ಚಾಮರಾಜನಗರ: ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 209ಹುಲ್ಲೆಪುರ ಮಾರ್ಗವಾಗಿ ಕೆಂಪನಪುರಕೆ ಸೇರುವ 3.50ಕಿ ಮೀಟರ್ ರಸ್ತೆಗೆ 3ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಾಗೂ ಅಂಬೇಡ್ಕರ್ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ರವರ ಭೂಮಿಪೂಜೆ ನೆರವೇರಿಸಿದರು.
ಹುಲ್ಲೆಪುರ ಮಾರ್ಗ ಕೆಂಪನಪುರ ರಸ್ತೆಯ ಶಂಕುಸ್ಥಾಪನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಶಾಸಕರು ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷರಾದ ಚಂದ್ರು, ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಯೋಗೇಶ್, ಕೆಂಪನಪುರ ಗ್ರಾಮದ ಹಾಲಿ ಅಧ್ಯಕ್ಷರಾದ ಮಾದೇಶ, ಶ್ರೀನಿವಾಸ್, ರವಿಶಂಕರ್, ರಂಗನಾಯಕ, ಬಸವಶೆಟ್ಟಿ, ಮಾದಪ್ಪ ನಾಗಲಿಂಗ ನಾಯಕ, AEE ಚಿಕ್ಕಲಿಂಗಯ್ಯ, ಯೋಗೇದ್ರ,ವಿಜಯ್, ಶಿವರಾಜ್ ಮದ್ದೂರು, ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




