Ad imageAd image

ಜಿತೇಶ್ ಸಿಡಿಲಬ್ಬರದ ಬ್ಯಾಟಿಂಗ್: ಆರ್ ಸಿಬಿಗೆ ಜಯ

Bharath Vaibhav
ಜಿತೇಶ್ ಸಿಡಿಲಬ್ಬರದ ಬ್ಯಾಟಿಂಗ್: ಆರ್ ಸಿಬಿಗೆ ಜಯ
WhatsApp Group Join Now
Telegram Group Join Now

ಲಕ್ನೋ: ಜಿತೇಶ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 70 ನೇ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಗೇಂಟ್ಸ್ ವಿರುದ್ಧ ರೋಚಕ ಹಣಾಹಣಿಯಲ್ಲಿ 6 ವಿಕೆಟ್ ಗಳಿಂದ ಗೆದ್ದು ಬೀಗಿತು.

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಗೇಂಟ್ಸ್ ತಂಡ ನಿಗದಿತ 20 ಓವರುಗಳಲ್ಲಿ 3 ವಿಕೆಟ್ ಗೆ 227 ರನ್ ಗಳಿಸಿತು. ದೊಡ್ಡ ಮೊತ್ತ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರುಗಳಲ್ಲಿ 4 ವಿಕೆಟ್ ಗೆ 230 ರನ್ ಗಳಿಸಿ ಪ್ರಚಂಡ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾನಾಡಿದ ಎಲ್ಲ 14 ಲೀಗ್ ಪಂದ್ಯಗಳಿಂದ 9 ರಲ್ಲಿ ಗೆಲುವು ಒಂದು ಪಂದ್ಯ (ಫಲಿತಾಂಶ ಕಂಡಿಲ್ಲ) ಸೇರಿ ಒಟ್ಟು 19 ಅಂಕಗಳೊಂದಿಗೆ  ಎರಡನೇ ಸ್ಥಾನ ಉಳಿಸಿಕೊಂಡಿತು.

ಸ್ಕೋರ್ ವಿವರ:

ಲಕ್ನೋ ಸೂಪರ್ ಗೇಂಟ್ಸ್ 20 ಓವರುಗಳಲ್ಲಿ 3 ವಿಕೆಟ್ ಗೆ 227

ರಿಷಬ್ ಪಂತ್ 118 ( 61 ಎಸೆತ, 11 ಬೌಂಡರಿ, 8 ಸಿಕ್ಸರ್, ಮಿಚೆಲ್ ಮಾರ್ಷ 67 ( 37 ಎಸೆತ, 4 ಬೌಂಡರಿ, 5 ಸಿಕ್ಸರ್)

ಎನ್ ತುಷಾರಾ 26 ಕ್ಕೆ 1

ರಾಯಲ್ ಚಾಲೆಂಜರ್ಸ್ ಬೆಂಗಳೂರು 18.4 ಓವರುಗಳಲ್ಲಿ 4 ವಿಕೆಟ್ ಗೆ 230

( ಜಿತೇಶ್ ಶರ್ಮಾ 85 ( 33 ಎಸೆತ, 8 ಬೌಂಡರಿ, 6 ಸಿಕ್ಸರ್)  ವಿರಾಟ್ ಕೊಹ್ಲಿ 54 ( 30 ಎಸೆತ, 10 ಬೌಂಡರಿ)  ಆಕಾಶ್ ಮಹಾರಾಜ್ ಸಿಂಗ್  40 ಕ್ಕೆ 1  

                                                                                                                                       —-ಪಂದ್ಯ ಶ್ರೇಷ್ಠ: ಜಿತೇಶ್ ಶರ್ಮಾ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!