ನಿಪ್ಪಾಣಿ : ಕಳೆದ ಎರಡು ದಶಕಗಳಿಂದ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಬಸವೇಶ್ವರ ಯುವಕ ಮಂಡಳ ಹಾಗೂ ಕಿತ್ತೂರು ಕದಳಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಬುಧವಾರದಂದು ಬಸವೇಶ್ವರ ಜಯಂತಿ ಪ್ರಯುಕ್ತ ನಿಡಸೋಸಿ ಮಠದ ದಾಸೋಹದ ಮಾದರಿಯಲ್ಲಿ ಸಿದ್ದೇಶ್ವರ ಮಂದಿರದಲ್ಲಿ 10,000ಕ್ಕೂ ಅಧಿಕ ಭಕ್ತರಿಗೆ ಹುಗ್ಗಿ ದಾಸೋಹ ನಡೆಯಿತು.
ಬೆಳಿಗ್ಗೆ 11 ಗಂಟೆಗೆ ಮೊದಲು ಪ್ರಸಾದ ನೈವೇದ್ಯವನ್ನು ಸಿದ್ದೇಶ್ವರ ದೇವರಿಗೆ ಅರ್ಪಿಸಿ ಬಸವೇಶ್ವರ ಯುವಕ ಮಂಡಳಿ ಹಾಗೂ ಕದಳಿ ವೇದಿಕೆ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಶಿವಾನಂದ ಸ್ವಾಮಿ ಅವರ ಹಸ್ತದಿಂದ ಹುಗ್ಗಿದಾಸೋಹ ಪ್ರಾರಂಭವಾಯಿತು.ಈ ಸಂದರ್ಭದಲ್ಲಿ ಅತ್ಯಂತ ಶಿಸ್ತು ಹಾಗೂ ಸoಯಮದಿಂದ ಮಂದಿರದಲ್ಲಿ ಸರಣಿಯಲ್ಲಿ ಕುಳಿತು ಸದ್ಭಕ್ತರು ಪ್ರಸಾದ ಸ್ವೀಕರಿಸಿದರು. ಗ್ರಾಮದ ಸುತ್ತಲಿನ ಹಳ್ಳಿಗಳಾದ ಶಮನೇವಾಡಿ ಭೋಜ, ಜನವಾಡ ಸಿರದವಾಡ ಗಳತಗಾ ಸೇರಿದಂತೆ ದಿನವಿಡೀ ಹತ್ತು ಸಾವಿರಕ್ಕೂ ಅಧಿಕ ಭಕ್ತರು ಪಾಯಸ ಪ್ರಸಾದ ಸ್ವೀಕರಿಸಿದರು.
ದಾಸೋಹ ಸಮಾರಂಭದಲ್ಲಿ ಬಸವೇಶ್ವರ ಯುವಕ ಮಂಡಳ ಹಾಗೂ ಕಿತ್ತೂರು ಕದಳಿ ವೇದಿಕೆಯ ಭಗಿಣಿಯರಿಂದ ಹಾಗೂ ಕಾರ್ಯಕರ್ತರಿಂದ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಮಹಾವೀರ ಚಿಂಚಣೆ




