ಸೇಡಂ: ತಾಲೂಕಿನ ಬೀಜನಳ್ಳಿ ಹಾಗೂ ತೊಟ್ನಳ್ಳಿ ಗ್ರಾಮದಲ್ಲಿ ಕಾಗೀಣ ನದಿ ಹಾದುಹೋಗುತ್ತಿದ್ದು, ಈ ನದಿಯ ಪಕ್ಕದ ಗ್ರಾಮಗಳಾದ ಬೀಜನಳ್ಳಿ ಹಾಗೂ ತೊಟ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವುದಕ್ಕೆ ಮೆಲಸೇತುವೆ ಕಾಮಗಾರಿ ನಡೆಯುತ್ತಿದ್ದು ಸದರಿ ಕಾಮಗಾರಿಯು ದೇವೇಂದ್ರಪ್ಪ ಎಂ ಬಿರಾದಾರ ಎಂಬ ಗುತ್ತಿಗೆದಾರಾರ ಹೆಸರಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ತೊಟ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕಾಮಗಾರಿಗಾಗಿ ಅಕ್ರಮವಾಗಿ ಮರಳನ್ನು ಯಾವುದೇ ಪರವಾನಿಗೆ ಪಡೆಯದೆ ಮರಳನ್ನು ಹಗಲು ರಾತ್ರಿ ರಾಜಾರೋಷವಾಗಿ ಯಾರ ಭಯವಿಲ್ಲದೆ ಮರಳನ್ನು ಸಾಗಿಸುತ್ತಿದ್ದಾರೆ.

ಇದರಿಂದ ನದಿಯಲ್ಲಿ ಸಂಪೂರ್ಣ ಮರಳು ಖಾಲಿಯಾಗುತ್ತಿದ್ದಲ್ಲದೆ ಇವರು ಮರಳು ಸಾಗಿಸುವ ಸಲುವಾಗಿ ನದಿಯಲ್ಲಿ ತೆಗ್ಗನ್ನು ಹಗೆಯುವುದರಿಂದ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳ ಜೀವಕ್ಕೆ ತೊಂದರೆ ಉಂಟಾಗಿ ಜೀವ ಹೋಗುವ ಭಯವು ಇದೆ.
ಅಕ್ರಮ ಮರಳು ಸಾಗಿಸುತ್ತಿರುವ ದೇವೇಂದ್ರಪ್ಪ ಎಂ ಬಿರಾದಾರ ಅವರ ಅಕ್ರಮ ಮರಳು ಸಾಗಾಣಿಕೆ ತಡೆಯುವಲ್ಲಿ ಪೊಲೀಸ್ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅಕ್ರಮ ಮರಳುಗಳ್ಳರು ರಾಜಾರೋಷವಾಗಿ ಮರಳನ್ನು ಹಿಟಾಚಿ ಮುಖಾಂತರ, ಟಿಪ್ಪರಗಳ ಮುಖಾಂತರ ಮರಳು ಸಾಗಿಸುವುದರಿಂದ ನದಿಯ ಅಂತರ್ಜಲ ಕುಸಿತಿದೆ. ನದಿಯಲ್ಲಿ ಅಂತರ್ಜಲ ಕುಸಿತ ಕಂಡು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಕಾಣಬಹುದಾಗಿದೆ.
ಆದ್ದರಿಂದ ಕೂಡಲೇ ಅದಿಕಾರಿಗಳು ಅಕ್ರಮವಾಗಿ ಮರಳು ಸಾಗಿಸುತ್ತಿರುವ ದೇವೇಂದ್ರಪ್ಪ ಎಂ ಬಿರಾದಾರ ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಬೀಜನಳ್ಳಿ ಹಾಗೂ ತೊಟ್ನಳ್ಳಿ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆಯ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷರಾದ ರವೀಂದ್ರ ನಾಯಕ ವರ ನೇತೃತ್ವದಲ್ಲಿ ಸೇಡಂ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ರಾಮು ಮೆಕಾನಿಕ, ಶರಣು ಬುಡಸಣಿ, ರವಿಕುಮಾರ್ ಉಡಗಿ, ನರೇಂದ್ರ ರೆಡ್ಡಿ, ನಾಗುದೋರೆ ಇದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




