ಹುಬ್ಬಳ್ಳಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ಮಾಡಿದ್ದು, ಆಹಾರದಲ್ಲಿ ವಿಷ ಹಾಕಿರುವ ಅನುಮಾನವಿದೆ ಎಂದಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ನನಗೆ ಮೊನ್ನೆ ಕರೆ ಮಾಡಿದ್ದರು. ಸ್ವಾಮೀಜಿ ಆಹಾರದಲ್ಲಿ ವಿಷ ಹಾಕಿರುವ ಅನುಮಾನವಿದೆ ಎಂದಿದ್ದಾರೆ.
ಶಾಸಕರ ಪರ ಇಬ್ಬರು ಮುಸ್ಲಿಂ ಯುವಕರು ಸೇರಿಕೊಂಡಿದ್ದಾರೆ. ಲಿಂಗಾಯಿತ ಮಠದಲ್ಲಿ ಮುಸ್ಲಿಂ ಯುವಕರಿಗೆ ಏನು ಕೆಲಸ? ಅವರು ಅಡುಗೆ ಮನೆಗೆ ಹೋಗಿದ್ದು ಭಕ್ತರಿಗೆ ಗೊತ್ತಾಗಿದೆ. ಬಳಿಕ ಅವರನ್ನು ಹೊರಗೆ ಕಳುಹಿಸಲಾಗಿದೆ.
ನಂತರ ಸ್ವಾಮೀಜಿ ಊಟ ಮಾಡಿದ್ದವರು ಅಸ್ವಸ್ಥರಾಗಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.




