ಚಿಕ್ಕೋಡಿ:-ಕಬ್ಬೂರ ಗ್ರಾಮದಲ್ಲಿ ಜಲಕುಂಭ ನಿರ್ಮಾಣ ಮಾಡುವ ಉದ್ದೇಶದಿಂದ ಪೈಪ್ ಲೈನ್ ಕಾಮಗಾರಿ ನಡೆದಿತ್ತು ಆದ್ರೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜವರಾಯ ಹೊಂಚು ಹಾಕಿ ಕುಳಿತಿದ್ದದ್ದು ಅವರ‌್ಯಾರಿಗೂ ಗೊತ್ತಾಗಲೇ ಇಲ್ಲ. ಕಣ್ಮುಚ್ಚಿ ಕಣ್ಣು ಬಿಡುವುದರೊಳಗಾಗಿ ಪುಟ್ಟ ಕಂದಮ್ಮನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಹಾಗಿದ್ರೆ ಅಲ್ಲಿ ಆಗಿದ್ದಾದ್ರೂ ಏನು ಅಂತೀರಾ..? ಇಲ್ಲಿದೆ ನೋಡಿ ಒಂದು ವರದಿ..!
ಹೀಗೆ ಪೋಟೋದಲ್ಲಿ ಮುದ್ದಮುದ್ದಾಗಿ ಕಾಣ್ತಿರೋ ಕಂದಮ್ಮನ ಹೆಸರು ಭೂಮಿಕಾ ರಮೇಶ ಕುಕನೂರ.ಇನ್ನೂ ಬದುಕಿ ಬಾಳಬೇಕಿದ್ದ ಕಂದಮ್ಮನ ಬಾಳಲ್ಲಿ ವಿಧಿ ಆಟವಾಡಿದ್ದು ಮಾತ್ರ ಘೋರ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಹನುಮಾನ ನಗರದ ತೋಟದಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಜಲಕುಂಭ ಕಾಮಗಾರಿಯನ್ನು ರಮೇಶ ಕುಕನೂರ ಎಂಬುವವರ ಮನೆ ಎದುರುಗಡೆಯ ರಸ್ತೆ ಬದಿಯ ಪೈಪ್‌ಲೈನ್‌ಗಾಗಿ ಭೂಮಿ ಅಗೆಯುತ್ತಿದ್ದರು.
ಮನೆಯ ಬಳಿ ಆಟವಾಡ್ತಿದ್ದ ಪುಟ್ಟ ಕಂದಮ್ಮ ಜೆಸಿಬಿಯ ಮುಂದಿನ ಬಕೆಟ್‌ಗೆ ಸಿಲುಕಿ ಮೃತಪಟ್ಟಿದೆ. ಜೆಸಿಬಿ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದಾಗಿ 2 ವರ್ಷದ ಪುಟ್ಟ ಕಂದಮ್ಮ ಗಂಭೀರವಾಗಿ ಗಾಯಗೊಂಡಿದೆ.
ಕೂಡಲೇ ಕಬ್ಬೂರ ಪ್ರಾಥಮಿಕ ಕೇಂದ್ರಕ್ಕೆ ಚಿಕಿತ್ಸೆಗೆಂದು ತೆರಳಿದ್ದಾರೆ ಜೆಸಿಬಿ ಯಂತ್ರದ ಅಬ್ಬರಕ್ಕೆ ಪುಟ್ಟ ಕಂದಮ್ಮನ ಜೀವ ಅದಾಗಲೇ ಮಮ್ಮುಲ ಮರಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪುಟ್ಟ ಭೂಮಿಕಾ ಇಹಲೋಕ ತ್ಯಜಿಸಿದ್ಳು.
Byte : ಎಸ್.ಬಿ ಸಂಗಟೆ, ಮೃತಳ ಅಜ್ಜ.
Voice Over : ಪುಟ್ಟ ಕಂದಮ್ಮ ಭೂಮಿಕಾ ಮೃತಪಟ್ಟು ಒಂದು ವಾರ ಕಳೆಯುತ್ತಾ ಬಂದರೂ ಸೌಜನ್ಯಕಾದ್ರೂ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಇನ್ನು ಕಾಮಗಾರಿ ಪಡೆದಿದ್ದ ಗುತ್ತಿಗೆದಾರ ಅಂತೂ ಮೃತರ ಕುಟುಂಬಸ್ಥರ ಮನೆ ಕಡೆ ಕಣ್ಣುಹಾಕಿ ನೋಡುವ ಗೋಜಿಗೂ ಹೋಗಿಲ್ಲ.
ಈ ಕುರಿತಂತೆ ರಿಪಬ್ಲಿಕ್ ಕನ್ನಡದ ಮುಂದೆ ತಮ್ಮ ಆಕ್ರೋಶ ತೋಡಿಕೊಂಡ ಕುಟುಂಬಸ್ಥರು, ನಮ್ಮ ಮಗು ಮೃತಪಟ್ಟು ಐದಾರು ದಿನಗಳು ಕಳೆದಿವೆ. ಆದ್ರೆ ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಸಾಂತ್ವನ ಹೇಳಿಲ್ಲ.
ಇಡೀ ಗ್ರಾಮದ ಜನತೆ ಬಂದು ನಮಗೆ ಧೈರ್ಯ ತುಂಬ್ತಿದ್ದಾರೆ. ಆದ್ರೆ ಸ್ಥಳೀಯ ಸಂಸ್ಥೆ ನಮ್ಮ ದುಃಖದಲ್ಲಿ ಭಾಗಿಯಾಗಿಲ್ಲ ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇನ್ಮುಂದೆ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು.
ನಮ್ಮ ಮಗುವಿನ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಗುತ್ತಿಗೆದಾರನನ್ನು ಲೈಸನ್ಸ್ ರದ್ದುಗೊಳಿಸಿ, ಆತನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ರು.
Byte : ಎಸ್.ಬಿ. ಸಂಗಟೆ, ಮೃತಳ ಅಜ್ಜ.
Voice Over : ಒಟ್ಟಿನಲ್ಲಿ ಯಾರದ್ದೋ ನಿರ್ಲಕ್ಷ್ಯದಿಂದ ಪುಟ್ಟ ಕಂದಮ್ಮ ತನ್ನ ಜೀವವನ್ನೆ ಕಳೆದುಕೊಳ್ಳಬೇಕಾಯಿತು. ಇನ್ಮೇಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರ ದುಃಖವನ್ನು ಕಡಿಮೆ ಮಾಡುವಂತಾಗಲಿ.
ವರದಿ :-ರಾಜು ಮುಂಡೆ