ಸೇಡಂ: ತಾಲೂಕಿನ ಶಿಲಾರಕೊಟ್ ಗ್ರಾಮದಿಂದ ಸುಮಾರು ೨ಕಿ,ಮಿ ದೂರದ ಅರಣ್ಯದಲ್ಲಿರುವ ಜಲಾಶಯವನ್ನು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಬಿ ಹಿರೇಮಠ ಅವರು ವೀಕ್ಷಿಸಿ ಅಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಮೂರ್ತಿಗೆ ಪೂಜೆ ಮಾಡಿ ಪುಷ್ಪನಮೇನೆ ಸಲ್ಲಿಸಿದರು.
ಈ ಜಲಾಶಯವು ಜೋಗ ಜಲಪಾತ ರೀತಿಯಲ್ಲಿದೆ. ಸುಮಾರು ೩೦ಅಡಿ ಎತ್ತವಿರುವ ಬೆಟ್ಟದಿಂದ ನೀರು ಕೆಳಗಿರುವ ಡ್ಯಾಮ್ ನಲ್ಲಿ ಸೇರುತ್ತವೆ. ಈ ಜಲಾಶಯಕ್ಕೆ ಒಂದು ವಿಶೇಷ ಇತಿಹಾಸವಿದೆ. ಶೀಲಾರಕೊಟ್ ಸುತ್ತಮುತ್ತಲಿನ ೭ ಹಳ್ಳಿಗಳಿಂದ ಪ್ರತಿ ಮನೆಯಿಂದ ದಾರ ತಂದು ಅದಕ್ಕೆ ಒಂದು ಕಲ್ಲು ಕಟ್ಟಿ ನೀರೊಳಗೆ ಬಿಟ್ಟಾಗ ಅದರ ತಲೆ ಸಿಗಲಿಲ್ಲ ಎಂದು ಪೂರ್ವಿಕರ ಮಾತಾಗಿದೆ.
ಇಲ್ಲಿ ಶ್ರೀ ಆಂಜನೇಯ ಸ್ವಾಮಿ, ಮತ್ತು ಶ್ರೀ ಮೈಲಾರ ಲಿಂಗೇಶ್ವರ ದೇವರ ಪುರಾತನ ಮೂರ್ತಿಗಳಿವೆ. ಕೆಲವು ವರ್ಷಗಳ ಹಿಂದೆ ಪ್ರತಿ ಯುಗಾದಿ ಹಬ್ಬ ಪ್ರಯುಕ್ತ ಊರಿನ ಹಾಲುಮತದ ಮುಖಂಡರು ಅವರ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವರನ್ನು ಊರಿನಲ್ಲಿ ಮೆರವಣಿಗೆ ಮುಖಾಂತರ ಈ ಜಲಪಾತ ಹತ್ತಿರ ಬಂದು ನೀರು ತಗೊಂಡು ಹೋಗಿ ವಿಶೇಷ ಪೂಜಾ ಕಾರ್ಯಕ್ರಮ ಮಾಡುತಿದ್ದರು. ಆ ದಿನಗಳ ಸಂಭ್ರಚರಣೆ ನೋಡಲು ಎರಡು ಕಣ್ಣು ಸಾಲದು.
ಆದರೆ ದುರದೃಷ್ಟವಶಾತ್ ಈಗ ಮೈಲಾರ ಲಿಂಗೇಶ್ವರ ದೇವಸ್ಥಾನ ಊರೊಳಗೆ ನಿರ್ಮಾಣವಾಗಿರುವದರಿಂದ ಹಾಲುಮತದ ಮುಖಂಡರು ಜಲಪಾತದ ದೇವರನ್ನು ಮರೆತಂತೆ ಆಗಿದೆ.
ಅನೇಕ ದೇವರುಗಳ ಇತಿಹಾಸವಿರುವ ಈ ಸ್ಥಳಕ್ಕೆ ಹೋಗಲು ಸರಿಯಾದ ದಾರಿ ಕೂಡ ಇಲ್ಲದಿರುವುದು ಈ ಊರಿನವರ ದುರದೃಷ್ಟ ಎಂದೇ ಹೇಳಬಹುದು. ಸರಕಾರ ಮನಸು ಮಾಡಿದರೆ ಈ ಜಲಪಾತವನ್ನು ಪ್ರವಾಸಿತಾಣವನ್ನಗಿ ಮಾಡಬಹುದು.
ಎಷ್ಟೋ ಸುಂದರವಾಗಿರುವ ಈ ಸ್ಥಳಕ್ಕೆ ಬಂದರೆ ಸಾರ್ವಜನಿಕರು ತಮ್ಮ ಲೋಕವನ್ನೇ ಮರೆಯುವರು ಎಂದು ವರದ ಸ್ವಾಮಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸೇಡಂ ತಾಲೂಕಾಡಲಿತ ಅಧಿಕಾರಿಗಳು ಇಂತಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ನಮ್ಮ ಇತಿಹಾಸವನ್ನು ರಕ್ಷಸಿಸಲು ಪ್ರಯತ್ನ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




