Ad imageAd image

ಕೆಲಸಕ್ಕೆ ಅಡ್ಡಿಯಾಯಿತಲ್ಲ ಈ ಹೈಟು!!

Bharath Vaibhav
ಕೆಲಸಕ್ಕೆ ಅಡ್ಡಿಯಾಯಿತಲ್ಲ ಈ ಹೈಟು!!
WhatsApp Group Join Now
Telegram Group Join Now

ಹೈದರಾಬಾದ್​: ಪ್ರಪಂಚದಲ್ಲಿ ಅತ್ಯಂತ ಎತ್ತರದ ವ್ಯಕ್ತಿ, ಅತ್ಯಂತ ಕುಬ್ಜ ವ್ಯಕ್ತಿಗಳೆಂದು ಗಿನ್ನೆಸ್​ ದಾಖಲೆಗಳನ್ನು ಮಾಡಿದವರಿದ್ದಾರೆ. ಆದರೆ ಈ ವ್ಯಕ್ತಿಗೆ ಆತನ ಎತ್ತರವೇ ಮುಳುವಾಗಿ ಪರಿಣಮಿಸಿದೆ. 7 ಅಡಿ ಎತ್ತರವಿರುವ ಇವರು ವೃತ್ತಿಯಲ್ಲಿ ಬಸ್​ ಕಂಡಕ್ಟರ್​. ಬಸ್ಸಿನ ಒಳಗೆ 6 ಅಡಿ ಎತ್ತರವಿದೆ. ಹಾಗಾಗಿ ಇವರು ಕರ್ತವ್ಯದಲ್ಲಿರುವಾಗಲೆಲ್ಲ ಕುತ್ತಿಗೆಯನ್ನು ಅರ್ಧ ಬಗ್ಗಿಸಿಕೊಂಡೇ ಕೆಲಸ ಮಾಡುತ್ತಾರೆ.

ಮೇಲಿನ ಫೋಟೋದಲ್ಲಿ ನೀವು ನೋಡುತ್ತಿರುವ ವ್ಯಕ್ತಿಯ ಹೆಸರು ಅಮೀನ್ ಅಹ್ಮದ್ ಅನ್ಸಾರಿ. ಇವರು ಚಂದ್ರಾಯನಗುಟ್ಟದ ಶಾಹಿನಗರದ ನಿವಾಸಿ. ಇವರ ತಂದೆ ಹೈದರಾಬಾದ್​ನ ಕಾಚಿಗುಡ ಡಿಪೋದಲ್ಲಿ ಹೆಡ್​ ಕಾನ್​ಸ್ಟೆಬಲ್​ ಆಗಿ ಕೆಲಸ ಮಾಡುತ್ತಿದ್ದರು. 2021ರಲ್ಲಿ ಅನಾರೋಗ್ಯದ ಕಾರಣದಿಂದ ಅವರು ನಿಧನರಾದರು. ಅನುಕಂಪದ ನೇಮಕಾತಿಯಡಿಯಲ್ಲಿ ಇಂಟರ್ (ಪಿಯುಸಿ)​ ಪೂರ್ಣಗೊಳಿಸಿದ ಅನ್ಸಾರಿ ಅವರಿಗೆ ಮೆಹದಿಪಟ್ನಂ ಆರ್​ಟಿಸಿ ಡಿಪೋದಲ್ಲಿ ಕಂಡಕ್ಟರ್​ ಕೆಲಸ ಸಿಕ್ಕಿತು. ಅನ್ಸಾರಿ ಅವರಿಗೆ ಕೆಲಸ ಸಿಕ್ಕಿದ ಖುಷಿ ಒಂದೆಡೆಯಾದರೆ, 7 ಅಡಿ ಎತ್ತರದಿಂದಾಗಿ ಕರ್ತವ್ಯ ನಿರ್ವಹಿಸುವುದು ಒಂದು ಸವಾಲೇ ಆಗಿಹೋಯಿತು.

ದಯವಿಟ್ಟು ನನಗೆ ಬೇರೆ ಕೆಲಸ ಕೊಡಿ“: ನಾನು ದಿನಕ್ಕೆ ಸರಾಸರಿ 5 ಟ್ರಿಪ್‌ಗಳಂತೆ 10 ಗಂಟೆಗಳ ಕಾಲ ಬಸ್‌ಗಳಲ್ಲಿ ಪ್ರಯಾಣಿಸಬೇಕು. ಈ ಬಸ್ಸು 214 ಸೆಂ.ಮೀ ಅಗಲ ಮತ್ತು 195 ಸೆಂ.ಮೀ (6 ಅಡಿ 4 ಇಂಚು) ಎತ್ತರವಿದೆ. ನಾನು ಅದಕ್ಕಿಂತ ಎತ್ತರವಾಗಿರುವುದರಿಂದ ಮತ್ತು ಗಂಟೆಗಟ್ಟಲೆ ತಲೆ ಬಾಗಿಸಿ ಪ್ರಯಾಣಿಸುವುದರಿಂದ ಕುತ್ತಿಗೆ ಮತ್ತು ಬೆನ್ನು ನೋವು, ನಿದ್ರಾಹೀನತೆಯಿಂದ ಆಸ್ಪತ್ರೆಗಳಿಗೆ ಓಡಾಡಬೇಕಾಗಿದೆ ಎಂದು ಅನ್ಸಾರಿ ತಾವು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಜೊತೆಗೆ, ಉನ್ನತ ಅಧಿಕಾರಿಗಳು ಸ್ಪಂದಿಸಿ ಅವರಿಗೆ ಆರ್‌ಟಿಸಿಯಲ್ಲಿ ಬೇರೆ ಕೆಲಸ ನೀಡುವಂತೆ ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!