ತುರುವೇಕೆರೆ: ತಾಲ್ಲೂಕು ಬ್ರಾಹ್ಮಣ ಸಭಾ, ಶ್ರೀ ಲಲಿತಾ ವಿಪ್ರ ಮಹಿಳಾ ಮಂಡಲಿ, ವಿಪ್ರ ನೌಕರರ ಸಂಘ, ವಿಪ್ರ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಪೂರ್ವಭಾವಿಯಾಗಿ ಏಪ್ರಿಲ್ 28 ರಿಂದ ಪ್ರತಿ ನಿತ್ಯ ಬೆಳಿಗ್ಗೆ ಶಂಕರ ಭಗವತ್ಪಾದರಿಗೆ ಷೋಡಷೋಪಚಾರ ಪೂಜೆ, ಸಂಜೆ ಶ್ರೀ ಶಂಕರಾಚಾರ್ಯರ ಜೀವನ ಮತ್ತು ಸಂದೇಶ ಕುರಿತ ವಿಶೇಷ ಉಪನ್ಯಾಸ, ಸಾಮೂಹಿಕ ಶ್ರೀ ಶಂಕರ ಅಷ್ಟೋತ್ತರ, ಮಹಾಮಂಗಳಾರತಿ ನೆರವೇರಿಸಲಾಯಿತು.

ಮೇ 02 ರಂದು ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾಗೆ ಸುಮಾರು 30 ಸಾವಿರಕ್ಕೂ ಅಧಿಕ ಮೌಲ್ಯದ ಊಟದ ಟೇಬಲ್, ಕುರ್ಚಿ ಮುಂತಾದ ಪರಿಕರಗಳನ್ನು ನೀಡಿದ ಜೋಡಿದಾರ್ ಶ್ರೀನಿವಾಸ್ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನ ಬ್ರಾಹ್ಮಣ ಸುವಾಸಿನಿಯರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಸಂಜೆ 6 ಗಂಟೆಗೆ ಜಗದ್ಗುರು ಶಂಕರಾಚಾರ್ಯರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಶಂಕರರಿಗೆ ಸಂಬಂಧಿಸಿದ ವಿವಿಧ ವೇಷಭೂಷಣ ತೊಟ್ಟ ಪುಟಾಣಿ ಮಕ್ಕಳಿಗೆ ಬ್ರಾಹ್ಮಣ ಸಭಾ ವತಿಯಿಂದ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಸತ್ಯನಾರಾಯಣ್, ಮಾಜಿ ಅಧ್ಯಕ್ಷರಾದ ಅಮಾನಿಕೆರೆ ಮಂಜುನಾಥ್, ಟಿ.ವಿ.ರಂಗನಾಥ್, ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಶ್ರೀನಿವಾಸ್(ಪ್ರೆಸ್), ಗಿರೀಶ್ ಕೆ. ಭಟ್, ಶ್ರೀನಿವಾಸ್(ಬ್ಯಾಂಕ್), ಕೆ.ಸತ್ಯನಾರಾಯಣ್, ಗುರುಪ್ರಸಾದ್ (ಗುಂಡ), ಪ್ರಾಣೇಶ್, ನಂಜುಂಡಸ್ವಾಮಿ, ಟಿ.ಎನ್.ರಘು, ಟಿ.ಎಸ್.ರಾಘವೇಂದ್ರ, ರಾಮಚಂದ್ರ (ರೈಲ್ವೆ), ವಿಪ್ರ ಮಹಿಳಾ ಅಧ್ಯಕ್ಷೆ ಉಮಾಮಂಜುನಾಥ್, ಲಕ್ಷ್ಮೀಹಿರಿಯಣ್ಣಯ್ಯ, ಭಾರತಿರವಿಶಂಕರ್, ತೇಜಸ್ವಿನಿಶೇಷಾದ್ರಿ, ಉಷಾಶ್ರೀನಿವಾಸ್, ಸುಷ್ಮಕೃಷ್ಣಚೈತನ್ಯ, ಮೀನಾಶ್ರೀನಿವಾಸ್, ಕುಸುಮಸತ್ಯನಾರಾಯಣ್, ಲಲಿತಾರಾಮಚಂದ್ರ ಸೇರಿದಂತೆ ನೂರಾರು ವಿಪ್ರ ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




