ಜೆಡಿಎಸ್ ಪಕ್ಷ ರಸ್ತೆ ತಡೆದು ಪ್ರತಿಭಟನೆ: ರಾಜ್ಯ ಸರ್ಕಾರ, ಹಾಗೂ ಶಾಸಕ ಎಚ್.ವಿ ವೆಂಕಟೇಶ್ ವಿರುದ್ದ ದಿಕ್ಕಾರ ಕೂಗಿದರು
ತುಮಕೂರು :ಪಾವಗಡ ಪಟ್ಟಣದಲ್ಲಿ ದಿನಾಂಕ 6/08/25 ಬುಧವಾರರಂದು ಜೆ.ಡಿ.ಎಸ್ ಪಕ್ಷದ ವತಿಯಿಂದ ಪುರಸಭೆ ಮತ್ತು ರಾಜ್ಯ ಸರ್ಕಾರ ವಿರುದ್ದ ಪಟ್ಟಣ ನಿರಕ್ಷಣಾ ಮಂದಿರದಿಂದ ಮೆರವಣಿಗೆ ಮೂಲಕ ಪುರಸಭೆ ಕಛೇರಿಗೆ ಭೇಟಿ ನೀಡಿ ಪ್ರತಿಭಟನೆ ನಡೆಸಿ ನಂತರ ಪೊಲೀಸ್ ಇಲಾಖೆಯ ಪುರಸಭೆ ಕಚೇರಿಗೆ ಜೆಡಿಎಸ್ ಪಕ್ಷದ ವತಿಯಿಂದ ಮನವಿಪತ್ರ ಸಲ್ಲಿಸುವುದಕ್ಕೆ ಹೋಗುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಪುರಸಭೆ ಕಚೇರಿ ಒಳಗಡೆ ನೀವು ಹೋಗಬಾರದೆಂದು ಅಡ್ಡಗಟ್ಟಿ ನಿಲ್ಲಿಸಿದರು ಅದಕ್ಕೆ ಜೆಡಿಎಸ್ ಪಕ್ಷ ಕಾರ್ಯಕರ್ತರು ಹಾಗೂ ಮುಖಂಡರುಗಳು ಕೇಳುವ ನಿಮಿಷಗಳು ಪೋಲಿಸ್ ಇಲಾಖೆ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಿಕ್ಕ ಮುಖ ನಡೆಯಿತು.
ಇದೇ ವೇಳೆಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಪುರಸಭೆಯಲ್ಲಿ ಕಾಂಗ್ರೇಸ್ ಪಕ್ಷ ಸೇಡಿನ ರಾಜಕಾರಣ ಮಾಡುತ್ತಿದೆ. ಪಟ್ಟಣದ ಪುರಸಭೆಯ ಅಧಿಕಾರಿಗಳು ಪ್ರತಿ ವಾರ್ಡುಗಳಲ್ಲಿ ಸಮಸ್ಯೆ ಬಗ್ಗೆ, ರಸ್ತೆ.ನೀರು ಹಾಗೂ ಬೀದಿ ದೀಪ ಸೇರದಿಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ.ಪಟ್ಟಣದ ಕುಮಾರಸ್ವಾಮಿ ಬಡಾವಣೆಯನ್ನು ವೆಂಕಟರಮಣಪ್ಪ ಬಡಾವಣೆ ಎಂದು ಮರು ನಾಮಕರಣ ಮಾಡಲು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ತಕ್ಷಣಕ್ಕೆ ಬಡಾವಣೆ ಹೆಸರು ಬದಲಾವಣೆ ಕೈಬಿಡಬೇಕು ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಜೆಡಿಎಸ್ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ಎಚ್ಚರಿಸಿದರು.
ಪ್ರತಿಭಟನೆ ನಡೆಸಿ ನಂತರ ಮನವಿ ಪತ್ರ ಸಲ್ಲಿಸಿ ನಂತರ ತಾಲೂಕ್ ಕಚೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಪುರಸಭೆ ಅಧ್ಯಕ್ಷ ಸುದೇಶ ಬಾಬು ಮತ್ತು ತಹಶೀಲ್ದಾರ್ ಡಿ.ಎನ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.

ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಆರ್.ಸಿ ಅಂಜಿನಪ್ಪ ಮಾತನಾಡಿ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೇಸ್ ಸರ್ಕಾರ ಬಿಟ್ಟಿ ಭ್ಯಾಗಗಳನ್ನು ತಂದು ದೇಶದ ಬೆನ್ನೆಲುಬಾಗಿರುವ ರಾಜ್ಯದ ರೈತರು ಮುಂಗಾರಿಗೆ ಬೆಳೆಗಳನ್ನಿಟ್ಟು ಸರಗೊಬ್ಬರಗಳಿಗೆ ಅಲೆದಾಡುವಂತೆ ಮಾಡಿದೆ. ರೈತರು ಇಟ್ಟ ಬೆಳೆಗೆ ಡಿಎಪಿ,ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರಗಳು ಅಂಗಡಿಗಳಲ್ಲಿ ದೊರೆಯುತ್ತಿಲ್ಲಾ. ಒಂದು ಚೀಲ ಯುರಿಯಾಗೆ 600 ರೂಪಾಯಿ ಕೊಟ್ಟು ಖರಿದಿಸುವಂತಾಗಿದೆ. ತಾಲ್ಲೂಕಿನ ರೈತರು ಆಂದ್ರದಿಂದ ರಸಗೊಬ್ಬರ ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಗ್ಯಾರಂಟಿಯನ್ನು ಸರಿಯಾಗಿ ಕೊಡದೆ, ರೈತರಿಗೆ ರಸಗೊಬ್ಬರವೂ ಕೊಡದೆ. ರಾಜ್ಯ ಸರ್ಕಾರದ ಸಚಿವರು, ಕೃಷಿ ಸಚಿವರು ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸಿ ರೈತರಿಗೆ ಯಾಮಾರಿಸುತ್ತಿದೆ. ಆದ್ದರಿಂದ ತಾಲ್ಲೂಕಿನ ಶಾಸಕರು ರೈತರಿಂದ ರಸಗೊಬ್ಬರದ ಬೇಡಿಗೆ ಪಡೆದು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲರಾಗಿದ್ದಾರೆ. ಇಂತಹ ಸರ್ಕಾರ ಹಾಗೂ ಶಾಸಕರು ತಾಲ್ಲೂಕಿಗೆ ಅವಶ್ಯಕವೇ ಎಂದು ಪ್ರಶ್ನಿಸಿ ತಕ್ಷಣ ರೈತರಿಗೆ ರಾಜ್ಯ ಸರ್ಕಾರ ಕಾರಣಗಳನ್ನು ಹೇಳದೆ ರಸಗೊಬ್ಬರ ಪೂರೈಸಬೇಕಿದೆ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಈ ವೇಳೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ. ತಾಲ್ಲೂಕು ಅಧ್ಯಕ್ಷ ಎನ್,ಎ ಈರಣ್ಣ, ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಕಾರ್ಯಧ್ಯಕ್ಷ ಗೋವಿಂದ ಬಾಬು, ನಗರ ಅಧ್ಯಕ್ಷ ತಿಮ್ಮರಾಜು, ಮಾಜಿ ಪುರಸಭೆ ಸದಸ್ಯ ಮನು ಮಹೇಶ್, ಗುಟ್ಟಳ್ಳಿ ಮಣಿ. ಮುಖಂಡರಾದ ಕೊತ್ತೂರು ನಾಗೇಶ್,ಕೋಟಗುಡ್ಡ ಅಂಜಿನಪ್ಪ,. ಗಡ್ಡಂ ತಿಮ್ಮಪ್ಪ. ಸತ್ಯನಾರಾಯಣ್,ಕಾವಲಗೆರೆ ರಾಮಾಂಜಿ, ನಗರ ಯುವ ಅಧ್ಯಕ್ಷ ಆಪ್ ಬಂಡೆ ಗೋಪಾಲ್, ರೈತ ಘಟಕದ ಅಧ್ಯಕ್ಷ ಗಂಗಾಧರ್ ನಾಯ್ಡು, ಯುವ ಘಟಕ ಅಧ್ಯಕ್ಷ ಭರತ್ ಕುಮಾರ್,ಯುವಜನತಾದಳ ಕಾರ್ಯಧ್ಯಕ್ಷ ಗಗನ್, ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಯೂನೀಸ್ ನಾಗಲಮಡಿಕೆ ರಾಜಗೋಪಾಲ್ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ವರದಿ: ಶಿವಾನಂದ




