ಬೆಳಗಾವಿ : ಮೈಸೂರಿನ ಜೆ.ಎಸ್.ಎಸ್ ಮಹಾವಿದ್ಯಾಪೀಠ ಸಂಸ್ಥೆಯುಲ್ಲಿ ವಿಶೇಷಚೇತನರಿಗೆ ಅನೇಕ ಕೋರ್ಸ್ ಗಳ ಪ್ರವೇಶಾತಿ ಪ್ರಾರಂಭಿಸಲಾಗಿದೆ. ಆಸಕ್ತರು ಪ್ರವೇಶವನ್ನು ಪಡೆಯಬಹುದು ಎಂದು ಸಂಸ್ಥೆಯ ವಿಶೇಷ ಚೇತನರ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶಿವಕುಮಾರಸ್ವಾಮಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾತನಾಡಿದ ಅವರು, ಜೆ.ಎಸ್.ಎಸ್ ಮಹಾವಿದ್ಯಾಪೀಠ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದೆ. ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆ ಸಹಕಾರದಿಂದ ವಿಶೇಷ ಚೇತನರ ಪಾಲಿಟೆಕ್ನಿಕ್ ಸಂಸ್ಥೆಯನ್ನು ಸ್ಥಾಪಿಸಿದೆ. ಕಂಪೂಟರ್ ಸೈನ್ಸ್, ಇಂಜಿನಿಯರಿಂದ ಡಿಪ್ಲೊಮ, ಜ್ಯುವೆಲರಿ ಡಿಸೈನ್ & ಟಿಕ್ನಾಲಜಿ ಡಿಪ್ಲೊಮಾ, ಎಲೆಕ್ಟ್ರಾನಿಕ್ & ಕಮ್ಯುನಿಕೆಷನ ಇಂಜಿನಿಯರಿಂಗ ಡಿಪ್ಲೊಮ, ಕಂಪೂಟರ್ ಅಪ್ಲಿಕೆಷನ್ ಡಿಪ್ಲೊಮ, ಇನ್ನಿತರ ಹಲುವ ಕೊರ್ಸಗಳನ್ನು ಪ್ರಾರಂಭಿಸಲಾಗಿದೆ. ಅರ್ಹ ಸುಮಾರು 40 ಪ್ರತಿಷತ ವಿಶೇಷಚೇತನ ಹೊಂದಿರುವ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಬಹುದು. ಅರ್ಹ ವಿದ್ಯಾರ್ಥೀಗಳಿಗೆ ಕೇಂದ್ರ ಸರ್ಕಾರದಿಂದ ಸುಮಾರು 50 ಸಾವಿರ ವಿದ್ಯಾರ್ಥವೇತನ ದೊರೆಯುತ್ತದೆ. ವ್ಯಾಸಾಂಗ ಮುಗಿದ ನಂತರ ಸಂಸ್ಥೆಯ ಅರ್ಹರಿಗೆ ಉದ್ಯೊಗವನ್ನು ವದಗಿಸುವ ಕಾರ್ಯ ಮಾಡುತ್ತದೆ. ಪ್ರವೇಶ ಪಡೆಯಲು ಜೂನ್ 15 ಕೋನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ www.jsspda.org ಅಥವಾ 0821-2548315/316 ಮೊಬೈಲ್ ಸಂಖ್ಯೆ 9844644937 ಗೆ ಸಂಪರ್ಕಿಸಿ. ಭೇಟಿ ಕೋಡಿ. www.jsspda.org ನಲ್ಲಿ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬಹುದು.
ಈ ವೇಳೆ ಜೆ.ಎಸ್.ಎಸ್ ಮಹಾವಿದ್ಯಾಪೀಠ ಸಂಸ್ಥೆಯ ಬೆಳಗಾವಿ ಉಸ್ತುವಾರಿಯಾದ ರುದ್ರಪ್ಪಾ ಬನಶಂಕರಿ ಇತರರು ಉಪಸ್ಥಿತರಿದ್ದರು.
ವರದಿ : ಪ್ರತೀಕ ಚಿಟಗಿ