Ad imageAd image

ಪತ್ರಕರ್ತರ ನಡೆ ಕಪ್ಪತ್ತಗಿರಿ ಕಡೆ ಅಭಿಯಾನ

Bharath Vaibhav
ಪತ್ರಕರ್ತರ ನಡೆ ಕಪ್ಪತ್ತಗಿರಿ ಕಡೆ ಅಭಿಯಾನ
WhatsApp Group Join Now
Telegram Group Join Now

ಗದಗ:-ಕಪ್ಪತ್ತಗಿರಿ, ಸುವರ್ಣಗಿರಿ ಮತ್ತು ದ್ರೋಣಗಿರಿ ಎಂಬ ಹೆಸರಿನಿಂದ ಶುಶೋಭಿತವಾಗಿರುವ ಮತ್ತು “ಎಪ್ಪತ್ತು ಗಿರಿ ಗಳಿಗಿಂತ ಕಪ್ಪತ್ತಗಿರಿ ನೋಡು” ಹಾಗೂ “ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಲು” ಎಂದು ನಾಣ್ಣುಡಿಗಳನ್ನು ಹೊಂದಿರುವ ಪ್ರಕೃತಿಯ ಸಿರಿ, ಈ ನಾಡಿನ ಬಯಲು ಖಜಾನೆ , ಕೈಲಾಸದಿಂದ ಕೆಳಗಿಳಿದು ಬಂದು ಶಿವ ಪಾರ್ವತಿಯರು ಸಂಚರಿಸಿದ ಈ ನಾಡಿನ ಪುಣ್ಯಭೂಮಿ, ಈ ನಾಡಿನ ಜೀವನಾಡಿ, ಅತ್ಯಧಿಕ ಆಮ್ಲಜನಕವನ್ನು ಹೊಂದಿರುವ,

ಈ ನಾಡಿನ ಅಮೃತವಾಹಿನಿ, ನಡೆದಾಡಿದಲ್ಲೆಲ್ಲ ಕಬ್ಬಿಣದ ಕಲ್ಲು ಸಿಗುವ ಖನಿಜ ನಾಡು, ದಕ್ಷಿಣದ ಶಿಮ್ಲಾ ದಕ್ಷಿಣದ ಕಾಶ್ಮೀರ, ಹಸಿರು ಕಾಶಿ-ಸಸ್ಯ ಕಾಶಿ ಎಂದೆಲ್ಲ ಅನ್ವರ್ಥಕ ನಾಮಗಳನ್ನು ಹೊಂದಿರುವ ಕಪ್ಪತ್ತಗುಡ್ಡ ಕರ್ನಾಟಕದ ಅತ್ಯಮೂಲ್ಯ ಆಸ್ತಿ. ಕರ್ನಾಟಕದ ಗದಗ ಜಿಲ್ಲೆಯ ಗದಗ, ಶಿರಹಟ್ಟಿ ಮತ್ತು ಮುಂಡರಗಿ ಮೂರು ತಾಲೂಕು ಭೂಪ್ರದೇಶಗಳಲ್ಲಿ ಕಪ್ಪತ್ತಗುಡ್ಡ ಐತಿಹಾಸಿಕ ಅರಣ್ಯ ಪ್ರದೇಶ ವ್ಯಾಪಿಸಿದೆ, ಸುಮಾರು 80,000 ಎಕರೆ ಅರಣ್ಯ ಪ್ರದೇಶವನ್ನು ಹೊಂದಿರುವ ಔಷಧೀಯ ಸಸ್ಯಗಳ ಕಣಜ ಇದಾಗಿದೆ.

ಈ ಗುಡ್ಡದಲ್ಲಿ ನೂರಾರು ಪ್ರಭೇದದ ಔಷಧೀಯ ಸಸ್ಯಗಳನ್ನು ಗುರುತಿಸಲಾಗಿದೆ ಹೀಗೆಂದೇ ಇದನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ, ವನ್ಯಜೀವಿಧಾಮ ಎಂದು ಗುರುತಿಸಲಾಗಿದೆ, ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹಿಂದಿನ ಅರಣ್ಯ ಸಚಿವರಾಗಿದ್ದ ಸತೀಶ್ ಜಾರಕಿಹೊಳಿಯವರು ವಿಶೇಷ ಮತುವರ್ಜಿಯಿಂದಾಗಿ ಕಪ್ಪತ್ತಗುಡ್ಡದ ಸುತ್ತ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಅದೀಗ ಒಂದು ಕಿಲೋಮೀಟರ್ ವ್ಯಾಪ್ತಿಗೆ ಇಳಿದಿದೆ!!!!

ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಹಿಂದೆ ಬ್ರಿಟೀಷರು ಬಂಗಾರವನ್ನು ಪತ್ತೆ ಹಚ್ಚಿ ಬಂಗಾರದ ಗಣಿಗಾರಿಕೆಯನ್ನು ಹಲವು ದಶಕಗಳ ಕಾಲ ನಡೆಸಿ ಅಪಾರ ಸಂಪತ್ತನ್ನು ಲೂಟಿ ಮಾಡಿದರೆಂದು ಇತಿಹಾಸ ಹೇಳುತ್ತದೆ.ಸ್ವಾತಂತ್ರ್ಯ ಬಂದ ನಂತರ ಕೂಡ ದಶಕಗಳ ಕಾಲ ಇಲ್ಲಿ ಅಕ್ರಮ ಖನಿಜ ಗಣಿಗಾರಿಕೆ ನಡೆದ ಬಗ್ಗೆ ಹೇಳಲಾಗುತ್ತಿದೆ ನಂತರ ಇತ್ತೀಚೆಗೆ ನಡೆದ ಹಲವು ಹಂತಗಳ ಹೋರಾಟಗಳ ಪರಿಣಾಮ ಕಪ್ಪತ್ತಗುಡ್ಡ ಕಪ್ಪತ್ತಗುಡ್ಡವಾಗಿಯೇ ಉಳಿಯಿತು.

ಇಲ್ಲಿ ಸಂಜೀವಿನಿ ಸಸ್ಯ ಲಭ್ಯವಿದೆ ಎಂದು ಹೇಳಲಾಗುತ್ತಿದೆ, ಈಗಲೂ ಹಿಮಾಲಯದಲ್ಲಿನ ಋಷಿಮುನಿಗಳು ಬಂದು ಇಲ್ಲಿನ ಔಷಧೀಯ ಬೇರುಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆಂದು ಹೇಳಲಾಗುತ್ತದೆ.
ದಿನಾಂಕ: 27–11–1882 ರ(ಅಂದಿನ ಸರ್ಕಾರದ ಅಧಿಸೂಚನೆ ಸಂಖ್ಯೆ 8286) ರಲ್ಲಿಯೇ ಬ್ರಿಟಿಷ್ ಸರ್ಕಾರವು ಈ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶ.
ಕಪ್ಪತ್ತುಗುಡ್ಡ ಪ್ರದೇಶದಲ್ಲಿ ನೀರು ಇಂಗಿಸುವ , ಸಸ್ಯಗಳ ಬೆಳವಣಿಗೆಗೆ ಅನುಕೂಲ ಆಗುವ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಈ ಗುಡ್ಡ ಬೆಟ್ಟ ಪ್ರದೇಶಗಳಲ್ಲಿ ಹರಿಯುವ ಮಳೆ ನೀರನ್ನು ತಡೆದು ಇಂಗಿಸಲು ಬಾಂದಾರಗಳನ್ನು ನಿರ್ಮಿಸಲಾಗಿದೆ.

ಸಾವಿರಾರು ಟ್ರಂಚ್ ಗಳನ್ನು ನಿರ್ಮಿಸಲಾಗಿದೆ, ಒಣಕಲ್ಲ ಫರಿಸಿಗಳನ್ನು ನಿರ್ಮಿಸಲಾಗಿದೆ, ತನ್ಮೂಲಕ ಇಲ್ಲಿ ಸುರಿಯುವ ಮಳೆ ನೀರು ಹರಿದು ಹೋಗದಂತೆ ತಡೆದು ನೀರಿನ ಸಂರಕ್ಷಣೆ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಇದು ಸ್ವಾಗತಾರ್ಹ ಮತ್ತು ಪ್ರಶಂಸನೀಯ. ಇದರ ಪರಿಣಾಮವಾಗಿ ಕಪ್ಪತ್ತಗುಡ್ಡದಲ್ಲಿ ಹರಿಯುವ ಬತ್ತಿ ಹೋಗಿದ್ದ “ಬಂಗಾರದ ಹಳ್ಳ”ಇಂದು ಜುಳು-ಜುಳು ಹರಿಯುವ ನೀರಿನಿಂದ ಸಮೃದ್ಧವಾಗಿದೆ. ಬತ್ತಿ ಹೋಗಿದ್ದ ನೀರಿನ ಸೆಲೆಗಳಿಗೆ ಜೀವ ಬಂದಿದೆ, ಹತ್ತಾರು ಕೆರೆಗಳಲ್ಲಿ ನೀರು ತುಂಬಿಕೊಂಡಿದೆ, ಇದರಲ್ಲಿ ಹಲವು ಕೆರೆಗಳಲ್ಲಿ ಕಂಡು ಬರುವ “ಕೆಂಪು ನೀರು” ಆಕರ್ಷಣೀಯ.

ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಅಸಂಖ್ಯ ಪ್ರಮಾಣದಲ್ಲಿ ಗಿಡ ಮರಗಳು ನಾಶವಾಗುತ್ತಿರುವದು ಒಪ್ಪಿಕೊಳ್ಳುವ ವಿಚಾರವೇ ಅಲ್ಲ .ಅದು ಖಂಡಿತವಾಗಿಯೂ ನಿಲ್ಲಲೇಬೇಕು ಮತ್ತು ಅದನ್ನು ನಿಲ್ಲಿಸುವ ಕಾರ್ಯವು ಶ್ರೀಸಾಮಾನ್ಯನಿಂದಲೇ ಆಗಬೇಕು.ಬಳ್ಳಾರಿ ಮತ್ತು ಸೊಂಡೂರಿನ
ಸಂಪತ್ಭರಿತ ಗುಡ್ಡಗಳು ಬರಡಾದವು ಅಪಾರ ಸಂಪತ್ತು ಪರದೇಶದ ಪಾಲಾಯಿತು ಇಂತದ್ದೇ ಅನೇಕ ಕಡೆ ಈ ಹಿಂದೆ ನಡೆದಿದೆ ಈಗಲೂ ನಡೆಯುತ್ತಿರಬಹುದು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಳಿದು ಉಳಿಸಿರುವ ಸಂಪತ್ತನ್ನು ಕೂಡ ಕಳೆದುಕೊಳ್ಳುವ ಅಪಾಯವಿದೆ ಮುಂದಿನ ಪೀಳಿಗೆಗಾಗಿ ಸಂಪತ್ಭರಿತ ನಾಡನ್ನು ಉಳಿಸಿ ಬೆಳೆಸಿ ಹೋಗುವ ನೈತಿಕ ಜವಾಬ್ದಾರಿ ಸಮಕಾಲಿನರಾದ ನಮ್ಮೆಲ್ಲರದ್ದಾಗಿದೆ.

