ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಹಸಿರು ಕ್ರಾಂತಿ ಹರಿಕಾರ ದೀನ ದಲಿತ ನಾಯಕ ಮಾಜಿ ಉಪ ಪ್ರಧಾನಮಂತ್ರಿಗಳಾದ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ೧೧೮ ನೆಯ ಜಯಂತೋತ್ಸವ ಕಾರ್ಯಕ್ರಮ ಐಗಳಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಜರುಗಿತು. ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಐಗಳಿ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ್ ಸಾಗನೂರ್ ಅವರು ಪೂಜೆ ಸಲ್ಲಿಸಿದರು ನಂತರ ಮಾತನಾಡಿ ಡಾಕ್ಟರ್ ಬಾಬು ಜಗಜೀವನ್ ರಾಮ ಅವರ ವ್ಯಕ್ತಿತ್ವ ಅವರ ಗುಣಗಳನ್ನು ನಾವು ಈಗಿನ ಯುವಕರು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಅವರು ಸಾಮಾಜಿಕ ಆರ್ಥಿಕ ಸಮಾನತೆಗಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ ಅವರು ಮೂಲತ ಬಿಹಾರ ರಾಜ್ಯದಲ್ಲಿ ಜನಿಸಿ ಹುಟ್ಟು ಹೋರಾಟಗಾರರಾಗಿ ಹಲವಾರು ಬಾರಿ ಬ್ರಿಟಿಷರ ಬಂಧನಕ್ಕೆ ಒಳಗಾಗಿದ್ದರು ಹೋರಾಟದಿಂದಾಗಿ ರಾಜಕೀಯ ಪಕ್ಷಗಳ ನಾಯಕರಾಗಿ ಹೊರಹೊಮ್ಮಿದ್ದಾರೆ.
ರಾಜಕೀಯವಾಗಿ ಪ್ರವೇಶಿಸಿ ದೇಶದ ಮೊದಲನೆಯ ದಲಿತ ಉಪ ಪ್ರಧಾನ ಮಂತ್ರಿಗಳಾಗಿ ಕಾರ್ಮಿಕರ ಸಚಿವರಾಗಿ ಹಾಗೂ ರೈಲ್ವೆ ಖಾತೆ ಸಚಿವರಾಗಿ ಈ ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಕಾರ್ಮಿಕರ ಸಚಿವರಾಗಿದ್ದಾಗ 12 ಗಂಟೆಗಳ ಕೆಲಸ ಮಾಡುವ ಪರಿಸ್ಥಿತಿ ಇತ್ತು ಅಂದು ಬದಲಾಯಿಸಿ ಎಂಟು ಗಂಟೆವರೆಗೆ ಸಮಯ ನಿಗದಿ ಮಾಡಿದ ಮುತ್ಸದ್ದಿ ನಾಯಕ ಜಗಜೀವನ್ ರಾಮ್. ನೀರಾವರಿ, ಶೈಕ್ಷಣಿಕ, ಸಾಮಾಜಿಕ ಆರ್ಥಿಕವಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಈ ದೇಶದ ಎಲ್ಲ ಬಡ ಜನರ ಬದುಕು ಕಟ್ಟಿಕೊಳ್ಳಲು ಶ್ರಮಿಸಿದ್ದಾರೆ ಅವರು ಮಾಡಿದ ಕೆಲಸಗಳು ಇಂದಿಗೂ ಅಜರಾಮವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪಾಟಕ್ ಅವರು ಮಾತನಾಡಿದರು. ಗ್ರಾಮದ ಮುಖಂಡರಾದ ಅಪ್ಪಾಸಾಬ ಪಾಟೀಲ್ ಅಪ್ಪಸಾಬ ತೆಲಸಂಗ ಗ್ರಾಮ್ ಪಂಚಾಯತಿ ಸದಸ್ಯರಾದ ಸುರೇಶ್ ಬಿಜ್ಜರಗಿ ಮನೋಹರ್ ಕಾಂಬಳೆ ಪಾಂಡು ಬೋಸ್ಲೆ ಹಿರಿಯರಾದ ಸಿದ್ದಪ್ಪ ಗಂಟಿ ಮಾದಿಗ ಸಮುದಾಯದ ಮುಖಂಡರಾದ ರಾಚಪ್ಪ ಮಾದರ್ ಬಸಪ್ಪ ಮಲ್ಲಪ್ಪ ಮಾದರ್ ಮಾದರ್ ಸುಭಾಸ್ ಮಾದರ ಸಚಿನ್ ಮಾದರ್ ಮಹಾದೇವ ಕೊರೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಾದ ಗಿರೀಶ್ ಅವಟಿ ಕ್ಲಾಕ್ ಅಪ್ಪು ಮದಬಾವಿ ಮಾಳಪ್ಪ ಸತಗೇರ ಪ್ರವೀಣ್ ತೆಲಸಂಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು