ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ನೇತೃತ್ವದಲ್ಲಿ ಕೆ ಟಿ ಹಳ್ಳಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ ನಾಯಕ್ ಆಯ್ಕೆ
ತುಮಕೂರು: ಜಿಲ್ಲೆ ಪಾವಗಡ ತಾಲೂಕಿನ ಕೆ ಟಿ ಹಳ್ಳಿ ಗ್ರಾಮ ಪಂಚಾಯ್ತಿತಿ ಈ ಹಿಂದೆ ಇರುವ ಅಥವಾ ಹಿಂದಿನ ಅಧ್ಯಕ್ಷೆ ನರಸಿಂಹಮೂರ್ತಿ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಕೆ ಟಿ ಹಳ್ಳಿ ಗ್ರಾಮ ಪಂಚಾಯ್ತಿತಿಯಲ್ಲಿ ದಿನಾಂಕ. 17/07/25 ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಚುನಾವಣೆ ನಡೆದಿದ್ದು.
ಕೆ ಟಿ ಹಳ್ಳಿ ಗ್ರಾಮ ಪಂಚಾಯ್ತಿತಿಯ ಸದಸ್ಯರುಗಳರಾದ ಜೆಡಿಎಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಅಂತ ಇಬ್ಬರು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದರು.
ಇದರಲ್ಲಿ ಕೆ ಟಿ ಹಳ್ಳಿ ಪಂಚಾಯ್ತಿತಿ ಯಲ್ಲಿ ಇರುವ ಒಟ್ಟು ಗ್ರಾಮ ಪಂಚಾಯ್ತಿತಿ ಸದಸ್ಯರು 16 ಸದಸ್ಯರ ಪೈಕಿ ಎರಡು ಸದಸ್ಯರು ರಿಜೆಕ್ಟ್. ಒಂದು ಸದಸ್ಯ ಗೈರು ಆಗಿದ್ದರು ಆಗಿದ್ದರು ಇನ್ನ ಉಳಿದ ಸದಸ್ಯರು ಪೈಕಿ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ ಆರ್ ಮಂಜುನಾಥ್ ಕೇವಲ ಐದು ಮತಗಳನ್ನು ಪಡೆದಿದ್ದು ಸೋಲನ್ನು ಅನುಭವಿಸಿದರು. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ್ ನಾಯಕ್ ಎಂಟು ಮತಗಳನ್ನು ಪಡೆದು ಜಯಶೀಲರಾಗಿ ನೂತನ ಅಧ್ಯಕ್ಷಕ್ಕೆ ಸ್ಥಾನಕ್ಕೆ ಶ್ರೀನಿವಾಸ್ ನಾಯಕ್ ಆಯ್ಕೆಯಾಗಿದ್ದಾರೆಂದು. ಚುನಾವಣೆ ಅಧಿಕಾರಿ . ತಾಲ್ಲೂಕು ಪಂಚಾಯ್ತಿತಿ ಕಾರ್ಯನಿರ್ವಹಣಾಧಿಕಾರಿ ಜಾನಕಿ ರಾಮ್ ತಿಳಿಸಿರುತ್ತಾರೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ್ ನಾಯಕ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೋತ್ಸವದಲ್ಲಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪನವರ ಭಾಗವಹಿಸಿ ಗ್ರಾಮ ಪಂಚಾಯಿತಿಯಲ್ಲಿ ಪಕ್ಷತೀತ ಜಾತ್ಯತೀತ ಆಡಳಿತ ನೀಡಿ ನೂತನ ಅಧ್ಯಕ್ಷರು ಉತ್ತಮ ಜನಸೇವೆ ಮಾಡಲಿ ಎಂದು ತಿಳಿಸಿದರು
ಈ ವೇಳೆಯಲ್ಲಿ ಗ್ರಾಮ ಪಂಚಾಯ್ತಿತಿ ನೂತನ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಮಾತನಾಡಿ ನನ್ನ ಆಯ್ಕೆಗೆ ಸಹಕರಿಸಿದ ನಮ್ಮ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ರವರ ಸಹಾಯದೊಂದಿಗೆ ಹಾಗೂ ಎಲ್ಲಾ ಗ್ರಾಮ ಪಂಚಾಯ್ತಿತಿ ಸದಸ್ಯರೊಂದಿಗೆ ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳ ವತಿಯಿಂದ ನಾನು ಈ ದಿನ ಕೆ ಟಿ ಹಳ್ಳಿ ಗ್ರಾಮ ಪಂಚಾಯ್ತಿತಿ ಅಧ್ಯಕ್ಷ ಆಗಿದ್ದೇನೆ ಅದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿ ಪಂಚಾಯಿತಿಯನ್ನು ಮಾದರಿ ಪಂಚಾಯ್ತಿನಾಗಿ ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿರುತ್ತಾರೆ
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿತಿಯ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ರವರಿಗೆ ಮತ್ತು ಗ್ರಾಮ ಪಂಚಾಯ್ತಿತಿಯ ಎಲ್ಲಾ ಸದಸ್ಯರುಗಳಿಗೆ ಹಾಗೂ ಊರಿನ ಮುಖಂಡರಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಪಕ್ಷದ ಕಾರ್ಯಕರ್ತರಿಗೆ ಇವರೆಲ್ಲರ ಸಹಾಯದೊಂದಿಗೆ ಗ್ರಾಮ ಪಂಚಾಯ್ತಿತಿ ನೂತನ ಅಧ್ಯಕ್ಷ ಆಗಿದ್ದೇನೆ ಅದಕ್ಕೆ ಎಲ್ಲರಿಗೂ ಹೂವಿನ ಹಾರ ಮತ್ತು ಟೋಪಿ ಹಾಗೂ ಶಾಲುವೆ ಧರಸಿ ಸನ್ಮಾನ ಕಾರ್ಯಕ್ರಮ ಮಾಡಲಾಗಿದೆ
ಈ ವೇಳೆಯಲ್ಲಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ.ಉಪಾಧ್ಯಕ್ಷ ಕವಿತಾ. ಸದಸ್ಯರಾದ. ಓಬಮ್ಮ. ಆದಿಲಕ್ಷ್ಮಿ. ಪ್ರಮೀಳಮ್ಮ. ಅಲ್ಕೋರಮ್ಮ. ಕೆ.ಎಸ್. ಚಂದ್ರಶೇಖರ್. ಮಹೇಶ್. ನರಸಿಂಹಮೂರ್ತಿ. ಈರಣ್ಣ. ಮುಖಂಡರಾದ ಡಿ.ದಾಸಣ್ಣ. ಚಂದ್ರಣ್ಣ. ಪಾಳೇಗಾರ ಲೋಕೇಶ್. ಭಾಸ್ಕರ್ ನಾಯಕ. ನಾಗರಾಜ್. ಅನಂತಯ್ಯ. ರಂಗಸ್ವಾಮಿ. ತಿಮ್ಮ ರೆಡ್ಡಿ.ಶಿವಣ್ಣ.ಚಂದ್ರಪ್ಪ.ನಾರಯಣ ರೆಡ್ಡಿ .ಅಂದಪ್ಪ. ತಿಮ್ಮಾರೆಡ್ಡಿ. ವಿ ಎಸ್ ಎಸ್ ಅಂಜಿಪ್ಪ. ಗ್ರಾಮ ಪಂಚಾಯ್ತಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಮತ್ತು ಸಿಬ್ಬಂದಿ ವರ್ಗದವರು ಇನ್ನು ಮುಂತಾದ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ: ಶಿವಾನಂದ




