Ad imageAd image

ಜನಸ್ನೇಹಿ ಆಶ್ರಮಕ್ಕೆ 30 ಸಾವಿರ ಮೌಲ್ಯದ ದಿನಸಿ, ಔಷಧಿ ವಿತರಿಸಿದ ಇನ್ನರ್ ವೀಲ್ ಮಹಿಳೆಯರು

Bharath Vaibhav
ಜನಸ್ನೇಹಿ ಆಶ್ರಮಕ್ಕೆ 30 ಸಾವಿರ ಮೌಲ್ಯದ ದಿನಸಿ, ಔಷಧಿ ವಿತರಿಸಿದ ಇನ್ನರ್ ವೀಲ್ ಮಹಿಳೆಯರು
WhatsApp Group Join Now
Telegram Group Join Now

ತುರುವೇಕೆರೆ: ಪಟ್ಟಣದ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಮಹಿಳಾಮಣಿಗಳು ನೆಲಮಂಗಲ ಸೊಂಡೆಕೊಪ್ಪದ ಜನಸ್ನೇಹಿ ಆಶ್ರಮಕ್ಕೆ ಸುಮಾರು 30 ಸಾವಿರಕ್ಕೂ ಅಧಿಕ ಮೌಲ್ಯದ ಔಷಧಿ, ಮಾತ್ರೆಗಳು ಹಾಗೂ ಅಗತ್ಯ ದಿನಸಿ ಪದಾರ್ಥಗಳನ್ನು ವಿತರಿಸಿದರು.

ಬೆಂಗಳೂರಿನಲ್ಲಿ ನಡೆದ ಇಂಟರ್ಸಿಟಿ ಮೀಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ನೆಲಮಂಗಲ ಸೊಂಡೆಕೊಪ್ಪದ ಜನಸ್ನೇಹಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಅನಾಥ ಹಾಗೂ ನಿರ್ಗತಿಕ, ನಿರಾಶ್ರಿತ ಮಕ್ಕಳನ್ನು ದೇವರ ಮಕ್ಕಳೆಂದು ಭಾವಿಸಿ ನೋಡಿಕೊಳ್ಳುತ್ತಿರುವ ಆಶ್ರಮದ ಮುಖ್ಯಸ್ಥ ಯೋಗೇಶ್ ಅವರೊಂದಿಗೆ ಚರ್ಚಿಸಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು, ಆಶ್ರಮಕ್ಕೆ ಅಗತ್ಯವಿರುವ ಅಕ್ಕಿ, ತೆಂಗಿನಕಾಯಿ, ದಿನಸಿ ಪದಾರ್ಥಗಳು, ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಮಾತ್ರೆ, ಔಷಧಿ, ಬಿಸ್ಕೆಟ್, ಪಂಚೆ, ಬಟ್ಟೆಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಕ್ಲಬ್ ಸದಸ್ಯೆ ಆನಂದಮದನ್ ಅವರ ಜನ್ಮದಿನವನ್ನು ಮಕ್ಕಳೊಂದಿಗೆ ಆಚರಿಸಿ ಮಕ್ಕಳಿಗೆ ಸಿಹಿ ಹಂಚಲಾಯಿತು.

ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ನೇತ್ರಾ ಸಿದ್ದಲಿಂಗಸ್ವಾಮಿ, ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಕಾರ್ಯದರ್ಶಿ ಆನಂದಜಲ, ಸದಸ್ಯರಾದ ಡಾ.ಆಶಾಚೌದ್ರಿ, ಲಲಿತಾಪ್ರಕಾಶ್, ಪದ್ಮನಟರಾಜ್, ಮಮತಾಅಶೋಕ್, ದಿವ್ಯ, ಆನಂದಮದನ್, ಸುವರ್ಣಮ್ಮ, ವೀಣಾಮಂಜುನಾಥ್ ಸೇರಿದಂತೆ ಹಲವರು ಆಶ್ರಮಕ್ಕೆ ಭೇಟಿ ನೀಡಿ, ನೆರವು ನೀಡಿದರು.

ವರದಿ: ಗಿರೀಶ್ ಕೆ ಭಟ್, 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!