ್ಣು ಮಕ್ಕಳು ನೖವೆದ್ಯೆ ಅರ್ಪಿಸಿ ಅದೆ ದಿನ ರಾತ್ರಿ ಗ್ರಾಮಸ್ಥರಿಗಾಗಿ ಪೌರಾಣಿಕ ಬಯಲಾಟವನ್ನು ಆಯೊಜಿಸುತ್ತಾರೆ.
ಮರುದಿನ ಬೆಳ್ಳಿಗೆ ಗ್ರಾಮದ ಎಲ್ಲಾ ಬಕ್ತಾದಿಗಳು ಸೇರಿ ದೖವ ಸ್ವರೂಪಿ ಕೃಷ್ಣಾ ನದಿಯಿಂದ ನೀರು ತಂದು ಗ್ರಾಮ ದೇವಿಯರ ಪಾದಕ್ಕೆ ಅರ್ಪಿಸಿ ಗ್ರಾಮದ ಮುತೖದಿಯರು ಎಲ್ಲರೂ ಸೇರಿ ಉಡಿ ತುಂಬುತ್ತಾರೆ ಈ ಸಂದರ್ಭದಲ್ಲಿ ನೂರಾರು ಬಕ್ತರು ಸೇರಿಕೊಂಡು ದೇವಿಯನ್ನು ಅಗಸಿ ಕಟ್ಟಿಯ ಮೇಲಿಂದ ಪುನಹ ಗುಡಿಗೆ ಹೋಗಲು ಸವಾಲು ಮಾಡಿ ತಲೆಯ ಮೇಲೆ ಹೊತ್ತುಕೊಂಡು ಹೋಗವಾಗ ದೇವಿಯರು ಭಕ್ತಾರ ಇಷ್ಟಾರ್ಥ ಪುರೖಸಿದಕ್ಕಾಗಿ ಬಕ್ತಾದಿಗಳು ಸಂತೋಷ ಸಂಭ್ರಮದಿಂದ 2 ಸಾವಿರ ಕೇಜಿ ಬಂಡಾರವನ್ನು ತಂದು ದೇವಿಯರಿಗೆ ಅರ್ಪಿಸಿ ಅದ್ದೂರಿಯಾಗಿ ಮರಳಿ ದೇವಸ್ಥಾನದಲ್ಲಿ ಪ್ರತಿಸ್ಠಾಪಿಸುತ್ತಾರೆ.
ಇದೆ ಕಾರಣದಿಂದ ಈಗ ಈ ಗ್ರಾಮದೇವತೆಯರ ಜಾತ್ರೆಯು ಬಂಡಾರದ ಜಾತ್ರೆಯಂದು ಪ್ರಸಿದ್ಧಿ ಪಡೆಯುತ್ತಿದೆ.
ವರದಿ : ಬಂದೇನವಾಜ ನದಾಫ