ಪ್ರತಿಯೊಂದನ್ನು ಪ್ರತಿ ಹಂತದಲ್ಲೂ ಸರಕಾರವೇ ಮಾಡಬೇಕು ಎಂದು ನಿರೀಕ್ಷಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಒಂದು ಉತ್ತಮವಾದ ಕಾರ್ಯಕ್ಕಾಗಿ ನಮ್ಮಿಂದಾದ ಅಳಿಲು ಸೇವೆ ಮಾಡಬೇಕು ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಮತ್ತು ಮೂಡಿಸುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು.ಪವನ ವಿದ್ಯುತ್ ಉತ್ಪಾದನೆಗಾಗಿ ಗಾಳಿಯಂತ್ರಗಳನ್ನು ಸ್ಥಾಪಿಸಿ ಅಪಾರ ಪ್ರಮಾಣದ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಇಡೀ ಪ್ರದೇಶದಲ್ಲಿ ಆರು ಮಠಗಳು ಇವೆ ಗಂಗಿಬಾವಿ ಮಠ , ಕಪತೇಶ್ವರ ಮಠ, ಮಡಿವಾಳೇಶ್ವರ ಮಠ, ಧವಳಗಿರಿ ಮಠ, ಮಹಾಲಿಂಗೇಶ್ವರ ಮಠ, ಮತ್ತು ನಂದಿವೇರಿ ಮಠ ಇದಲ್ಲದೆ ಹತ್ತಾರು ಹಳ್ಳಿಗಳು, ಲಂಬಾಣಿ ತಾಂಡಾಗಳು ಇಲ್ಲಿವೆ.

ವಿಶೇಷವಾಗಿ ಮಳೆಗಾಲದಲ್ಲಿ ಕಣ್ಮನ ತಣಿಸುವ ಈ ಅತ್ಯಂತ ಸುಂದರ ರಮಣೀಯ ಪ್ರದೇಶದ ವೀಕ್ಷಣೆಗಾಗಿ ಸಾವಿರಾರು ಪರ್ಯಟಕರು ಭೇಟಿ ನೀಡುತ್ತಿರುತ್ತಾರೆ ಇವರಿಂದಲೂ ಪರಿಸರಕ್ಕೆ ಹಾನಿಯಾಗದಂತೆ ಅರಣ್ಯ ಇಲಾಖೆ ಕಾಳಜಿ ವಹಿಸುವ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೇ ಮುಂದಾಗಿ ಆಸಕ್ತರಿಗಾಗಿ “ಟ್ರೆಕ್ಕಿಂಗ್” ವ್ಯವಸ್ಥೆ ಯನ್ನು ರೂ.120/- ಶುಲ್ಕದೊಂದಿಗೆ ಪ್ರಾರಂಭ ಮಾಡಿದೆ ಅರಣ್ಯ ಇಲಾಖೆಯ ಅಧಿಕಾರಿಗಳು 6 ಕಿಲೋಮೀಟರ್ ದೂರದ ” ಟ್ರೆಕ್ಕಿಂಗ್ “ಗಾಗಿ ಬರುವ ಪರ್ಯಟಕರೊಂದಿಗೆ ಇದ್ದು ಸೂಕ್ತ ಉಸ್ತುವಾರಿ ಬಯಸುತ್ತಿರುವುದು ಸ್ವಾಗತಾರ್ಹ.

ಒಟ್ಟಿನಲ್ಲಿ ಯಾವುದೇ ರೀತಿಯ ಹಾನಿ ಆಗಬಾರದು ಅದು ಯಥಾಸ್ಥಿತಿ ಹೀಗೆ ಉಳಿಯಬೇಕು ಈ ನಿಟ್ಟಿನಲ್ಲಿ ಸರ್ವಸಾಮಾನ್ಯರಲ್ಲಿ ಪ್ರಜ್ಞೆ ಮೂಡಿಸುವ ಕಾರ್ಯ ಆಗಬೇಕು,ಔಷಧೀಯ ಸಸ್ಯಗಳ ಲಭ್ಯತೆ ಮತ್ತು ಮಾನವನ ಆರೋಗ್ಯಕ್ಕೆ ಅವುಗಳ ಪ್ರಯೋಜನಗಳನ್ನು ಹೆಚ್ಚಿಸುವುದು
ಮತ್ತು ಪರಿಸರ-ಕ್ಷೇಮ ಕುರಿತು ಸರ್ವಸಾಮಾನ್ಯರಲ್ಲಿ ಪ್ರಜ್ಞೆ ಮೂಡಿಸಬೇಕು.ಔಷಧೀಯ ಸಸ್ಯಗಳ ಸುಸ್ಥಿರ ಬಳಕೆ,ಸಂರಕ್ಷಣೆ ಇಂದಿನ ಅಗತ್ಯವಾಗಿದೆ.

ಇತಿಹಾಸಪೂರ್ವ ಕಾಲದಿಂದಲೂ, ಔಷಧೀಯ ಸಸ್ಯಗಳು , ಗಿಡಮೂಲಿಕೆಗಳನ್ನು ಕಪ್ಪತ್ತಗುಡ್ಡದಲ್ಲಿ ಗುರುತಿಸಲಾಗಿದೆ .
ಇಲ್ಲಿ ಸಿಗುವ ಔಷಧೀಯ ಸಸ್ಯಗಳನ್ನು ಗಿಡಮೂಲಿಕೆಗಳನ್ನು ಸಾಂಪ್ರದಾಯಿಕ ವೈದ್ಯಕೀಯ ಅಭ್ಯಾಸಗಳಲ್ಲಿ ಬಳಸಲಾಗುತ್ತದೆ. ಇಲ್ಲಿನ ಔಷಧೀಯ ಸಸ್ಯಗಳನ್ನು ನೂರಾರು ರೋಗಗಳ ವಿರುದ್ಧ ರಕ್ಷಣೆಗಾಗಿ ಬಳಸಲಾಗುತ್ತದೆ. ಸಂಯುಕ್ತಗಳು (ಫೈಟೊಕೆಮಿಕಲ್ಸ್)
ಸಸ್ಯಾಹಾರಿ ಸಸ್ತನಿಗಳು ಇತ್ಯಾದಿ. ಔಷಧೀಯ ಸಸ್ಯಗಳು ಸುಪ್ರಸಿದ್ಧ ಮತ್ತು ಜನಪ್ರಿಯವಾಗಿವೆ.

ರಕ್ತದೊತ್ತಡ ಕಡಿತ, ಹೃದಯರಕ್ತನಾಳದ ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಆರೋಗ್ಯ ಪ್ರಯೋಜನಗಳು ರೋಗ ತಡೆಗಟ್ಟುವಿಕೆ, ಮತ್ತು ಅವುಗಳ ಉತ್ಕರ್ಷಣ ನಿರೋಧಕ ಚಟುವಟಿಕೆಯಿಂದಾಗಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವದು,ಸಂಕೀರ್ಣವಾದ ಮಲ್ಟಿವೇರಿಯಾಟೊವನ್ನು ನಿರ್ವಹಿಸಲು ಅತ್ಯಂತ ಕ್ರಿಯಾತ್ಮಕ, ಬಹುವ್ಯಾಲೆಂಟ್ ತಂತ್ರ ಶಾರೀರಿಕ ಅಸ್ವಸ್ಥತೆಗಳು ಮುಂತಾದ ಸಮಸ್ಯೆಗಳ ನಿವಾರಣೆಗೆ ಇಲ್ಲಿನ ಔಷಧೀಯ ಸಸ್ಯಗಳು.

ಉಪಯುಕ್ತವಾಗಿವೆ. ಅವುಗಳ ಪರಿಣಾಮಕಾರತ್ವವನ್ನು ಪರಿಶೀಲಿಸಲು ಜಾಗತಿಕವಾಗಿ ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ ಮತ್ತು ಕೆಲವು
ಸಂಶೋಧನೆಗಳು ಸಸ್ಯ ಆಧಾರಿತ ಔಷಧಗಳ ಉತ್ಪಾದನೆಗೆ ಕಾರಣವಾಗಿವೆ.
ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುವ ಅದ್ಭುತ ಸಸ್ಯ ಪ್ರಭೇದಗಳಿವೆ
ಆರ್ಥಿಕವಾಗಿ ಸೂಕ್ತವಾದ ಔಷಧೀಯ ಸಸ್ಯಗಳ ಕೃಷಿಗೆ ಅವತ್ತು ನೀಡುವುದು ಇಂದಿನ ಅಗತ್ಯವಾಗಿದೆ.ಹಸಿರು ಗಿಡಮೂಲಿಕೆ-ಆಧಾರಿತ ವಿಧಾನದ ಕಡೆಗೆ ಬದಲಾಗುವ ಅಗತ್ಯವಿದೆ.

