ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸೇಡಂ ವಿಧಾನ ಸಭಾ ಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪಂಚಲೋಹ ಪ್ರತಿಮೆ ಅನಾವರಣ ಕಾರ್ಯಕ್ರಮ ಸುಲೇಪೇಟ್ ನಲ್ಲಿ ಆಯೋಜಿಸಲಾಯಿತು.
ಈ ಒಂದು ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದವರು ಪೂಜ್ಯ ಜ್ಞಾನ ಪ್ರಕಾಶ್ ಸ್ವಾಮೀಜಿ ಉರಿಲಿಂಗ ಪೆದ್ದಿ ಸಂಸ್ಥಾನ ಮಠ ಮೈಸೂರು. ಪೂಜ್ಯ ಭಂತೆ ಜ್ಞಾನ ಸಾಗರ ಬುದ್ಧ ವಿಹಾರ ಅಣದೂರ. ಉದ್ಘಾಟಕರಾಗಿ ಪ್ರಿಯಾಂಕ ಖರ್ಗೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವ ಹಾಗೂ ಕಲ್ಬುರ್ಗಿ ಉಸ್ತುವಾರಿ ಸಚಿವ ಕಲಬುರಗಿ ಡಾ.ಶಾಂತ್ ಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವ ಬೆಂಗಳೂರು.ಜ್ಯೋತಿ ಬೆಳಗಿಸುವರು.
ಜಗದೇವ ಗುತ್ತೇದಾರ ವಿಧಾನ ಪರಿಷತ್ತಿನ ಸದಸ್ಯರು ಕಲ್ಬುರ್ಗಿ.ಸುಭಾಷ್ ರಾಠೋಡ್. ರಾಜಕುಮಾರ ಪಾಟೀಲ್.ಗೋಪಾಲರಾವ ಕಟ್ಟಿಮನಿ.ಸಂತೋಷ ರಾಠೋಡ್.ಭೀಮರಾವ ಟಿ.ಟಿ.ಸಂಜೀವನ್ ಯಾಕಾಪೂರ್.ಸರಸ್ವತಿ. ಎಮ್.ಗಿರಿ.ಕಮಲಮ್ಮ ರಾಮತೀರ್ಥಕರ್. ಬಾಬಣ್ಣ ಗುಲಗುಂಜಿ,ಶಾಮರಾವ್ ಮಾದೇಶಿ. ಅಶೋಕ್ ಗುಲಗುಂಜಿ.ಜೈವಂತ ಗಿರಿ. ನಾಗರಾಜ್ .ಮಲ್ಲಿಕಾರ್ಜುನ ಪಾಳಾದಿ.ಮಹೇಶ್ ಮಾದೇಶಿ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿಕರಾವ.ಗುಲಗುಂಜಿ ನಿರೂಪಣೆಯನ್ನು ಅಶೋಕ್ ಹೂವಿನಬಾವಿ ಕಾರ್ಯಕ್ರಮದ ಅತಿಥಿಗಳಿಗೆ ಸ್ವಾಗತ ಮಲ್ಲಿಕಾರ್ಜುನ್ ಗುಲಗುಂಜಿ ಮುಂತಾದವರು ಉಪಸ್ಥಿತಿ ಇದ್ದರು.
