Ad imageAd image
- Advertisement -  - Advertisement -  - Advertisement - 

ದಿ.02 ರಂದು ಕಿಲ್ಲಾ ತೊರಗಲ್ಲದಲ್ಲಿ ; ‘ ತ್ರೇತಾಯುಗದ ಸಪ್ತರ್ಷಿ ಶ್ರೀ ಮಹರ್ಷಿ ವಸಿಷ್ಠ ಋಷಿಯ ಜಾತ್ರಾಮಹೋತ್ಸವ

Bharath Vaibhav
ದಿ.02 ರಂದು ಕಿಲ್ಲಾ ತೊರಗಲ್ಲದಲ್ಲಿ ; ‘ ತ್ರೇತಾಯುಗದ ಸಪ್ತರ್ಷಿ ಶ್ರೀ ಮಹರ್ಷಿ ವಸಿಷ್ಠ ಋಷಿಯ ಜಾತ್ರಾಮಹೋತ್ಸವ
WhatsApp Group Join Now
Telegram Group Join Now

ತೊರಗಲ್ಲ :-ಶ್ರಾವಣ ಮಾಸದಲ್ಲಿ ಸಾಮಾನ್ಯವಾಗಿ ನಾವುಗಳೆಲ್ಲ ಹಲವಾರು ಪ್ರಾಚೀನ ಕಾಲದ, ಪುರಾತನ ಹಿಂದೂ ದೇವಾಲಯಗಳಿಗೆ , ಪುಣ್ಯ ಸುಕ್ಷೇತ್ರಗಳಿಗೆ , ಶೃದ್ಧಾ , ಭಕ್ತಿಯ ಶಕ್ತಿ ಕೇಂದ್ರಗಳಿಗೆ ದರುಷಣಕ್ಕಾಗಿ ಎಲ್ಲೇಲ್ಲೋ ಸುತ್ತಾಡುತ್ತೇವೆ , ಆದರೆ ನಮ್ಮ ಪಕ್ಕದಲ್ಲೇ ಇರುವ ಪವಾಡ ಕ್ಷೇತ್ರವಾಗಲೀ, ಶಕ್ತಿ ಕೇಂದ್ರವಾಗಲಿ, ನಮ್ಮ ಜ್ಞಾಪಕ ಬಾರದೇ ಇರುವುದು ನಮ್ಮ ದೌರ್ಭಾಗ್ಯವೇ ಎನ್ನಬಹುದು .

ಅಂಥಹ ಒಂದು ದಿವ್ಯ ಪಾವನ ಕ್ಷೇತ್ರದ ಪರಿಚಯ ಮಾಡಿ ಕೊಡುವ ಚಿಕ್ಕ ಪ್ರಯತ್ನ ನನ್ನದು , ನಿಮಗೆ ಸರಿ ಎನ್ನಿಸಿದರೆ ಒಮ್ಮೆ ಇಲ್ಲಿಗೆ ಬಂದು ದರುಷಣ ಪಡೆಯಬಹುದು. ಈ ಪುಟ್ಟ ಗ್ರಾಮದಲ್ಲಿ ಪ್ರಾಚೀನ ಕಾಲದಿಂದಲೂ ನೂರೂಂದು ಬಾವಿಗಳು ,ನೂರಾರು ಪವಿತ್ರ ದೇಗುಲಗಳು ಇವೆ ಎಂದರೇ ನೀವು ನಂಬುತ್ತೀರಾ ಹೌದು ನಂಬಲೇ ಬೇಕು , ಆದರೆ ನಮ್ಮ ದುರಾದೃಷ್ಟಕರ ಸಂಗತಿ ಎಂದರೆ ಅವುಗಳೆಲ್ಲ ನಮ್ಮ ಜನತೆಯ ನಿರ್ಲಕ್ಷ್ಯ ಹಾಗೂ ನಿರಾಸಕ್ತಿಯಿಂದಾಗಿ , ಕಾಲನ ತುಳಿತಕ್ಕೆ ಒಳಗಾಗಿಯೂ ಮಣ್ಣಲ್ಲಿ ಹೂತು ಹೋಗಿರುವುದು ಸುಳ್ಳೇನಲ್ಲ . ಅಂಥಹ ಒಂದು ಗ್ರಾಮವೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲ.

