Ad imageAd image

ಪತ್ರಕರ್ತರಾದವರು ನಮ್ಮ ಸುತ್ತಮುತ್ತಲಿನ ನಡೆಯುವ ಸಮಾಜ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ

Bharath Vaibhav
ಪತ್ರಕರ್ತರಾದವರು ನಮ್ಮ ಸುತ್ತಮುತ್ತಲಿನ ನಡೆಯುವ ಸಮಾಜ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ
WhatsApp Group Join Now
Telegram Group Join Now

ಚಾಮರಾಜನಗರ :-ಪತ್ರಕರ್ತರಾದವರು ನಮ್ಮ ಸುತ್ತಮುತ್ತಲಿನ ನಡೆಯುವ ಸಮಾಜ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬೇಕು ಎಮ್ ಆರ್ ಮಂಜುನಾಥ್

ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪತ್ರಕರ್ತರ ದಿನಾಚರಣೆ.ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎಮ್ ಆರ್. ಮಂಜುನಾಥ್ ಪ್ರತಿಯೋಂದು ಸುದ್ದಿಯು ಪ್ರಬುದ್ದತೆಯಿಂದ ಕೂಡಿರುವ ಹಾಗೆ ಮಾಡಬೇಕು.

ಯುವಕರು ಹೆಚ್ಚು ಪತ್ರಕರ್ತರಾಗಿದ್ದಿರ ಅಲ್ಲದೆ ನಿಮ್ಮ ಸಂಘದಿಂದ ಶಾಲಾ ಮಕ್ಕಳಿಗೆ ದಾನಿಗಳಿಂದ ಸಹಾಯ ಪಡೆದು ನೋಟ್ ಬುಕ್ ಗಳನ್ನು ಉಚಿತವಾಗಿ ನೀಡುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯವಾದುದ್ದು ನಿಮ್ಮ ಸಂಘದವರು ಹೊಸತನವನ್ನು ಪ್ರಾರಂಭಿಸಿದ್ದಿರ ಅದು ನಿರಂತರವಾಗಿ ನೆಡಯಲಿ ಆರ್ಥಿಕವಾಗಿ ನೀವು ಸಬಲರಾಗಿ ನಿಮ್ಮ ಸಂಘದ ಜೋತೆಯಲ್ಲಿ ಸದಾಕಾಲವೂ ನಾನಿರುವೆ ಎಂದು ಪತ್ರಕರ್ತರಿಗೆ ಅಭಯ ನೀಡಿದರು .2023-2024ನೇ ಸಾಲಿನ sslc ಯಲ್ಲಿ ತಾಲ್ಲೂಕು ಮಟ್ಟದಲ್ಲಿ ಗರಿಷ್ಟ ಅಂಕ ಗಳಿಸಿದ ಕ್ರಿಸ್ತರಾಜ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿನಿ ಕು ಸೃಜನ ಜೆ. ಸ್ವಾಮಿ. ಯವರಿಗೆ ಉದ್ಯಮಿ ಜಿ ನಾಗೇಶ್ ರವರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಸಾಧಕರಿಗೆ ಸಂಘದ ವತಿಯಿಂದ ಸನ್ಮಾನಗಳನ್ನು ಮಾಡಲಾಯಿತು .

ಇದೇ ಸಂದರ್ಭದಲ್ಲಿ ಶ್ರೀ ಸಾಲೂರು ಮಠದ ಕಿರಿಯ ಶ್ರೀ ಗಳಾದ ಆಲಂಬಾಡಿ ಮಠದ ಪೊನ್ನಾಚಿ ಸ್ವಾಮೀಜಿಗಳು ಆಶೀರ್ವಚನ ನೀಡಿದರು . ಇದೇ ಸಮಯದಲ್ಲಿ ರೈತ ಮುಖಂಡರುಗಳಾದ ಅಮ್ಜಾದ್ ಖಾನ್ ,ಚಂಗಡಿ ಕರಿಯಪ್ಪ ,ಎಂ ಹರೀಶ್ ಪೊನ್ನಾಚಿ ರಂಗಸ್ವಾಮಿ,ಉದ್ಯಮಿ ನಾಗೇಶ್ ,ಡಾಕ್ಟರ್ ಪ್ರಕಾಶ್ ,ವಿಜಯ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು .

ವರದಿ:- ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!