ಸಿಂಧನೂರು: ಕಳೆದ ಹಲವು ದಿನಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಖಂಡಿಸುತ್ತ ವೀರೇಂದ್ರ ಹೆಗ್ಗಡೆ ಅವರ ಘನತೆ ಹಾಗೂ ಕ್ಷೇತ್ರದ ಪಾವಿತ್ರ್ಯತೆ ಎತ್ತಿ ಹಿಡಿಯುವಂತೆ ಜೆಡಿಎಸ್ ಪಕ್ಷ ಸತ್ಯ ಯಾತ್ರೆ ಕೈಗೊಂಡಿದೆ.
ಧರ್ಮಸ್ಥಳ ಸಂಸ್ಥೆಯು ಸಮಾಜದ ವಿವಿಧ ವರ್ಗಗಳಿಗೆ ಸಹಾಯ ಮಾಡಿದ್ದರೂ ಈಗ ವ್ಯವಸ್ಥಿತವಾಗಿ ಕ್ಷೇತ್ರಕ್ಕೆ ಕಳಂಕ ತರಲಾಗುತ್ತದೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಪತ್ರಿಕಾ ಭವನದಲ್ಲಿ ಗೋಷ್ಠಿಯಲ್ಲಿ ಮಾತನಾಡಿ ಆಗಸ್ಟ್ 31ರಂದು ಧರ್ಮಸ್ಥಳಕ್ಕೆ ಹೊರಡುವ ಸತ್ಯ ಯಾತ್ರೆಯಲ್ಲಿ ಯಾವುದೇ ರಾಜಕೀಯ ಇಲ್ಲ ಪಕ್ಷಾತೀತವಾಗಿ ಈ ಯಾತ್ರೆ ಕೈಗೊಳ್ಳುತ್ತೇವೆ ಎಂದರು.
ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಕ್ಕೆ ಒಂದುವರೆ ಎರಡು ತಿಂಗಳ ಗಳಿಂದ ಮಾನಸಿಕ ಹಿಂಸೆ ನೀಡಿದ್ದಾರೆ ಆದರೆ ಅವರ ಕುಟುಂಬದವರು ತಾಳ್ಮೆ ಮತ್ತು ಸಹನೆಯಿಂದ ನಡೆದುಕೊಂಡಿದ್ದಾರೆ ನಾವು ಅವರ ಜೊತೆ ನಿಲ್ಲುತ್ತೇವೆ ಹೆಗ್ಗಡೆ ಅವರ ಕುಟುಂಬಕ್ಕೆ ಜೆಡಿಎಸ್ ಬೆಂಬಲ ವಿದೆ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಮಾಡಿ ವೀರೇಂದ್ರ ಹೆಗಡೆ ಅವರನ್ನು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ಧರ್ಮನ ಗೌಡ ಮಲ್ಕಾಪುರ. ಅಶೋಕ್ ಗೌಡ ಗದ್ರಟಗಿ. ರವಿ ಗೌಡ. ದಾಸರಿ ಸತ್ಯನಾರಾಯಣ. ನಿರುಪಾದಿ ನಾಗಲಾಪುರ ಸುಮಿತ್ ತಡಕಲ್. ಶಂಕರ್ ಗೌಡ. ಆಶಿಫ್. ಇನ್ನು ಮುಂತಾದವರು ಭಾಗವಹಿಸಿದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ




