ಸೇಡಂ: ಸುಮಾರು ಏಳನೆಯ ಶತಮಾನದಲ್ಲಿ ಕ್ರಿ,ಶ ೬೮೦ರಲ್ಲಿ ನಡೆದ ಕಾರ್ಬಲಾ ಕದನದಲ್ಲಿ ಮರಣ ಹೊಂದಿದ ಪ್ರವಾದಿ ಮಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ರವರ ಸವಿ ನೆನಪಿಗಾಗಿ ಶೋಕದ ದಿನವನ್ನು ಆಚರಿಸುವ ಹಬ್ಬವೇ ಮೊಹರಂ ಹಬ್ಬವಾಗಿದೆ.
ತಾಲೂಕಿನ ಸಿಲಾರಕೊಟ್, ನಾಡೆಪಲ್ಲಿ, ಮೆದಕ್, ರಿಬ್ಬನ್ ಪಲ್ಲಿ ಮುಧೋಳ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಮುದಾಯದವರು ಭಾವೈಕತೆಯಿಂದ ಸಡಗರ ಸಂಭ್ರಮದಿಂದ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಧರ್ಮದ ಉಳಿವಿಗಾಗಿ ಧರ್ಮ ವಿರೋಧಿಗಳ ಜೊತೆ ಪರಿವಾರದ ೭೦ ಜನ ಸದಸ್ಯರು ಕರ್ಬಲಾ ಮೈದಾನದಲ್ಲಿ ಇಮಾಮ್ ಹುಸೇನರು ೧೦ದಿನಗಳ ಕಾಲ ಯುಜಿದನೆಂಬುವವನು ಹಾಗೂ ಅವರಸೈನಿಕರ ವಿರುದ್ಧ ಹೋರಾಟ ಮಾಡಿ ತಮ್ಮ ವೀರಗತಿಯನ್ನು ಹೊಂದುತ್ತಾರೆ, ಅವರ ಸವಿನೆನಪಿಗಾಗಿ ಮುಸ್ಲಿಮರು ಬಲಿದಾನದ ಪ್ರತೀಕವಾಗಿ ಜಗತ್ತಿನಾದ್ಯಂತ ಮೊಹರಂ ಹಬ್ಬ ಆಚರಿಸಲಾಗುತ್ತದೆ ಎಂದು ಮುಸ್ಲಿಂ ಭಾಂದವರು ಭಾರತ ವೈಭವ ವರದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ದಾಮೋದರ್ ರೆಡ್ಡಿ ಪಾಟೀಲ್ ಸಿಲಾರಕೊಟ್, ಮೆದಕ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಡಾ. ಮಧುಸೂಧನ್ ರೆಡ್ಡಿ ಪಾಟೀಲ್, ಪ್ರಕಾಶ್ ಗೌಡ್, ಮಹೀಪಾಲ್ ರೆಡ್ಡಿ, ಭೀಮರೆಡ್ಡಿ, ಯಾಕೂಬ್ ಅಲಿ, ಸಿದ್ದಯ್ಯ ಸ್ವಾಮಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್