ಮೊಳಕಾಲ್ಮೂರು:ಸ್ವಕುಳಸಾಳಿ ಜನಾಂಗದ ಆರಾಧ್ಯ ದೈವ ಭಗವಾನ್ ಶ್ರೀ ಶ್ರೀ ಜಿಹ್ವೇಶ್ವರ ಜಯಂತಿ ಮೊಳಕಾಲ್ಮುರು ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಸಾಕ್ಷಾತ್ ಶಿವನ ಸ್ವರೂಪವಾದ ಸ್ವಕುಳಸಾಳಿ ಜನಾಂಗದ ಆರಾಧ್ಯ ದೈವ ಭಗವಾನ್ ಶ್ರೀ ಶ್ರೀ ಜಿಹ್ವೇಶ್ವರ ಮಹಾರಾಜರು ಎಂದು ಸೊಕ್ಕು ಸಾಲಿ ಸಮಾಜದ ಅಧ್ಯಕ್ಷರಾದ ನರೇಂದ್ರ ಗಾಯಕೋಡ ರವರು ರವರು ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಸ್ವಕುಳಸಾಳಿಸಮಾಜ ದುರ್ಗಾದೇವಿ ಮಹಿಳಾ ಮಂಡಳಿ ಯುವಕರ ಸಂಘ ನೌಕರರ ಸಂಘ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ ಜಿಹ್ವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಬುಧುವಾರ ಸಂಜೆ ಮಾತೇರಿಂದ ಗಂಗಾ ಪೂಜೆ ಹಾಗೂ ಅಗ್ನಿ ಪ್ರತಿಷ್ಠಾಪನೆ ನಡಿಯಿತು, ಅದೇ ರೀತಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಪಟ್ಟಣದ ಪಾಂಡುರಂಗ ದೇವಸ್ಥಾನದಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ನಂತರ ಸಮಾಜದ ವತಿಯಿಂದ ಅನ್ನಸಂತರ್ಪಣೆ ಮಾಡಿ ವಿಶೇಷವಾಗಿ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಮಹಿಳೆಯರು ಸಮಾಜದ ಮುಖಂಡರು ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ :ಪಿಎಂ ಗಂಗಾಧರ




