ಮೊಳಕಾಲ್ಮೂರು : ಪಟ್ಟಣದ ತುಂಬೆಲ್ಲ ಪೈಪ್ ಲೈನ್ ಒಡೆದು ಹೋಗಿ ನೀರು ಪೋಲಾಗುತ್ತಿದ್ದರು ಕಣ್ಮುಚ್ಚಿ ಕುಳಿತ ಪಟ್ಟಣ ಪಂಚಾಯಿತಿ ಅಧಿಕಾರಿಗಳು. ಸುಮಾರು ದಿನಗಳಿಂದ ಪೈಪ್ ಲೈನ್ ಹೊಡೆದು ಹೋಗಿ ನೀರು ಪೋಲಾಗುತ್ತಿದ್ದರು ಕೂಡ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ನನಗೂ ಇದಕ್ಕೂ ಸಂಬಂಧ ಇಲ್ಲವಂತೆ ವರ್ತಿಸುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮುಖ್ಯ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನಾಟಿ ಮಾಡಿದರು ಆ ಸಮಯದಲ್ಲಿ ಗಾಯತ್ರಿ ಶಾಲೆ ಮುಂಭಾಗ ಪೈಪ್ ಹೊಡೆದು ಹೋದರು ಕೂಡ ಏನು ಆಗಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಶಾಲೆ ಮುಂಭಾಗ ಪೈಪ್ ಹೊಡೆದು ಹೋಗಿ ಶಾಲೆ ಮುಂದೆ ನೀರು ನಿಂತಿರುವ ಘಟನೆ ನಡೆದಿದೆ ಮಕ್ಕಳಿಗೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರು ತಮ್ಮ ತಮ್ಮ ವಾಟ್ಸಪ್ ಮತ್ತು ಫೇಸ್ಬುಕ್ ಗಳಲ್ಲಿ ಹಾಕಿದರೂ ಕೂಡ ಎಚ್ಚೆತ್ತುಕೊಳ್ಳದೆ ನಿದ್ದೆಗೆ ಜಾರಿದ ಅಧಿಕಾರಿಗಳು..
ಅದೇ ರೀತಿ ಪಟ್ಟಣದ ಮುಖ್ಯ ರಸ್ತೆಯು ನಿರ್ಮಾಣವಾಗಿ ಮೂರು ವರ್ಷಗಳು ಕಳೆದಿದೆ ಕಳೆದ ಕೆಲ ದಿನಗಳಿಂದ ಚರಂಡಿ ಮೇಲೆ ಟ್ರ್ಯಾಕ್ಟರ್ ಸಿಲುಕಿಕೊಂಡು ಘಟನೆ ನಡೆದಿದೆ, ಮುಖ್ಯರಸ್ತೆಯು ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ ಕಾರಣ ರೋಡ್ ಪಕ್ಕದ ಡಿವೈಡರ್ಗಳು ಎಲ್ಲೆಂದರಲ್ಲಿ ಕಿತ್ತು ಹೋಗಿವೆ ಮತ್ತು ಮುಖ್ಯ ರಸ್ತೆಯ ಮಧ್ಯದಲ್ಲಿ ಹಾಕಿರುವ ಡಿವೈಡರ್ ಗಳು ಕಿತ್ತು ಹೋಗಿರುವ ಘಟನೆ ನಡೆದರೂ ಕೂಡ ಪಟ್ಟಣ ಪಂಚಾಯತಿ ಮಾತ್ರ ನಿದ್ದೆ ಮಾಡುತ್ತಿರುವದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಜನರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕುವ ಮುನ್ನವೇ ನೀರು ಪೋಲಾಗುವುದನ್ನು ತಪ್ಪಿಸಬೇಕು, ಕೆಲ ವಾರ್ಡುಗಳಲ್ಲಿ ಹತ್ತು ದಿನಕೊಮ್ಮೆ ನೀರು ಬಿಡುವುದನ್ನು ಸರಿಪಡಿಸಬೇಕು ಪಟ್ಟಣದ ತುಂಬೆಲ್ಲ ತುಂಗಭದ್ರಾ ನೀರನ್ನು ಮಿಡಬೇಕು ಎಂದು ಜನರ ಒತ್ತಾಯವಾಗಿದೆ.
ವರದಿ: ಸಿಎಂ ಗಂಗಾಧರ




