Ad imageAd image

ಸಾಲುಗಾರರೇ ಸಹಕಾರಿ ಸಂಘದ ಆರ್ಥಿಕ ಸಮೃದ್ಧಿಗೆ ಜೀವಾಳ:ಡಾ. ಶ್ರದ್ದಾನಂದ ಸ್ವಾಮೀಜಿ ಅಭಿಮತ

Bharath Vaibhav
ಸಾಲುಗಾರರೇ ಸಹಕಾರಿ ಸಂಘದ ಆರ್ಥಿಕ ಸಮೃದ್ಧಿಗೆ ಜೀವಾಳ:ಡಾ. ಶ್ರದ್ದಾನಂದ ಸ್ವಾಮೀಜಿ ಅಭಿಮತ
WhatsApp Group Join Now
Telegram Group Join Now

ಸಾಲುಗಾರರೇ ಸಹಕಾರಿ ಸಂಘದ ಆರ್ಥಿಕ ಸಮೃದ್ಧಿಗೆ ಜೀವಾಳ :ಸದಲಗಾ ದಲ್ಲಿ ಶ್ರೀ ಸಮರ್ಥ ಸಂಸ್ಥೆಯ ಉದ್ಘಾಟನೆ ವೇಳೆ ಡಾ. ಶ್ರದ್ದಾನಂದ ಸ್ವಾಮೀಜಿ ಅಭಿಮತ.

ನಿಪ್ಪಾಣಿ :ರಾಜ್ಯದಲ್ಲಿ ಅತ್ಯಧಿಕ ಸಹಕಾರಿ ಸಂಘಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿಯ ಸಹಕಾರಿ ಸಂಘಗಳ ಆರ್ಥಿಕ ಸಮೃದ್ಧಿಗೆ ಗ್ರಾಹಕರು, ಹಾಗೂ ಸಾಲಗಾರರೇ ಜೀವಾಳ ಸಹಕಾರಿ ಸಂಘಗಳನ್ನು ಸ್ಥಾಪನೆ ಮಾಡುವುದು ಮಹತ್ವದಲ್ಲ ಆದರೆ ಸಂಘಗಳಲ್ಲಿಯ ಸಾಲವನ್ನು ಪಡೆದು ಅದರ ಸದುಪಯೋಗ ಪಡೆದುಕೊಂಡು ಸಕಾಲಕ್ಕೆ ಮರುಪಾವತಿಸುವ ಸಾಲಗಾರರೇ ನಿಜವಾದ ಮಾಲೀಕರು ಎಂದು ಸದಲಗಾ ಗೀತಾಶ್ರಮದ ಡಾಕ್ಟರ್ ಶ್ರದ್ದಾನಂದ ಸ್ವಾಮೀಜಿ ತಿಳಿಸಿದರು. ಅವರು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನೂತನವಾಗಿ ಸ್ಥಾಪಿಸಲಾದ ಶ್ರೀ ಸಮರ್ಥ್ ಕೋ ಆಪ್ ಕ್ರೆಡಿಟ್ ಸೊಸೈಟಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪ್ರಾರಂಭದಲ್ಲಿ ಕಾರದಗಾ ಗ್ರಾಮದ ಮಲ್ಲಂಗಬಾಬಾ ಅವನ್ನಾ ಪೂಜಾರಿ, ಸಂಸ್ಥಾಪಕ ರಣಜಿತ್ ಜಗತಾಪ ಅಧ್ಯಕ್ಷ ಅಶೋಕ ಪಾಟೀಲ ಉಪಾಧ್ಯಕ್ಷ ಪ್ರವೀಣ್ ಕಮತೆ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ಡಾ. ಶ್ರದ್ಧಾನಂದ ಸ್ವಾಮೀಜಿ ರಿಬ್ಬನ್ ಬಿಚ್ಚಿ ಸಂಘದ ಕಾರ್ಯಾಲಯದ ಉದ್ಘಾಟನೆ ಮಾಡಿದರು. ತದನಂತರ ಪುರಸಭೆ ಅಧ್ಯಕ್ಷ ಬಸವರಾಜ ಗುಂಡಕಲ್ಲೇ ಹಿರಿಯ ನಿವೃತ್ತ ನ್ಯಾಯವಾದಿ ಡಿ ಎಸ್ ಪಾಟೀಲ್ ಹಾಗೂ ಶ್ರೀಗಳ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆ ನಡೆಯಿತು.ಇದೇ ವೇಳೆಗೆ ನ್ಯಾಯವಾದಿ ದಾದಾಸಾಹೇಬ್ ಪಾಟೀಲ್ ಮಾತನಾಡಿ ರೈತರ ಆರ್ಥಿಕ ಸಮೃದ್ಧಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ ಪ್ರಾರಂಭವಾದ ಸಮರ್ಥ ಸಂಸ್ಥೆ ರಾಜಕೀಯ ರಹಿತ ಪಾರದರ್ಶಕ ಆಡಳಿತದೊಂದಿಗೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಇದೇ ವೇಳೆಗೆ ಸಂಸ್ಥೆಯ ವತಿಯಿಂದ ವೇದಿಕೆಯಲ್ಲಿಯ ಗಣ್ಯರಿಗೆ ಶಾಲ, ಶ್ರೀಫಲ,ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಪಟ್ಟಣದ ದಯೋದಯ ಗೋಶಾಲೆ ಗೆ 10ಸಾವಿರ ರೂಪಾಯಿಗಳ ಧನಾದೇಶ ನೀಡಲಾಯಿತು.ಸಮಾರಂಭದಲ್ಲಿ ಸಂಜಯ ಪಾಟೀಲ ಸಂಚಾಲಕರಾದ ಅಭಿನಂದನ್ ದಂಡಗೆ, ಬಾಲೆ ಚಂದ ಪಠಾಣ, ಶಿರೀಷ್ ಅಡಕೆ, ಪ್ರವೀಣ ತಾರದಾಳೆ, ರಾಜೇಶ್ ಶಾಹ, ನಾಮದೇವ ಬಾಮನೆ, ಮಹಾವೀರ ಡಂಗ್ ಗಾಯತ್ರಿ ಖೋತ,ರೇಷ್ಮಾ ಕೋಣೆ ಬಾಬುರಾವ ಹೂಗಾರ ಅಮಿತ ಮುತ್ನಾಳೆ, ಮೋಹನ್ ಪಾಂಡೇಕರ್ ಕಾರ್ಯದರ್ಶಿ ಗಾಯತ್ರಿ ಪಾಟೀಲ ಉಪ ನೋಂದಣಿ ಸಹಾಯಕ ಐ ಎನ್ ನದಾಫ, ಮುಬಾರಕ್ ದಪೇದಾರ ರಾಜು ಡಾಂಗೆ, ಅಜರುದ್ದೀನ್ ಶೇಖಜಿ,ತಾತ್ಯಾಸಾಹೇಬ ಕದಂ ಸೇರಿದಂತೆ ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ತಿತರಿದ್ದರು.

ವರದಿ:ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!