ಧಾರವಾಡ: ಬಿ ಆರ್ ಟಿ ಎಸ್ ಮಾರ್ಗದಲ್ಲಿ ತೆರಳುತ್ತಿದ್ದ ಚಿಗರಿ ಬಸ್ ನಿಯಂತ್ರಣ ತಪ್ಪಿ ಧಾರವಾಡ ವಿದ್ಯಾಗಿರಿಯಲ್ಲಿನ ಜೆ ಎಸ್ ಎಸ್ ಕ್ಯಾಂಪಸ್ ನ ಒಳಗೆ ನುಗ್ಗಿರುವ ಘಟನೆ ನಡೆದಿದೆ.

ಇಂದು ರವಿವಾರ ರಜೆ ಇರುವ ಕಾರಣ ವಿದ್ಯಾರ್ಥಿಗಳು ಸ್ಥಳದಲ್ಲಿ ಇರಲಿಲ್ಲ, ಚಿಗರಿ ಬಸ್ ಗಳ ಅವಾಂತರ ಆಗಾಗ ನಡೆಯುತ್ತಲೇ ಇವೆ. ಈಗಾಗಲೇ ಹಲವು ಬಾರಿ ಚಿಗರಿ ಬಸ್ ಬಂದ್ ಮಾಡುವಂತೆಯೂ ಕೂಡ ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿವೆ.
ಎಷ್ಟೇ ಹೋರಾಟಗಳನ್ನ ಮಾಡುತ್ತ ಬಂದರೂ ಕೂಡಾ ಚಿಗರಿ ಬಸ್ ಗೆ ಕಡಿವಾಣ ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ನಗರ ಸಂಚಾರ ಠಾಣೆಯ ಪೊಲೀಸರು ದೌಡಾಯಿಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ವರದಿ: ವಿನಾಯಕ ಗುಡ್ಡದಕೇರಿ