ಔಷಧೀಯ ಸಸ್ಯಗಳು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳಾಗಿವೆ; ಒಂದು ವೇಳೆ ಅವು ಖಾಲಿಯಾದರೆ,ವರ್ತಮಾನ ಮತ್ತು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾದ ನಡೆಯಾಗುತ್ತದೆ ಹೀಗಾಗಿ ಇಲ್ಲಿನ ಅಮೂಲ್ಯ ಸಸ್ಯ ಸಂಪತ್ತನ್ನು ಉಳಿಸಿ ಇದನ್ನು ಪರಿಣಾಮಕಾರಿಯಾಗಿ ಬಳಸಿ ಅಭಿವೃದ್ಧಿಪಡಿಸುವ ಅಗತ್ಯ ಅತ್ಯಧಿಕವಾಗಿದೆ.ಕರ್ನಾಟಕವು ವೈವಿಧ್ಯಮಯ ಸಸ್ಯ ಸಂಪತ್ತನ್ನು ಮತ್ತು ಗಣನೀಯ ಸಂಖ್ಯೆಯ ಔಷಧೀಯ ಸಸ್ಯಗಳನ್ನು ಒಳಗೊಂಡಿವೆ
ಸಂಪನ್ಮೂಲಗಳು.

ಈ ಔಷಧೀಯ ಸಸ್ಯ ಸಂಪನ್ಮೂಲಗಳ ನೈಸರ್ಗಿಕ ಆವಾಸಸ್ಥಾನಗಳು, ಮುಖ್ಯವಾಗಿ ನೈಸರ್ಗಿಕ ಕಾಡುಗಳು, ಕಾಡು ಪ್ರದೇಶಗಳು ಅತಿಕ್ರಮಣಗಳನ್ನು ಎದುರಿಸುತ್ತಿವೆ ಕಾಡು ನಾಶವಾಗುತ್ತಿದೆ
ಇದರಿಂದಾಗಿ ಔಷಧೀಯ ಸಸ್ಯಗಳು ಅವುಗಳ ಗಣನೀಯ ಪ್ರಮಾಣದಲ್ಲಿ ಅಳಿವಿನಂಚಿನಲ್ಲಿವೆ ಬಹಳಷ್ಟು ಸಸ್ಯ ಪ್ರಭೇದಗಳು
ಈಗಾಗಲೇ ಕಳೆದುಹೋಗಿದೆ. ಇದು ಜೀವವೈವಿಧ್ಯದ ನಷ್ಟಕ್ಕೆ ಕಾರಣವಾಗಿದೆ .

ನೈಸರ್ಗಿಕ ಮತ್ತು ಮಾನವ ನಿರ್ಮಿತ ಅಪಾಯಗಳು, ಅತಿಯಾದ ಶೋಷಣೆ,ಜೈವಿಕ ಸಂಪನ್ಮೂಲಗಳ ನಾಶ, ಅರಣ್ಯನಾಶ, ಕಾಡು ಪ್ರಾಣಿಗಳ ಆವಾಸಸ್ಥಾನಗಳ ನಾಶ ಅವ್ಯಹತವಾಗಿ ನಡೆಯುತ್ತಿದ್ದು ಇದನ್ನೆಲ್ಲಾ ತಡೆದು ಸಂರಕ್ಷಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ.
ಕಪ್ಪತಗುಡ್ಡ ಶ್ರೀಮಂತ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಗದಗ ಜಿಲ್ಲೆಯ ಗಿರಿಧಾಮ,ಔಷಧೀಯ ಮತ್ತು ಆರೊಮ್ಯಾಟಿಕ್ ಸಸ್ಯಗಳು, ಅದರ ಹಚ್ಚ ಹಸಿರು ಮತ್ತು ವೈವಿಧ್ಯಮಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ.