ಪಂಚಲೋಹ ಅನಾವರಣದಲ್ಲಿ ಸುಲೇಪೇಟ್ ಗ್ರಾಮದ ಸುತ್ತಮುತ್ತಲಿನ ದಲಿತ ಸಮಾಜದ ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದಿರುವಂತ ಜನರಿಗೆ ಸನ್ಮಾನ .ಹಾಗು ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ನಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಜ್ಞಾನ ಪ್ರಕಾಶ್ ಅನಿಸಿಕೆ ಗ್ರಾಮದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಪಂಚಲೋಹದಿಂದ ಅನಾವರಣ ಮಾಡಿದ್ದಕ್ಕೆ ಸುತ್ತ ಮುತ್ತಲಿನ ಗ್ರಾಮದ ಜನರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತಂದು ಕೊಟ್ಟಿದ್ದಕ್ಕೆ ಅವರಿಗೆ ಅಭಿನಂದನೆಗಳು ಹಾಗೂ ಪಂಚಲೋಹದ ಮೂರ್ತಿಯನ್ನು ಅನಾವರಣ ಮಾಡಿದ ಅಂಬೇಡ್ಕರ್ ಅಭಿಮಾನಿಗಳಿಗೆ ಕೂಡ ಅಭಿನಂದನೆಗಳು ಆದರೆ ಈ ಮೂರ್ತಿಗಳನ್ನು ಬೀದಿಬೀದಿಗಳಲ್ಲಿ ಮೂಲೆಗಳಲ್ಲಿ ಸಂಧಿಗಳಲ್ಲಿ ಹೀಗೆ ಅನೇಕ ಜಾಗಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡುವುದರ ಬದಲು ಇಂಥ ಒಂದು ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಜ್ಞಾನವನ್ನು ದಾರಿಯರಬೇಕಾದರೆ ಪುಸ್ತಕವನ್ನು ಹಂಚಬೇಕು ಇದರಿಂದ ಅಂಬೇಡ್ಕರ್ ಅವರ ವಿಚಾರಗಳನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಿದರೆ ಅಂಬೇಡ್ಕರ್ ಆಸೆಯಂತೆ ನನ್ನ ಜನರು ಅಸ್ಪೃಶ್ಯತೆಯಿಂದ ಹೋಗಲಾಡಿಸಬೇಕಾದರೆ ಅವರಿಗೆ ಶಿಕ್ಷಣದ ಕೊರತೆ ಇದೆ ಅದಕ್ಕಾಗಿ ಎಲ್ಲಾ ನನ್ನ ದಲಿತ ಬಾಂಧವರು ಎಂದು ಅಂಬೇಡ್ಕರ್ ಆಸೆಯಾಗಿತ್ತು ಅದಕ್ಕಾಗಿ ಪ್ರತಿಯೊಬ್ಬರು ಇಂಥ ಒಂದು ಜಯಂತಿ ಆಚರಣೆ ಮಾಡುವುದು ಅದರಲ್ಲಿ ಸೌಂಡ್ ಮಾಸ್ಟರ್ ಹಚ್ಚುವುದರ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಹೆಂಡವನ್ನು ಹಾಳು ಮಾಡದೆ ಪುಸ್ತಕವನ್ನು ಹಂಚಿದರೆ ಜ್ಞಾನವು ಸಿಗುತ್ತೆ ಅಂಬೇಡ್ಕರ್ ಆಸೆ ಕೂಡ ಈಡೇರಿಸಲು ಸಾಧ್ಯವಾಗುತ್ತೆ ಅಂತ ಹೇಳಿದರು.ಹಾಗೂ ದೇಶದಲ್ಲಿ ದಲಿತ ವರ್ಗದವರ ಒಳ ಮೀಸಲಾತಿಯನ್ನು ಈಗಾಗಲೇ ಆರಂಭವಾಗಿದೆ ಒಳ ಮೀಸಲಾತಿ ನಮ್ಮ ರಾಜ್ಯದಲ್ಲಿ ಕೂಡ ಅನಿವಾರ್ಯವಾಗಿದೆ ಯಾರು ಎಷ್ಟು ಜನರಿದ್ದಾರೆ ಎಂಬುದು ಗುರುತಿಸಲು ಒಳಮೀಸಲಾತಿ ಅನಿವಾರ್ಯವಾಗಿದೆ ಜನಸಂಖ್ಯೆ ಆಧಾರದ ಮೇಲೆ ಅಂಬೇಡ್ಕರ್ ಅವರು ಮೀಸಲಾತಿ ಸಿಗಬೇಕೆಂಬುದು ಅವರ ಆಸೆಯಾಗಿತ್ತು. ಯಾರು ಹೆಚ್ಚಿನ ಪ್ರಮಾಣದಲ್ಲಿ ಜಾತಿ ಜನರಿದ್ದಾರೆ ಅವರಿಗೆ ಹೆಚ್ಚಿನ ಮೀಸಲಾತಿ ನೀಡಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿದೆ ಎಂದು ಹೇಳಿದರು ಶರಣಪ್ರಕಾಶ್ ಪಾಟೀಲ್ ಮಾತನಾಡಿ ಭಾರತ ಸಂವಿಧಾನವನ್ನು ಬಲಿಷ್ಠವಾದ ಸವಿಧಾನವಾಗಿದ್ದು ಅದನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅಷ್ಟೇ ಅಲ್ಲ ಸಂವಿಧಾನದ ಅಡಿಯಲ್ಲಿ ಎಲ್ಲಾ ಜನರು ಸಮಾನವಾಗಿ ನೋಡಿಕೊಳ್ಳಬೇಕೆಂದು ಸಂವಿಧಾನ ರಚನೆ ಮಾಡಿದರು.
