ಬೀದರ : ಅವಸಾನದಲ್ಲಿದೆ ಜೋಡೆತ್ತಿನ ಕೃಷಿ ಕಾಯಕ.
ಉಳಿಸಿಕೊಳ್ಳಬೇಕಾಗಿದೆ ಪ್ರತಿಯೊಬ್ಬ ನಾಗರಿಕ.
ಕೃಷಿ ಪ್ರಧಾನ ಕಾಯಕ ನಮ್ಮ ಭಾರತೀಯ ಸಂಸ್ಕಾರ.
ಕೃಷಿ ಜೋಡೆತ್ತುಗಳಿಗೆ ಸಿಗಬೇಕಿದೆ ದೊಡ್ಡ ಪುರಸ್ಕಾರ.
ಸಾಕೋಣ ಸರ್ವರ ಮನೆಯಲ್ಲಿ ಎತ್ತುಗಳು.
ಅವುಗಳ ಕಾಯಕದಿಂದ ನಮಗೆ ಅನ್ನದ ತುತ್ತುಗಳು.
ಮೂಕ ವೇದನೆಗೆ ಸ್ಪಂದಿಸುತ್ತಿಲ್ಲ ನಾವುಗಳು.
ಅಳಿಸದೆ ಉಳಿಸೋಣ ಜೋಡೆತ್ತುಗಳು.
ಮಾತು ಬರದಿದ್ದರೂ ಕಾಯಕದಲ್ಲಿ ತೋರಿಸಿದೆ ಪ್ರೀತಿ.
ನಾಡಿಗೆಲ್ಲ ಕಲಿಸಿದೆ ನೀ ಒಳ್ಳೆಯ ಕೃಷಿ ಕಾಯಕ ನೀತಿ.
ಸರ್ಕಾರ ಬರೆಯಬೇಕಾಗಿದೆ ಜೋಡೆತ್ತು ಕೃಷಿಕರ ಪ್ರೋತ್ಸಾಹ ಕತಿ.
ಆಗ ಕೃಷಿ ಕಾಯಕ ಮಾಡಲು ಕಟ್ಟುವರು ಎತ್ತು ಒಂದು ಜತಿ.
ಗಿಡ,ಮರ,ಗುಡ್ಡ ಬೆಟ್ಟ ನಾಶದಿಂದ ದೊಡ್ಡ ಆಪತ್ತು.
ಮಣ್ಣಿನ ಸತ್ವ ಉಳಿದರೆ ಮಾತ್ರ ಉಳಿಯುವುದು ನಮ್ಮ ಸಂಪತ್ತು.
ಕೃಷಿ ಕಾಯಕ ಉಳಿಯಬೇಕು ಧರೆಯಲಿ ಚಿರಕಾಲ.
ಎಷ್ಟೇ ತಂತ್ರಜ್ಞಾನವಿದ್ದರೂ ಜೋಡೆತ್ತು ಕೃಷಿಯಿಂದಲೆ ಉಳಿಗಾಲ.
ಸರ್ವರೂ ಕೂಡಿ ನಿರ್ಮಿಸೋಣ ಒಳ್ಳೆ ಪ್ರಜಾಪ್ರಭುತ್ವ.
ಈಗಲೇ ಅರಿಯೋಣ ಕೃಷಿತನದ ಮಹತ್ವ.
ನಂದಿ ಕೃಷಿ ವಿದ್ಯೆಯನ್ನು ಪಠ್ಯ ಪುಸ್ತಕಗಳಲ್ಲಿ ಬರುವಂತೆ ನಿರ್ಮಿಸೋಣ.
ಜೋಡೆತ್ತಿನ ಕೃಷಿಯಿಂದ ಮಾದರಿ ದೇಶವನ್ನಾಗಿ ಬೆಳೆಸೋಣ.
ರಾಜಶ್ರೀ.ಬಸಪ್ಪ.ಬಿದರಿ.
ಜತ್ – ಮಹಾರಾಷ್ಟ್ರ.
ವರದಿ : ಸಂತೋಷ ಬಿಜಿ ಪಾಟೀಲ