ವನ್ಯಪ್ರಾಣಿಗಳು ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯವು 32,346 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ.ನದಿ ಪ್ರದೇಶಗಳು, ಕಾಡುಗಳು, ಕುರುಚಲು ಪ್ರದೇಶಗಳು ಸೇರಿದಂತೆ ವಿವಿಧ ಪರಿಸರ ವ್ಯವಸ್ಥೆಗಳನ್ನು ಹೊಂದಿದೆ.ಹುಲ್ಲುಗಾವಲುಗಳು. ಅಭಯಾರಣ್ಯವು 400 ಕ್ಕೂ ಹೆಚ್ಚು ಜಾತಿಯ ಔಷಧೀಯ ಸಸ್ಯಗಳನ್ನು ಹೊಂದಿದೆ.
ಕಪ್ಪತಗುಡ್ಡವು ವಿಶಿಷ್ಟವಾದ ಸಸ್ಯ, ಪ್ರಾಣಿ ಮತ್ತು ಅಮೂಲ್ಯವಾದ ನಿಧಿಯಾಗಿದೆ.ಅಳಿವಿನಂಚಿನಲ್ಲಿರುವ ಮತ್ತು ವಿನಾಶದ ಹಂತವನ್ನು ತಲುಪುತ್ತಿರುವ ಔಷಧೀಯ ಸಸ್ಯಗಳ ಗುರುತಿಸುವುದು, ಸಂರಕ್ಷಿಸುವುದು, ಪ್ರಚಾರ ಮಾಡುವುದು ಮತ್ತು ಎಲ್ಲ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಅರಣ್ಯ ಕೃಷಿ, ಔಷಧೀಯ ಸಸ್ಯಗಳ ಮೌಲ್ಯವರ್ಧನೆ,ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಹವಾಗುಣ ಅತ್ಯುತ್ತಮ ಪರಿಸರಕ್ಕೆ ಹೆಸರುವಾಸಿಯಾಗಿದೆ ಇಂತಹ ಅಮೂಲ್ಯ ಅದ್ವಿತೀಯ ಕಪ್ಪತಗುಡ್ಡದ,ಸಂರಕ್ಷಣೆ, ಕೃಷಿ, ಮೌಲ್ಯವರ್ಧನೆ ಮತ್ತು ಸುಸ್ಥಿರ ಬಳಕೆ,ಔಷಧೀಯ ಸಸ್ಯಗಳು ಅವುಗಳ ದೀರ್ಘಾವಧಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯ ಅತ್ಯಧಿಕವಾಗಿದೆ ಮತ್ತು ಇಲ್ಲದೆ ಅರಣ್ಯದಿಂದ ಖನಿಜಗಳ ಹೊರತೆಗೆಯಿಂದ ಅಂದರೆ ಹಿಂದೆ ನಡೆದ ಗಣಿಗಾರಿಕೆಯಿಂದ ಅರಣ್ಯ ಕೃಷಿ ಮತ್ತು ಸಂರಕ್ಷಣೆ ಜೀವವೈವಿಧ್ಯದ ನಷ್ಟಕ್ಕೆ ಕಾರಣವಾಯಿತು.ಕೃಷಿ ಅರಣ್ಯ, ಮೂಲಕ ಔಷಧೀಯ ಸಸ್ಯಗಳನ್ನು ಬೆಳೆಸುವುದು , ಮತ್ತು ಅವುಗಳಿಗೆ ಉತ್ತೇಜಿಸುವಂಥ ಯೋಜನೆಗಳನ್ನು ರೂಪಿಸಬೇಕಾಗಿದೆ.

ಮುರುಗೇಶ ಶಿವಪೂಜಿ,ಅಧ್ಯಕ್ಷ,ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿ.

ವರದಿ ದಾವಲ್ ಸೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!