ಕಾನೂನಿನ ಎದುರು ಎಲ್ಲರೂ ತಲೆಬಾಗಲೇಬೇಕು ಅಂಬೇಡ್ಕರ್ ಮಾಡಿರುವಂತಹ ಕಾನೂನು ಎಲ್ಲಾ ವರ್ಗದವರಿಗೂ ಒಂದೇ. ಮೇಲು ಕೀಳು ಎಂಬ ಭೇದಭಾವ ಇಲ್ಲದನೆ ಎಲ್ಲಾ ಜನರಿಗೆ ಒಂದೇ ಮತದಾನ ಹಕ್ಕು ನೀಡಿದ್ದಾರೆ. ನಂತರ ಪ್ರಿಯಾಂಕ ಖರ್ಗೆ ಮಾತನಾಡಿ. ಭಾರತ ದೇಶದಲ್ಲಿ ಅಸ್ಪೃಶ್ಯ ವರ್ಗದ ಸಮಸ್ಯೆಯನ್ನು ಅರಿತುಕೊಂಡಂತ ಅಂಬೇಡ್ಕರ್ ಅವರು ದೇಶವಿದೇಶಗಳಲ್ಲಿ ಹೋಗಿ ಎಲ್ಲಾ ದೇಶದ ಸಂವಿಧಾನಗಳನ್ನು ಓದಿಕೊಂಡು ನಂತರ ಭಾರತ ದೇಶದಲ್ಲಿ ಬೃಹತಾಕಾರದ ಸಂವಿಧಾನ ಬರೆದು ಅಸ್ಪೃಶ್ಯ ವರ್ಗದವರಿಗೆ ಯಾವುದೇ ರೀತಿಯಿಂದ ತೊಂದರೆಯಾಗದನೆ, ದೇಶದಲ್ಲಿರುವಂತ ಯಾರು ಅನೇಕ ಸಮಸ್ಯೆಗಳಿಗೆ ಅನೇಕ ತೊಂದರೆಗಳಿಗೆ ತುಳಿತಕ್ಕೆ ಒಳಗಾದಂತ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಸಂವಿಧಾನವನ್ನು ಬರೆದರು ದೇಶದಲ್ಲಿರುವಂತ ಪ್ರತಿಯೊಬ್ಬ ಹಿಂದುಳಿದ ವರ್ಗದವರಿಗೆ ಮೇಲೆ ಬರಲು ಅವರಿಗೆ ಮೀಸಲಾತಿ ಅವಶ್ಯಕತೆ ಎಂಬುದು ಎಲ್ಲಾ ವರ್ಗದವರಿಗೆ ಸರಿಸಮಾನವಾಗಿ ನೀಡಿದ್ದೆ ಸವಿಧಾನ ಕೇವಲ ಅಂಬೇಡ್ಕರ್ ಅಂದ ಕ್ಷಣ ದಲಿತ ವರ್ಗದವರಿಗೆ ಮಾತ್ರ ಮೀಸಲಿಲ್ಲ ಅಂಬೇಡ್ಕರ್ ಎಲ್ಲ ವರ್ಗದವರಿಗೆ ಸಮನಾಗಿದ್ದಾರೆ ಅದಕ್ಕಾಗಿ ಅಂಬೇಡ್ಕರ್ ಅವರ ವಿಚಾರಗಳು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಈ ಶಾಲು ಸನ್ಮಾನ ಸತ್ಕಾರ ಅವುಗಳ ಬದಲು ಪ್ರತಿಯೊಬ್ಬರು ಪುಸ್ತಕ ಓದಲು ಮುಂದಾಗಿರಿ ಅಂಬೇಡ್ಕರ್ ಅವರ ಆಸೆಯಂತೆ ತಾವು ಕೂಡ ಶಿಕ್ಷಣವಂತರಾಗಿರಿ ಶಿಕ್ಷಣದಿಂದಲೇ ಎಲ್ಲವನ್ನು ಸಾಧಿಸಲು ಸಾಧ್ಯವಾಗುತ್ತೆ ಎಂಬುದು ಅಂಬೇಡ್ಕರ್ ಅವರ ಆಸೆಯಾಗಿತ್ತು ಅದಕ್ಕಾಗಿ ದಲಿತ ವರ್ಗದವರು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣ ಓದಿ ಮುಂದುವರೆಯಬೇಕೆಂದು ಹೇಳಿದರು.
ವರದಿ: ಸುನೀಲ್ ಸಲಗರ