ಸಿಂಧನೂರು : ಇಂದಿನ ವರ್ಷದಂತೆ ಈ ವರ್ಷವೂ ಕೂಡ 10 ಕ್ವಿಂಟಲ್ ಬದಲಾಗಿ ಪ್ರತಿ ಎಕರೆಗೆ 20 ಕ್ವಿಂಟಲ್ ನಂತೆ 150 ಕ್ವಿಂಟಲ್ ನಿಗದಿ ಮಿತಿ ಬದಲಿಸಿ ರೈತರು ಬೆಳೆದ ಜೋಳ. ತೊಗರಿ. ರಾಗಿ. ಖರೀದಿ ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್-ಬಿಜೆಪಿ ತಾಲೂಕು ಘಟಕ ಜಂಟಿಯಾಗಿ ಮಂಗಳವಾರ ನಗರದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧ ಕಛೇರಿ ವರಿಗೆ ಬೃಹತ್ ಪ್ರತಿಭಟನೆ ಮೂಲಕ ಬಂದು ಮಾನ್ಯ ತಹಸಿಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು,ಈ ಸಂದರ್ಭದಲ್ಲಿ, ಗಣ್ಯಮಾನ್ಯರು ಮಾತನಾಡಿದ್ದು ಹೀಗೆ

ಜೋಳ ಬೆಳೆದ ರೈತರ ಪರವಾಗಿ ಜೆಡಿಎಸ್ – ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಭಾಗಿಯಾದ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಮಾಜಿ ಬೆಳೆ ಆಯೋಗದ ಅಧ್ಯಕ್ಷ ಹನುಮನ ಗೌಡ ಬೆಳಗುರ್ಕಿ, ಜೆಡಿಎಸ್ ತಾಲೂಕ ಘಟಕ ಅಧ್ಯಕ್ಷ ಬಸವರಾಜ ನಾಡಗೌಡ, ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ವೆಂಕೋಬ್ ನಾಯಕ್, ಜಿಲ್ಲಾ ಪಂ, ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಮುಖಂಡರಾದ – ಅಲ್ಲಮಪ್ರಭು ಪೂಜಾರಿ, ಎಂ. ದೊಡ್ಡ ಬಸವರಾಜ, ನಿರುಪಾದಿ ನಾಗಲಾಪುರ, ದಾಸರಿ ಸತ್ಯನಾರಾಯಣ, ಲಿಂಗರಾಜ್ ಹೂಗಾರ್, ಅಶೋಕ್ ಗದ್ರಟ್ಟಿಗಿ, ರವಿ ಗೌಡ, ಇನ್ನು ಅನೇಕರಿದ್ದರು
ವರದಿ: ಬಸವರಾಜ ಬುಕ್ಕನಹಟ್ಟಿ




