ಬೆಂಗಳೂರು : ರಾಜ್ಯದಲ್ಲಿ ಹಲವಾರು ನಾಯಕರು ಪಕ್ಷವನ್ನು ಹುಟ್ಟುಹಾಕಿ ಪಕ್ಷವನ್ನು ಮುನ್ನಡೆಸಲು ಆಗದೆ ಇರುವ ವ್ಯಕ್ತಿಗಳು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಆದರೆ ನಮ್ಮ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಎಕೈಕ ಪಕ್ಷ ಜೆಡಿಎಸ್ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎನ್ ಜವರಾಯಿಗೌಡ ಹೇಳಿದರು.
ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿಯ ನಾಡಪ್ರಭು ಕೆಂಪೇಗೌಡರ ವೃತ್ತದ ಬಳಿ ಜೆಡಿಎಸ್ ಪಕ್ಷದ ವಾರ್ಡ ಅಧ್ಯಕ್ಷರು ಮುಖಂಡರು ಆಯೋಜಿಸಿದ್ದ ಜೆಡಿಎಸ್ ಬೃಹತ್ ಕಾರ್ಯಕರ್ತರ ಸಮಾರಂಭದಲ್ಲಿ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರೇಟರ್ ಬೆಂಗಳೂರು ಚುನಾವಣೆಗೆ ಯಾವಾಗಲಾದರೂ ಬರಲಿ ಚುನಾವಣೆ ಎದುರಿಸಲಿ ಸಿದ್ದರಾಗಿ ಎಂದು ಮುಖಂಡರಿಗೆ ಕಾರ್ಯಕರ್ತರಿಗೆ ಜವರಾಯಿಗೌಡ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹನುಮಂತೆಗೌಡ, ಯುವ ಮುಖಂಡರಾದ ಸಂತೋಷ್ ಜವರಾಯಿಗೌಡ, ಎಜಿಎನ್ ಕನ್ವೆನ್ಷನ್ ಮಾಲೀಕ ಹಾಗೂ ಜೆಡಿಎಸ್ ಯುವ ನಾಯಕ ಅಜಯ್, ಎಸ್ಸಿ ಘಟಕದ ಅಧ್ಯಕ್ಷ ಚೆಲುವರಾಜು, ಧನಂಜಯ ಗೌಡ, ಪ್ರದೀಪ್ ಕುಮಾರ್, ನವೀನ್, ದೇವು, ಗೋಪಾಲ್, ದೀಪು ಮಹಿಳಾ ಘಟಕದ ಅಧ್ಯಕ್ಷೆ ಸಾಕಮ್ಮ ಸೇರಿದಂತೆ ಜೆಡಿಎಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