ಈ ಗ್ರಾಮದ ದಕ್ಷಿಣಕ್ಕೆ ಇರುವ ಗೊಣಗನೂರು ಗ್ರಾಮಕ್ಕೆ ಹೋಗುವ ದಾರಿಯಲ್ಲಿರುವ. ತ್ರೇತಾಯುಗದ ಸಪ್ತರ್ಷೀ, ದೇವ ಋಷಿ ಎಂದೇ ಖ್ಯಾತರಾದ ಶ್ರೀ ವಷೀಷ್ಠ ಮಹರ್ಷಿಗಳವರ ಆಶ್ರಮವಿದೆ. ಈ ಕ್ಷೇತ್ರದ ಬಗೆಗೆ ಹೇಳಬೇಕೆಂದರೆ,..” ತಂಪಾದ ಪರಿಸರದಲ್ಲೊಂದು ಅಲ್ಹಾದಕರ ವಾತಾವರಣ, ಕಣ್ಮನ ತನಿಸುವ ಸುಂದರ ರಮನೀಯ ” ಮಲಪ್ರಭೆ ನದಿ ತೀರದಲ್ಲಿ , ಆ ನಿಸರ್ಗ ನಿರ್ಮಿತ ರಮನೀಯತೆಯ ಮಡಿಲಲ್ಲಿ ಚಿಕ್ಕದಾದ ತ್ರೇತಾಯುಗದ ಶ್ರೀ ಮಹರ್ಷೀ ವಷೀಷ್ಠ ಋಷಿಗಳ ಸುಂದರ ( ಆಶ್ರಮ) ದೇಗುಲವಿದೆ , ಇಕ್ಕಲಗಳಲ್ಲಿ ಹಬ್ಬಿರುವ ಕಬ್ಬು , ತೆಂಗು, ಬಾಳೆಯ ತೋಟಗಳ ಸೊಬಗು, ಹಕ್ಕಿ- ಪಕ್ಷಿಗಳ ಇಂಚರವಾದ ಕಲರವದ ನಡುವೆಯೇ ಜುಳು …ಜುಳು…ಎಂಬ ಮಂಜುಳಕರ ನೀನಾದದ ನದಿಯ ಇಂಪು , ವೈಯ್ಯಾರದಿಂದ ಮೌನವೇ ಮೈವೆತ್ತಿ ಬಂದಂತೆ ತನ್ನದೇ ಆದ ಗಾಂಭೀರ್ಯದಿಂದ ಉತ್ತರಾಭಿಮುಖವಾಗಿ ಹರಿಯುತ್ತಿರುವ ಮಲಪ್ರಭೆ ನದಿ, ಒಮ್ಮೆ ನೀರಿಗಿಳಿದರೆ ಸಾಕು ತನ್ನ ತೆಕ್ಕೆಯಲ್ಲಿ ಬಹುಕಾಲ ಇರುವಂತೆ ಮಾಡುವ ಚುಂಬಕ ಶಕ್ತಿ ಈ ವಷಿಷ್ಠಾಶ್ರಮದಿಂದಲೇ ಬಂದಿದೆ ಏನೋ ಎಂದೆನ್ನಿಸದಿರಲಾಗದು.

ಈ ಆಶ್ರಮದ ಸನಿಹದಲ್ಲೇ ಮಹಾಭಾರತದ ಕಾಲದ ಪಾಂಡವರು ಹುರುಪಲ ನವಣಿ ಬೆಳದಿರುವ ‘ ರೆಂಟೆ ಪಡಿ ಹಾಗೂ ಭೀಮನ ಹಜ್ಜೆಯೂರಿದ ಸ್ಥಳವಿದೆ. ಒಂದು ಕಾಲದಲ್ಲಿ ಇಲ್ಲಿ 450 ವಿದ್ವಾನ್ ಬ್ರಾಹ್ಮಣರು ತಮ್ಮ ತಪೋಅಣುಷ್ಠಾಣಕ್ಕಾಗಿ ವಾಸವಿದ್ದರೆಂಬ ಪ್ರತೀತಿಯಿದೆ. ಇಗಲೂ ಅನೇಕರು ವಿಶಿಷ್ಟ ಸಂದರ್ಭಗಳಲ್ಲಿ ತಪೋಣುಷ್ಟಾನಕ್ಕಾಗಿ ಆಗಮಿಸುತ್ತಲಿರುತ್ತಾರೆ.

ಕಿಲ್ಲಾ ತೊರಗಲ್ಲದಲ್ಲಿನ ತ್ರೇತಾಯುಗದ ಸಪ್ತರ್ಷಿ ಶ್ರೀ ಮಹರ್ಷಿ ವಸಿಷ್ಠ ಋಷಿಗಳ ಆಶ್ರಮದಲ್ಲಿ ” ಶ್ರಾವಣ ಮಾಸದ ಪ್ರಯುಕ್ತ ಸೋಮವಾರ ದಿ.02-09-2024 ರಂದು ಮುಂಜಾನೆ 10 ಗಂಟೆಗೆ ಹೋಮಕುಂಡದ ಪೂಜೆ, ಹಾಗೂವಿವಿಧ ಪೂಜೆ , ಜಾಗರಣೆ ಮತ್ತು ಶ್ರೀ ಗುರುವಿನ ಜಾತ್ರಾಮಹೋತ್ಸವವು ಜರುಗಲಿದೆ, ನಂತರ ಮಹಾಪ್ರಸಾದ ವಿತರಣೆಯ ಕಾರ್ಯಕ್ರಮ .ಕಾರಣ ಸುತ್ತಮುತ್ತಲಿನ ಗ್ರಾಮದ ಶ್ರೀಗುರುವಿನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರುವಿನ ಆಶ್ರಮದ ಪಾವನ ಸುಕ್ಷೇತ್ರದಲ್ಲಿ ತನು, ಮನ , ಧನದೊಂದಿಗೆ ಭಕ್ತಿಯ ಸೇವೆಯ ಸಲ್ಲಿಸಿ ತಮ್ಮ ಜೀವನವನ್ನು ಸಾಫಲ್ಯಗೊಳಿಸಿಕೊಳ್ಳುವಂತೆ ಶ್ರೀ ವಸಿಷ್ಠ ಋಷಿಗಳ ಸದ್ಭಕ್ತರ ಪರವಾಗಿ ಕೋರಲಾಗಿದೆ.

 

WhatsApp Group Join Now
Telegram Group Join Now
Share This Article
error: Content is protected !!